More

    ನೀರು, ಆಹಾರದ ಮಹತ್ವ ಕುರಿತು ಜಾಗೃತಿ ಜಾಥಾ

    ಸುಂಟಿಕೊಪ್ಪ: ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಿಂದ ಪರಿಸರ, ನೀರು, ಆಹಾರದ ಮಹತ್ವ ಹಾಗೂ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

    ಜಾಥಾಕ್ಕೆ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಅರುಳ್ ಸೆಲ್ವಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಸೇಲ್ವರಾಜ್, ಚಾಲ್ಸ್ ಚಾಲನೆ ನೀಡಿದರು.

    ಶಾಲೆಯ ವಿದ್ಯಾರ್ಥಿಗಳು ಹಸಿರು, ಹಳದಿ, ನೀಲಿ ಕೆಂಪು ಸಮವಸ್ತ್ರದಲ್ಲಿ ಹೊರಟು ಪರಿಸರ ಉಳಿಸಿ, ಗಿಡ, ಮರಗಳನ್ನು ನೆಟ್ಟು ಬೆಳೆಸಿ ನೀರನ್ನು ಮಿತವಾಗಿ ಬಳಸಿ, ವ್ಯಯ ಮಾಡಬೇಡಿ. ಆಹಾರವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ, ಮನೆಯ ಸುತ್ತಮುತ್ತ ಗಿಡ ಮರಗಳನ್ನು ಬೆಳಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಿ ಎಂಬ ನಾಮಫಲಕಗಳನ್ನು ಹಿಡಿದು ಬ್ಯಾಂಡ್‌ವಾದ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

    ಶಾಲೆಯ ಮಕ್ಕಳು ಹಾಗೂ ಸಹಶಿಕ್ಷಕರು ಘೋಷಣೆಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts