More

    ನೀರು ಹಿತ-ಮಿತವಾಗಿ ಬಳಸಿ : ವೀರಣ್ಣ ಚರಂತಿಮಠ ಅಭಿಮತ

    ಬಾಗಲಕೋಟೆ : ನೀರು ನೈಸರ್ಗಿಕ ಸಂಪನ್ಮೂಲವಾಗಿದ್ದು, ಅದನ್ನು ಮಿತವ್ಯಯವಾಗಿ ಹಾಗೂ ಅವಶ್ಯಕತೆಗೆೆ ಅನುಗುಣವಾಗಿ ಬಳಸಬೇಕು. ಪೋಲಾಗದಂತೆ ಜಾಗ್ರತೆ ವಹಿಸಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
    ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧೀಕರಿಸುವ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಶುದ್ಧೀಕರಿಸಿದ ನೀರು ತೋವಿವಿ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ದೊರೆಯಬೇಕು ಎನ್ನುವ ಕಾರಣಕ್ಕೆ ಘಟಕ ನಿರ್ಮಿಸಲಾಗಿದೆ. ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ತೋವಿವಿಯ ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ ಮಾತನಾಡಿ, ವಿವಿಯ ಸಂಶೋಧನೆಗೆ ಹಾಗೂ ವಿಸ್ತರಣೆ ಚಟುವಟಿಕೆಗಾಗಿ ನವನಗರದದಲ್ಲಿ 1, 70, 41, 9, 13 ಹೀಗೆ 5 ಸೆಕ್ಟರ್‌ಗಳನ್ನು ಬಿಟಿಡಿಎದಿಂದ ಒದಗಿಸಲಾಗಿದೆ. ಅಲ್ಲದೆ, ಸಣ್ಣ ನೀರಾವರಿ ಇಲಾಖೆಯಿಂದ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ವಿಶ್ವವಿದ್ಯಾಲಯಕ್ಕೆ ನೀಡುವಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ಪಾತ್ರ ದೊಡ್ಡದಿದೆ ಎಂದರು.
    ಕುಲಪತಿ ಡಾ.ಕೆ.ಎಂ.ಇಂದಿರೇಶ, ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಮಾತನಾಡಿದರು. ತೋವಿವಿ ಧಿಕಾರಿಗಳಾದ ಡಾ.ವೈ.ಕೆ. ಕೋಟಿಕಲ್, ಡಾ.ಎಸ್.ಐ.ಅಥಣಿ, ವಿಜಯಭಾಸ್ಕರ ಭಜಂತ್ರಿ, ಡಾ.ಎಂ.ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಡಾ.ವಸಂತ ಗಾಣಿಗೇರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts