More

    ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ: ನೌಕರರ ಮನವಿ

    ಹೊಸನಗರ: ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನು ವಿಸ್ತರಿಸುವ ಮೂಲಕ ಏಕರೂಪ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ತಾಲೂಕು ಎನ್‌ಪಿಎಸ್ ನೌಕರರ ಸಂಘ ಆಗ್ರಹಿಸಿದೆ.
    ಪಟ್ಟಣದಲ್ಲಿ ಶನಿವಾರ ಶಾಸಕ ಹರತಾಳು ಹಾಲಪ್ಪ ಅವರಿಗೆ ಮನವಿ ಸಲ್ಲಿಸಿದ ನೌಕರರ ಪ್ರತಿನಿಧಿಗಳು ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮನವಿ ಮಾಡಿದರು.
    2006ರ ನಂತರದಲ್ಲಿ ನೌಕರಿಗೆ ಸೇರಿದವರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ನೌಕರರ ನಿವೃತ್ತ ಯೋಜನೆಗೆ ಮಾರಕವಾಗಿದೆ. ವೇತನದಲ್ಲಿ ಶೇ.30 ಕಡಿತಮಾಡಿ ಶೇ.14 ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಪಿಂಚಣಿ ನೀಡುವ ಯೋಜನೆಯಾಗಿದೆ. ಷೇರು ಮಾರುಕಟ್ಟೆಯ ಏರಿಳಿತದ ಅನ್ವಯ ಪಿಂಚಣಿ ಬರಲಿದೆ. ಪ್ರತಿ ತಿಂಗಳು ಒಂದೇ ರೀತಿ ಪಿಂಚಣಿ ಬರುವುದಿಲ್ಲ ಎಂದು ಆರೋಪಿಸಿದರು.
    ಎನ್‌ಪಿಎಸ್ ನೌಕರರು ಕರೊನಾ ಹೊಡೆತದಿಂದ 50 ಸಾವಿರದಿಂದ 80 ಸಾವಿರ ರೂ. ಕಳೆದುಕೊಂಡಿದ್ದಾರೆ. ಇದನ್ನು ವಿರೋಧಿಸಿ ಪಾದಯಾತ್ರೆ ಸೇರಿದಂತೆ ಹಲವು ಹೋರಾಟ ಮಾಡಿದರು ಕೂಡ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
    ಮನವಿ ಸ್ವೀಕರಿಸಿದ ಹರತಾಳು ಹಾಲಪ್ಪ, ನೌಕರರ ಸಾಧಕ ಬಾಧಕಗಳ ಬಗ್ಗೆ ಅರಿವಿದೆ. ಸರ್ಕಾರ ಮಟ್ಟದಲ್ಲಿ ಗಮನಸೆಳೆಯುವ ಭರವಸೆಯನ್ನು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts