More

    ನೂತನ ಅನುಭವ ಮಂಟಪ ಮಾದರಿ ಪ್ರದರ್ಶನ 29ರಿಂದ

    ಬಸವಕಲ್ಯಾಣ: ನೂತನ ಅನುಭವ ಮಂಟಪ ಮಾದರಿಯನ್ನು ನಗರದ ಭಕ್ತಿ ಭವನದ ಬಳಿಯ ಡಾ.ಜಯದೇವಿತಾಯಿ ಲಿಗಾಡೆ ಸಮಾಧಿ ಸ್ಥಳದ ಹತ್ತಿರ ಸಿದ್ಧಪಡಿಸಲಾಗುತ್ತಿದ್ದು, ಈ ಮಾದರಿ ಪ್ರದರ್ಶನಕ್ಕೆ 29ರಂದು ಚಾಲನೆ ನೀಡಲಾಗುತ್ತಿದೆ.

    ಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ರಾಜ್ಯ ಸಕರ್ಾರದಿಂದ ನೂತನ ಅನುಭವ ಮಂಟಪ ನಿಮರ್ಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅನುಭವ ಮಂಟಪ ಕುರಿತು ಸಂಪೂರ್ಣ ಮಾಹಿತಿ ನೀಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಬಸವ ಭಕ್ತರು ಆಗಮಿಸಿ ಮಾದರಿ ವೀಕ್ಷಿಸುವ ಜತೆಗೆ ನೂತನ ಅನುಭವ ಮಂಟಪದ ಕುರಿತು ಮಾಹಿತಿ ಪಡೆದುಕೊಳ್ಳಬಹುದು ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಕೋರಿದ್ದಾರೆ.

    ಭಕ್ತಿ ಭವನದ ಬಳಿ ಮತ್ತು ಬಸವಕಲ್ಯಾಣ ಕ್ಷೇತ್ರ ಸಮಿತಿ ಕಾಯರ್ಾಲಯದಲ್ಲಿ ಶರಣರ ಪುಸ್ತಕ ಮಳಿಗೆಯನ್ನು ಕೂಡ ಶುಕ್ರವಾರ ಉದ್ಘಾಟನೆ ಮಾಡಲಾಗುತ್ತಿದ್ದು, ನಗರದ ವಿವಿಧೆಡೆ 10 ಪುಸ್ತಕ ಮಳಿಗೆಗಳನ್ನು ಆರಂಭಿಸುವ ಉದ್ದೇಶವಿದೆ ತಿಳಿಸಿದ್ದಾರೆ.

    ಬಸವಕಲ್ಯಾಣದ ಅತ್ಯಂತ ಪವಿತ್ರ ಸ್ಥಳವಾದ ಶ್ರೀಕ್ಷೇತ್ರ ಪರುಷಕಟ್ಟೆಯ ಪರಿಸರದಲ್ಲಿಯ ಮನೆ ತೆರವು ಕಾರ್ಯ ಮುಗಿದಿದ್ದು, 29ರಂದು ಪೂಜೆ ನೆರವೇರಿಸುವ ಮೂಲಕ ಪರುಷಕಟ್ಟೆಯ ಮರುನಿಮರ್ಾಣ ಕಾರ್ಯ ಪ್ರಾರಂಭವಾಗಲಿದೆ.
    | ಬಸವರಾಜ ಪಾಟೀಲ್ ಸೇಡಂ, ಅನುಷ್ಠಾನ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts