More

    ನುಡಿದಂತೆ ನಡೆಯದಿದ್ದಲ್ಲಿ ರಾಜಕೀಯ ನಿವೃತ್ತಿ

    ಬೀದರ್: ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಪಾಲಿನ ಪೂರ್ಣ ನೀರು ಬಳಕೆ ಸಂಬಂಧ ನಾನು ವಾಗ್ದಾನ ಮಾಡಿದಂತೆ ಕೆಲಸ ಮಾಡುವೆ. ಒಂದು ವೇಳೆ ನುಡಿದಂತೆ ನಡೆಯದಿದ್ದಲ್ಲಿ ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು.

    ಕಮಲನಗರ ತಾಲೂಕಿನ ಸಂಗಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ 15 ಕಡೆಗಳಿಂದ ಏಕಕಾಲಕ್ಕೆ ಯಾತ್ರೆಗೆ ಚಾಲನೆ ಸಿಕ್ಕಿದೆೆ. ಇದರಲ್ಲಿ ಗಡಿ ಜಿಲ್ಲೆ ಬೀದರ್ನಿಂದ ಒಂದು ಯಾತ್ರೆ ಇದೆ. ಗೋದಾವರಿ ಜಲಾನಯನದಲ್ಲಿ ಹರಿಯುವ ಜಿಲ್ಲೆಯ ಮಾಂಜ್ರಾ ನದಿ ನೀರಿನ ಸದ್ಬಳಕೆ ಯೋಜನೆ ಸಹ ಜೆಡಿಎಸ್ ಕೈಗೆತ್ತಿಕೊಂಡಿದೆ ಎಂದರು.

    ಜಿಲ್ಲೆಯಲ್ಲಿ ಗೋದಾವರಿ ಜಲಾನಯನ ನೀರು ಸದ್ಬಳಕೆಗೆ ಯೋಜನೆ ರೂಪಿಸಲಾಗುವುದು. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಕೆಲಸ ಮಾಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ಹೇಳಿರುವೆ. ನಮಗೆ ಒಮ್ಮೆ ಅವಕಾಶ ಕೊಟ್ಟು ನೋಡಿ. ಜಲ ಸಂರಕ್ಷಣೆ ವಿಷಯದಲ್ಲಿ ವಾಗ್ದಾನದಂತೆ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

    ಜಿಲ್ಲೆಯಿಂದ ಹರಿದು ಹೋಗುವ ಮಾಂಜ್ರಾ ನದಿ ನೀರನ್ನು ನೆರೆಯ ತೆಲಂಗಾಣ ಸಕರ್ಾರ ಸದುಪಯೋಗ ಮಾಡಿಕೊಳ್ಳುತ್ತಿದೆ. 4 ಸಾವಿರ ಕೋಟಿ ರೂ.ಯೋಜನೆ ರೂಪಿಸಿ ಕಳೆದ ತಿಂಗಳು ಕಾಮಗಾರಿಗೆ ಅಲ್ಲಿನ ಸಿಎಂ ಚಂದ್ರಶೇಖರರಾವ್ ಚಾಲನೆ ನೀಡಿದ್ದಾರೆ. ಬಚಾವತ್ ಆಯೋಗ ತೀಪರ್ಿನಂತೆ ಬೀದರ್ ಜಿಲ್ಲೆ 23.37 ಟಿಎಂಸಿ ನೀರು ಬಳಸಲು ಅವಕಾಶವಿದೆ. ತೆಲಂಗಾಣಕ್ಕೆ ಹರಿದು ಹೋಗುವ ನೀರು ಸದ್ಬಳಕೆ ಮಾಡಿಕೊಳ್ಳುವುದು ಜನತಾ ಜಲಧಾರೆ ಯಾತ್ರೆ ಧ್ಯೇಯವಾಗಿದೆ ಎಂದರು.

    ಲಾಲ್ ಬಹದ್ದೂರ್ ಶಾಸಿ ಪ್ರಧಾನಿ ಇದ್ದಾಗ ರಾಜ್ಯದಲ್ಲಿ ಆಲಮಟ್ಟಿ ಮತ್ತು ಕಾರಂಜಾ ಯೋಜನೆಗೆ ಚಾಲನೆ ನೀಡಲಾಗಿತ್ತು. 50 ವರ್ಷವಾದರೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ನೀರಾವರಿಗೆ ರಾಷ್ಟ್ರೀಯ ಪಕ್ಷಗಳು ನೀಡುವ ಆದ್ಯತೆ ನೋಡಿದರೆ ನೋವಾಗುತ್ತದೆ. ರಾಜ್ಯದಲ್ಲಿ ಜನತಾ ಪರಿವಾರ ಆಡಳಿತ ಮಾಡಿದ ವೇಳೆ ನೀರಾವರಿ ಮತ್ತು ರೈತರಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ ಎಂದರು.

    ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಮುಖಂಡ ರಮೇಶ ಡಾಕುಳಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದಶರ್ಿ ಅಶೋಕ ಕೊಡಗೆ, ಪ್ರಮುಖರಾದ ಬಸವರಾಜ ಪಾಟೀಲ್ ಹಾರೂರಗೇರಿ, ಅಶೋಕಕುಮಾರ ಕರಂಜಿ, ರಾಜು ಕಡ್ಯಾಳ, ದೇವೇಂದ್ರ ಸೋನಿ, ಸಂಜುರಡ್ಡಿ, ಐಲಿನ್ ಜಾನ್ ಮಠಪತಿ, ಅಶ್ರ್ ಅಲಿ, ಮಲ್ಲಿಕಾಜರ್ುನ ನೇಳಗೆ, ಶಿವರಾಜ ಹುಲಿ, ಅಶೋಕ ಸಂಗೋಳಗಿ, ಗೋರೆಮಿಯಾ, ಸಂತೋಷ ರಾಸೂರ, ರಾಜಶೇಖರ ಜವಳೆ, ರೇವಣಸಿದ್ದ ಬಾವಗಿ, ಅಭಿ ಕಾಳೆ ಇತರರಿದ್ದರು. ಜೆಡಿಎಸ್ ತಾಲೂಕು ಅಧ್ಯಕ್ಷ ತಾನಾಜಿ ತೋರಣಕರ್ ಸ್ವಾಗತಿಸಿದರು.

    ಕಮಠಾಣದಲ್ಲಿ ಬೃಹತ್ ಸಮಾವೇಶ 22ಕ್ಕೆ: ಜನತಾ ಜಲಧಾರೆ ಯಾತ್ರೆ ನಿಮಿತ್ತ ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣದಲ್ಲಿ 22ರಂದು ಸಂಜೆ 5ಕ್ಕೆ ಬೃಹತ್ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ ತಿಳಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸೇರಿ ರಾಜ್ಯದ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನೂ ಆಹ್ವಾನಿಸಲಾಗಿದೆ ಎಂದರು. ಜಿಲ್ಲೆಯ ಎಲ್ಲ ಆರು ವಿಧಾನಸಭೆ ಕ್ಷೇತ್ರ ಸೇರಿ 12 ದಿನ ಬೆಳಗ್ಗೆ 8 ರಿಂದ 11 ಹಾಗೂ ಸಂಜೆ 5ರಿಂದ ರಾತ್ರಿ 10ರವರೆಗೆ ಯಾತ್ರೆ ಸಂಚರಿಸಲಿದೆ. ಆಯಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ವಿವಿಧೆಡೆ ಸಭೆ ನಡೆಸಿ ಯಾತ್ರೆ ಉದ್ದೇಶವನ್ನು ಜನರಿಗೆ ತಿಳಿಸಲಿದ್ದಾರೆ. ಈ ಯಾತ್ರೆ ಮೇ 8ರಂದು ಬೆಂಗಳೂರಿಗೆ ತೆರಳಲಿದ್ದು, ಅಂದು ಅಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಎಲ್ಲ ಯೋಜನೆಗೆ ಬೇಕು ರೂ.5 ಲಕ್ಷ ಕೋಟಿ: ರಾಜ್ಯದಲ್ಲಿ ನನೆಗುದಿಗೆ ಬಿದ್ದ ಹಾಗೂ ಹೊಸ ನೀರಾವರಿ ಯೋಜನೆಗಳ ಪೂರ್ಣಕ್ಕೆ 4 ರಿಂದ 5 ಲಕ್ಷ ಕೋಟಿ ರೂ.ಅಗತ್ಯವಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ ತಿಳಿಸಿದರು. ಐದು ವರ್ಷದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಜೆಡಿಎಸ್ ಮಾಡಿದೆ. ಪ್ರತಿ ವರ್ಷ ಒಂದು ಲಕ್ಷ ಕೋಟಿ ರೂ.ಯಂತೆ ಐದು ವರ್ಷದಲ್ಲಿ ಪೂರ್ಣಗೊಳಿಸುವ ಧ್ಯೇಯ ಮಾಜಿ ಸಿಎಂ ಕುಮಾರಸ್ವಾಮಿ ಹೊಂದಿದ್ದಾರೆ ಎಂದರು.

    ತ್ರಿವೇಣಿ ಸಂಗಮ ಜಲ ಸಂಗ್ರಹ: ಮೂರು ನದಿ ಒಂದೆಡೆ ಸೇರುವ ಕಮಲನಗರ ತಾಲೂಕಿನ ಸಂಗಮ ಬಳಿ ಜಲಧಾರೆ ಯಾತ್ರೆಗೆ ಚಾಲನೆ ನೀಡಲಾಯಿತು. ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶಾಸಕ ಬಂಡೆಪ್ಪ ಖಾಶೆಂಪುರ ನೇತೃತ್ವದಲ್ಲಿ ಕಾರಂಜಾ, ಮಾಂಜ್ರಾ ಹಾಗೂ ದೇವಣಿ ನದಿ ಸೇರುವ ತ್ರಿವೇಣಿ ಸಂಗಮವರೆಗೆ ಬಾಜಾ-ಭಜಂತ್ರಿಯೊಂದಿಗೆ ನಡೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ಬಳಿಕ ಜಲವನ್ನು ಸಂಗ್ರಹಿಸಲಾಯಿತು. ಅಲ್ಲಿಂದ ಕಳಸ ಹೊತ್ತ ಮಹಿಳೆಯರು ಜಲವನ್ನು ಶ್ರೀ ಸಂಗಮೇಶ್ವರ ದೇವಸ್ಥಾನವರೆಗೆ ತೆಗೆದುಕೊಂಡು ಬಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts