More

    ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

    ಜೇವರ್ಗಿ: ಪಟ್ಟಣದ ನಾಗರಿಕರ ದಶಕದ ಕನಸಾಗಿರುವ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ನೀರನ ಸಮಸ್ಯೆ ಇರುವುದಿಲ್ಲ ಎಂದು ಶಾಸಕ ಡಾ.ಅಜಯಸಿಂಗ್ ಅಭಿಪ್ರಾಯಪಟ್ಟರು.
    ಕಟ್ಟಿಸಂಗಾವಿ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ರಿಜ್ ಕಂ ಬ್ಯಾರೇಜ್ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬುರಾಜು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ನಗರೋತ್ಥಾನ ಯೋಜನೆ ಅಡಿಯಲ್ಲಿ 14ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಇದರಿಂದ ನದಿ ನೀರು ಶೇಖರಣೆಯಾಗಿ, ಪಟ್ಟಣದ ಜನತೆಗೆ ಸಮರ್ಪಕ ನೀರು ದೊರೆಯಲಿದೆ ಎಂದರು.
    ಬ್ಯಾರೇಜ್ನಿಂದ ಮುಂಬರುವ ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಅನುಕೂಲವಾಗಲಿದೆ. ಪಟ್ಟಣ ಮಾತ್ರವಲ್ಲದೆ ಕಟ್ಟಿಸಂಗಾವಿ, ಮದರಿ, ಯನಗುಂಟಿ ಸೇರಿ ಭೀಮಾ ನದಿ ಪಾತ್ರದ ಹಳ್ಳಿಗಳ ರೈತರ ಜಮೀನಿಗೆ ನೀರುಣಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಪ್ರಮುಖರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ವಿಜಯಕುಮಾರ ಪಾಟೀಲ್ ಕಲ್ಲಹಂಗರಗಾ, ತಿಪ್ಪಣ್ಣ ನಾಡಗೇರ, ಮಹಿಮೂದ್ ನೂರಿ, ನೀಲಕಂಠ ಅವಂಟಿ, ರವೀಂದ್ರ ಕೋಳಕೂರ, ಸಂಗಮೇಶ ಕಟ್ಟಿಸಂಗಾವಿ, ದೇವಿಂದ್ರ ಕಟ್ಟಿಸಂಗಾವಿ, ರಹಿಮೂದ್ದಿನ್ ಕಟ್ಟಿಸಂಗಾವಿ, ಪರಶುರಾಮ ಪಾಟೀಲ್, ದಿನೇಶ ಠಾಕೂರ್, ಮಲ್ಲು ಗೌನಳ್ಳಿ, ಶರಣು ಹಾಲಗಡ್ಲಾ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಧುಸೂದನ ತಿಮ್ಮಾಪುರಿ ಇದ್ದರು.

    ಜೇವರ್ಗಿಯ ಶಹಾಪುರ ರಸ್ತೆಯಲ್ಲಿರುವ ಸಂಪತ್ಲಕ್ಷ್ಮಿ ದೇವಸ್ಥಾನದ ಹತ್ತಿರ ಕೆರೆ ನಿಮರ್ಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ ಕಾಮಗಾರಿ ನಡೆದಿದ್ದು, ಅಗತ್ಯವಿದ್ದರೆ ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುವುದು. ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
    | ಡಾ. ಅಜಯಸಿಂಗ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts