More

    ನೆಗೆಟಿವ್ ರಿಪೋರ್ಟ್​ನಿಂದ ತುಸು ನಿರಾಳ

    ಗದಗ: ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಗದಗ- ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಪಟ್ಟಣಗಳಲ್ಲಿ ಜನರು ಕೊಂಚ ನಿರಾಳರಾಗಿದ್ದಾರೆ.

    ಕರೊನಾ ವೈರಸ್ ಸಂಶಯದ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ವೈದ್ಯಕೀಯ ವರದಿಗಾಗಿ ಕಳುಹಿಸಿದ್ದ 8 ಪ್ರಕರಣಗಳ ಪೈಕಿ ಶನಿವಾರ ಮತ್ತೆರಡು ಪ್ರಕರಣಗಳಲ್ಲಿ ಕರೊನಾ ವೈರಸ್ ಇಲ್ಲ ಎಂದು ದೃಢಪಟ್ಟಿದ್ದರಿಂದ ಜನರು ನಿಟ್ಟಿಸಿರುಬಿಟ್ಟಿದ್ದಾರೆ. ಜಿಲ್ಲೆಯ ಒಟ್ಟು ಎಂಟು ಸಂಶಯಾಸ್ಪದ ಪ್ರಕರಣಗಳ ಪೈಕಿ ಆರು ಪ್ರಕರಣಗಳ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದಿದೆ. ಈಗಾಗಲೇ ಆರು ಪ್ರಕರಣಗಳು ನೆಗಟಿವ್ ಎಂದು ಬಂದಿದ್ದು, ಇನ್ನೂ ಇಬ್ಬರ ವೈದ್ಯಕೀಯ ವರದಿ ಬರಬೇಕಿದೆ.

    ಚಿತ್ರಮಂದಿರ, ಮಾಲ್​ಗಳು, ಶಾಲೆ- ಕಾಲೇಜ್​ಗಳು ಆಗಿದ್ದು, ಆತಂಕ ಕೊಂಚ ದೂರವಾಗಿದ್ದರಿಂದ ಜನಜೀವನ ಯಥಾಪ್ರಕಾರ ಮುಂದುವರಿದೆ. ಕೆಲವರು ವೈರಸ್​ಗೆ ಹೆದರಿ ಮನೆ ಬಿಟ್ಟು ಹೊರಗೆ ಬರಲು ಅಂಜುತ್ತಿದ್ದಾರೆ.

    ಮುಂಜಾಗ್ರತಾ ಕ್ರಮ: ಕರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ಕೆಮ್ಮುವುದು, ಸೀನುವುದು ಸೇರಿ ಇತರೆ ಲಕ್ಷಣಗಳಿದ್ದರೆ ಜನರು ಉದಾಸೀನ ಮಾಡದೆ ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಕರೊನಾ ವೈರಸ್ ಕುರಿತು ಭಯಪಡುವ ಅಗತ್ಯವಿಲ್ಲ. ಆದರೆ, ಖಂಡಿತವಾಗಿ ಎಚ್ಚರಿಕೆಯಿಂದ ಇರಲೇಬೇಕು ಎಂದು ವೈದ್ಯಾಧಿಕಾರಿಗಳು ಸೋಮವಾರ ಸಹ ಮನವಿ ಮಾಡಿಕೊಂಡಿದ್ದಾರೆ.

    ಕರೊನಾ ಪೀಡಿತ ದೇಶಗಳಿಂದ ಜಿಲ್ಲೆಗೆ ಆಗಮಿಸಿರುವ ಒಟ್ಟು 53 ಪ್ರಯಾಣಿಕರನ್ನು ಅವರ ಮನೆಗಳಲ್ಲೇ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಎಲ್ಲರೂ ಆರೋಗ್ಯದಿಂದ ಇದ್ದು, ಅವರಿಗೆ ಆರೋಗ್ಯ ತಪಾಸಣೆ ಮುಂದುವರಿಸಲಾಗಿದೆ.

    ಅಲ್ಲದೆ, ಕಳೆದೆರಡು ದಿನಗಳ ಹಿಂದೆ ನರಗುಂದ ಮೂಲದ ಇಬ್ಬರು ಹಂಪಿ ಎಕ್ಸ್ ಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದ್ದು, ಈ ಇಬ್ಬರು ಪ್ರಯಾಣಿಕರಿದ್ದ ಬೋಗಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಇದ್ದರು ಎಂಬ ಕಾರಣಕ್ಕೆ ಅವರ ತಪಾಸಣೆಗೆ ಒಳಪಡಿಸಲಾಗಿದ್ದು, ಅವರಿಬ್ಬರ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಮಂಗಳವಾರ ಅವರ ವೈದ್ಯಕೀಯ ಪರೀಕ್ಷೆ ವರದಿ ಬರುವ ನಿರೀಕ್ಷೆ ಇದೆ.

    ಕಾರ್ಯಕ್ರಮ ಮುಂದೂಡಿಕೆ:

    ಗದಗ: ತಾಲೂಕಿನ ಬೆಳಹೊಡ ಗ್ರಾಮದಲ್ಲಿ ಮಾ. 22ರಂದು ನಡೆಯಬೇಕಿದ್ದ ರೇವಣಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ, ಚನ್ನಬಸಪ್ಪ ಯಲ್ಲಪ್ಪ ಲಿಂಗನಾಯ್ಕರ ಕಲ್ಯಾಣ ಮಂಟಪ ಮತ್ತು ರೇವಣಸಿದ್ಧೇಶ್ವರ ಸಂಸ್ಕೃತಿ ಭವನ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ರೇವಣಸಿದ್ಧೇಶ್ವರ ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ಮುತ್ತಪ್ಪ ಕರಿಯವರ, ಕಾರ್ಯದರ್ಶಿ ಗುರುನಾಥ ಹುಲಗಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ‘ನರಗುಂದ ಬಂಡಾಯ’ ಪ್ರದರ್ಶನ ಸ್ಥಗಿತ

    ನರಗುಂದ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾ. 12ರಂದು ಬಿಡುಗಡೆಗೊಂಡಿದ್ದ ನರಗುಂದ ಬಂಡಾಯ ಚಲನಚಿತ್ರ ಪ್ರದರ್ಶನವನ್ನು ಒಂದು ವಾರದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಮರು ಆದೇಶ ಮಾಡಿದಲ್ಲಿ ಮುಂದಿನ ವಾರದಿಂದ ರಾಜ್ಯದ ಎಲ್ಲ ಚಿತ್ರ ಮಂದಿರಗಳಲ್ಲಿ ಮತ್ತೆ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರ ನಿರ್ವಪಕ ಸಿದ್ದೇಶ ವಿರಕ್ತಮಠ ತಿಳಿಸಿದರು.

    ಪಟ್ಟಣದ ಶ್ರೀ ರೇಣುಕಾ ಚಿತ್ರ ಮಂದಿರಕ್ಕೆ ಭಾನುವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರವನ್ನು ರಾಜ್ಯದ 125 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಸಮಾಜ ಮುಖಿಯಾಗಿರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದಾಗಿದೆ ಎಂದರು.

    ನಟಿ ಶುಭಾ ಪೂಂಜಾ ಮಾತನಾಡಿದರು. ನಟ ರಕ್ಷ್, ಎಸ್.ಎಂ. ಮರಿಗೌಡ್ರ, ಭವ್ಯ, ಸಂಗೀತಾ, ವಿಜಯ ಕುಲಕರ್ಣಿ, ಶಿವಕುಮಾರ, ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ವಿಜಯ ಕೋತಿನ, ಗಿರೀಶ ನೀಲರೆಡ್ಡಿ, ಅಂಬಾನ ಅಳಗವಾಡಿ, ಮಲ್ಲಿಕಾರ್ಜುನ, ಕೆ. ಬಸವರಾಜ, ಯಶೋವರ್ಧನ್, ರವಿಚೇತನ್, ಸುರೇಶ ರಾಜ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts