More

    ನೆಲಕ್ಕುರುಳಿದ ಬಾಳೆ, ಮಾವು ಫಸಲು

    ಅಕ್ಕಿಆಲೂರ/ ಗುತ್ತಲ: ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಹೋಬಳಿ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಾಳೆ ಮತ್ತು ಮಾವು ಬೆಳೆ ನಾಶವಾಗಿದೆ.

    ಅಕ್ಕಿಆಲೂರ, ತಿಳವಳ್ಳಿ ಮತ್ತು ಬೊಮ್ಮನಳ್ಳಿ ಭಾಗದಲ್ಲಿ ಸಾಕಷ್ಟು ಮಾವು ಮತ್ತು ಬಾಳೆ ಬೆಳೆ ನೆಲಕಚ್ಚಿದೆ. ವರ್ದಿ ಗ್ರಾಮದ ರಾಮಣ್ಣ ಹೊನ್ನಜ್ಜಪ್ಪನವರ ಎಂಬುವವರ ಒಂದು ಎಕರೆ ಜಮೀನಿನಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಬಾಳೆ ನಾಶವಾಗಿದೆ. ಅಕ್ಕಿಆಲೂರಿನ ರೈತರಾದ ಮಲ್ಲನಗೌಡ ಪಾಟೀಲ, ರಾಜೇಂದ್ರ ಚವಟಿ, ಕೊಟ್ರಪ್ಪ ಬೆಲ್ಲದ ಸೇರಿ ಅನೇಕ ರೈತರ ಹೊಲದಲ್ಲಿನ ಮಾವಿನ ಕಾಯಿಗಳು ಉದುರಿವೆ. ಕಳೆದ ವರ್ಷ ಅನಾವೃಷ್ಟಿಯಲ್ಲಿ ಬೆಳೆಹಾನಿ ನಂತರ ಕರೊನಾ ಲಾಕ್​ಡೌನ್​ನಿಂದ ಬೆಲೆ ಇಲ್ಲದೆ ತೊಂದರೆಗೆ ಒಳಗಾಗಿದ್ದ ರೈತರನ್ನು ಮಳೆ ಮತ್ತು ಗಾಳಿ ಚಿಂತೆಗೀಡು ಮಾಡಿದೆ. ಸರ್ಕಾರದಿಂದ ಅತಿವೃಷ್ಟಿ ಪರಿಹಾರವನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಮಹೇಶ ವಿರೂಪಣ್ಣನವರ ಒತ್ತಾಯಿಸಿದ್ದಾರೆ.

    ಗುತ್ತಲದಲ್ಲೂ ಬೆಳೆ ಹಾನಿ: ಗುರುರಾತ್ರಿ ರಾತ್ರಿ ಸುರಿದ ಮಳೆ-ಗಾಳಿಯಿಂದಾಗಿ ಪಟ್ಟಣ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜೋರಾದ ಗಾಳಿ ಬೀಸಿದ ಪರಿಣಾಮ ಪಟ್ಟಣದ ಜಯಪ್ಪ ಇಟಗಿ ಎಂಬುವವರ 2.5 ಎಕರೆಯಲ್ಲಿ 45ಕ್ಕೂ ಅಧಿಕ ಬಾಳೆ ಗಿಡಗಳು ಹಾಗೂ ಮಲ್ಕಪ್ಪ ಶಿವಪ್ಪ ಕೆಂಚಮಲ್ಲ ಎಂಬುವವರ ಬಾಳೆಯ ತೋಟದಲ್ಲಿ 30ಕ್ಕೂ ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿವೆ.

    ಬಸಾಪುರ ಗ್ರಾಮದಲ್ಲಿನ ಸಾವಯವ ಕೃಷಿಕ ನಾಗಪ್ಪ ಮುದ್ದಿ, ಬಮ್ಮನಕಟ್ಟಿ ಗ್ರಾಮದ ಶಾಂತವೀರಪ್ಪ ಹಳ್ಳಿಕೇರಿ ಹಾಗೂ ಹರಳಹಳ್ಳಿಯ ಎಸ್.ಎಚ್. ಅಂಬಿಗೇರ ಎಂಬುವವರ ಮಾವಿನ ತೋಟಗಳಿಗೆ ಹಾನಿಯಾಗಿದ್ದು, ಮಾವಿನ ಕಾಯಿಗಳು ಉದುರಿವೆ. ಕೆಲ ಮನೆ ಮತ್ತು ಅಂಗಡಿಗಳ ಮುಂದಿನ ತಗಡುಗಳು ಹಾರಿ ಹೋಗಿವೆ. ರಾಶಿ ಮಾಡಿದ್ದ ಮೆಕ್ಕೆಜೋಳ ಸೇರಿ ಸಂಗ್ರಹಿಸಿಟ್ಟಿದ ಧಾನ್ಯಗಳೂ ಹಾಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts