More

    ನೂತನ ರಾಯರ ಮಠದ ಶಿಲಾನ್ಯಾಸ 26ಕ್ಕೆ

    ಯಾದಗಿರಿ: ಬೆಂಗಳೂರಿನ ಅನುಗ್ರಹ ಫೌಂಡೇಶನ್ ವತಿಯಿಂದ ನಗರದ ಹೊರ ವಲಯದಲ್ಲಿನ ರಾಚೋಟ್ಟಿ ವೀರಣ್ಣ ದೇವಸ್ಥಾನ ಸಮೀಪ ಅ.26ರಂದು ಸಂಜೆ 4 ಗಂಟೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ನೂತನ ಮಠದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಟ್ರಸ್ಟಿ ಗುರುರಾಜ ಚಿತ್ತಾಪುರಕರ್ ತಿಳಿಸಿದರು.

    ಅಂದು ಸಂಜೆ 7ರಿಂದ 10ರ ವರೆಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನೆರವೇರಿಸಲಾಗುವುದು. ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಲಿದ್ದಾರೆ. ಅಬ್ಬೆತುಮಕೂರಿನ ಡಾ.ಗಂಗಾಧರ ಮಹಾಸ್ವಾಮಿಗಳು ಹಾಗೂ ಮೈಸೂರಿನ ಯೋಗ ನರಸಿಂಹ ದೇವಸ್ಥಾನ ಸಂಸ್ಥಾನದ ಡಾ.ಭಾಶ್ಯಂ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಡಾ.ಅಜಯ್ಸಿಂಗ್, ಅಲ್ಲಂಪ್ರಭು ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಎಂಎಲ್ಸಿ ಶಶೀಲ್ ನಮೋಶಿ, ಅಸಗೋಡು ಜಯಸಿಂಹ, ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್, ಅಪ್ಪುಗೌಡ ಪಾಟೀಲ್ ಆಗಮಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಅನುಗ್ರಹ ಫೌಂಡೇಶನ್ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಭಾಗವಾಗಿ ರಾಯರ ಮಠ ನಿಮರ್ಾಣ ಮಾಡಲಾಗುತ್ತಿದ್ದು, ಒಟ್ಟು 4 ಮಹಡಿಯ ಈ ಕಟ್ಟಡ ಹಲವು ವಿನ್ಯಾಸಗಳಿಂದ ನಿಮರ್ಿಸಲಾಗುತ್ತಿದೆ. ಮುಖ್ಯದ್ವಾರದಲ್ಲಿ ಗೋಮಾತಾ ಪೂಜೆಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಮೊದಲ ಮಹಡಿಯಲ್ಲಿ ಯೋಗ, ಪೂಜಾ ಸಭಾಂಗಣ ಒಳಗೊಂಡಿದೆ. ಭಕ್ತರಿಗೆ ತಂಗಲು ಅತ್ಯಾಧುನಿಕ ವ್ಯವಸ್ಥೆಯ ಕೋಣೆಗಳನ್ನು ನಿಮರ್ಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಅನುಗ್ರಹ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts