More

    ನೀರಿನ ಅಪವ್ಯಯ ಆಗದಂತೆ ಜಾಗೃತಿ ಮೂಡಿಸಿ

    ಹೂವಿನಹಿಪ್ಪರಗಿ: ಐದು ವರ್ಷಗಳ ಅವಧಿಗಾಗಿ ನೀವು ನನಗೆ ಮತ ಕೊಟ್ಟು ಆಯ್ಕೆ ಮಾಡಿ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದೀರಿ. ನಾನು ನಿಮ್ಮ ಜೀತದಾಳಿನಂತೆ ಕೆಲಸ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

    ಸಮೀಪದ ಸಿಂದಗೇರಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಸವನಬಾಗೇವಾಡಿ ಉಪವಿಭಾಗದಡಿಯ 2022/23ನೇ ಸಾಲಿನ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಯೋಜನೆಯ ಅಂದಾಜು ಮೊತ್ತ 95 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಜೆಜೆಎಂ ಅನುಷ್ಠಾನದಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ. ಇದರ ಸದ್ಭಳಕೆ ಮತ್ತು ನಿರ್ವಹಣೆಯ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ನೀರಿನ ಅಪವ್ಯಯ ಆಗದಂತೆ ನೋಡಿಕೊಳ್ಳಬೇಕು. ಗುಣಮಟ್ಟ ಮತ್ತು ನೀರಿನ ಶುದ್ಧತೆ ಬಗ್ಗೆ ಬಳಕೆದಾರರಿಗೆ ಖಾತ್ರಿ ನೀಡಬೇಕು. ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಿದರು.

    ಗ್ರಾಮದ ಯುವಕರು ಶಾಸಕ ರಾಜುಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
    ಮುಖಂಡರಾದ ಗುರುನಗೌಡ ಪಾಟೀಲ, ಸುಭಾಸ ಮುತ್ತಗಿ, ಶಾಂತಗೌಡ ಪಾಟೀಲ, ಗುರಲಿಂಗಪ್ಪ ದೊಡಮನಿ, ಶಂಕ್ರಪ್ಪ ಕನ್ನೊಳ್ಳಿ, ಅಪ್ಪು ಕನ್ನೊಳ್ಳಿ, ಶಂಕ್ರಪ್ಪಗೌಡ ಪಾಟೀಲ, ರಾಘವೇಂದ್ರ ಹೊಸಮನಿ, ಸಂಗಣ್ಣ ಡೋರನಹಳ್ಳಿ, ಸಂಗಣ್ಣ ಗಂಗಶೆಟಿ, ಸಿದ್ದಪ್ಪ ಎಂಟಮಾನ, ಕೆ.ಬಿ.ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts