More

    ನೀರಿಗಾಗಿ 1.35 ಕೋಟಿ ರೂ. ಮಂಜೂರು

    ಸಂಬರಗಿ, ಬೆಳಗಾವಿ: ಕಾಗವಾಡ ಮತಕ್ಷೇತ್ರದ ಶಿವನೂರ ಗ್ರಾಮದ 508 ಮನೆಗಳಿಗೆ 1.35 ಕೋಟಿ ರೂ. ಅನುದಾನದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಸಮೀಪದ ಶಿವನೂರ ಗ್ರಾಮದ ಚನ್ನಮ್ಮ ವೃತ್ತದಲ್ಲಿ 3 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಬಾಂದಾರ ವೀಕ್ಷಿಸಿ, 2.7 ಕಿಮೀ ಉದ್ದದ ಕಿರಣಗಿ-ಶಿವನೂರ ರಸ್ತೆ ಹಾಗೂ ಜಲಜೀವನ ಮಿಷನ್ ಯೋಜನೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ರಾಜ್ಯದಲ್ಲಿಯೇ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ತಂದಿರುವೆ. ಶಿವನೂರ ಗ್ರಾಮ ಸೇರಿ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಡಿ 10 ಲಕ್ಷ ವೆಚ್ಚದಲ್ಲಿ ಗರಡಿ ಮನೆಗಳನ್ನು ನಿರ್ಮಿಸಲಾಗುವುದು ಎಂದರು.

    ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಡಿಸೆಂಬರ್ ಅಂತ್ಯದವರೆಗೆ ಮುಕ್ತಾಯಗೊಳ್ಳುತ್ತದೆ. ಈ ಯೋಜನೆ ಪೂರ್ಣಗೊಳ್ಳುವುದರಿಂದ ಬರಗಾಲಪೀಡಿತ ಪ್ರತಿ ಗ್ರಾಮಗಳಲ್ಲಿ 1 ಲಕ್ಷ ಟನ್ ಕಬ್ಬು ಉತ್ಪಾದಿಸುವ ಗುರಿ ಇದೆ ಎಂದರು. ಅಗ್ರಹಾರಿಣಿ ನದಿಗೆ ಅಡ್ಡಲಾಗಿ ಇನ್ನೆರಡು ಬಾಂದಾರಗಳನ್ನು ನಿರ್ಮಿಸಬೇಕು ಎಂದು ಶಿವನೂರ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ ಹಿನ್ನೆಲೆಯಲ್ಲಿ ತಕ್ಷಣ ಸಣ್ಣ ನೀರಾವರಿ ಇಲಾಖೆ ಮೂಲಕ ಬಾಂದಾರಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಯಾವುದೇ ಸಮಸ್ಯೆ ಇದ್ದರೂ ಕೂಡ ನನ್ನನ್ನು ಸಂಪರ್ಕಿಸಿ ಎಂದರು.

    ಜಿಪಂ ಅಧಿಕಾರಿ ವೀರಣ್ಣ ವಾಲಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿ ರವೀಂದ್ರ ಮೂರ್ಗಾಲಿ, ಧುರೀಣರಾದ ಶಿವಪುತ್ರ ನಾಯಿಕ, ಬಸವರಾಜ ಮಗದುಮ, ರಾಜು ಮರಡಿ, ಪ್ರಕಾಶ ಕೊಂಗಾಲಿ, ವಿಜಯ ಅಡಹಳ್ಳಿ, ವಿಜಯ ಆಜುರ, ಶಂಭು ಮಗದುಮ, ಲವಾ ಮಗದುಮ, ಶ್ರೀಶೈಲ ಪಾಟೀಲ, ಹನುಮಂತ ಗುಮತಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts