More

    ನೀರಾವರಿಗೆ 130 ಕೋಟಿ ರೂ. ಮಂಜೂರು

    ಬೈಲಹೊಂಗಲ: ಈ ಭಾಗದ ರೈತರ ಅನುಕೂಲಕ್ಕಾಗಿ ಮಲಪ್ರಭಾ ನದಿಯ 7 ಏತ ನೀರಾವರಿ ಯೋಜನೆಗಳ ಪುನಶ್ಚೇತನಕ್ಕಾಗಿ 130 ಕೋಟಿ ರೂ. ಮಂಜೂರು ಮಾಡುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
    ಪಟ್ಟಣದಲ್ಲಿ ಶುಕ್ರವಾರ ಕೇಂದ್ರ ಬಸ್ ನಿಲ್ದಾಣ ಕಟ್ಟಡ, ನೂತನ ಕೆರೆ, ಬಾಲಕಿಯರ ವಸತಿ ನಿಲಯ ಕಟ್ಟಡ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಬೆಳಗಾವಿ ಸೇರಿ ಮೂರು ಜಿಲ್ಲೆಗಳ ನೀರಾವರಿಗೆ 5,700 ಕೋಟಿ ರೂ. ಮಂಜೂರು ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸಿ ಹಾಕುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದರು.

    ರಾಜ್ಯದ ಎಲ್ಲ ಸಾರಿಗೆ ವಿಭಾಗಗಳು ನಷ್ಟದಲ್ಲಿದ್ದು, ಅವುಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಶಿಕ್ಷಣಕ್ಕೆ ಪ್ರತಿ ವರ್ಷ ಸರ್ಕಾರ 35 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ 5,000 ಕ್ಕಿಂತ ಹೆಚ್ಚು ವಸತಿ ನಿಲಯಗಳು, 826 ವಸತಿ ಶಾಲೆಗಳಲ್ಲಿ 4 ಲಕ್ಷ ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಿಷ್ಯವೇತನ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಧಾರವಾಡ ಸೇರಿ 5 ಕಡೆ ಮೆಗಾ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಸರ್ಕಾರಿ ವಸತಿ ನಿಲಯದಲ್ಲಿ ಕಲಿತ ವಿದ್ಯಾರ್ಥಿಗಳ ಲಿತಾಂಶ ಶೇ. 97 ಆಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಅಂಕ ಪಡೆದ ಶಿಕ್ಷಕರನ್ನು ನೇಮಕ ಮಾಡಿದರೆ, ಕಡಿಮೆ ಅಂಕ ಪಡೆದವರು ಖಾಸಗಿ ಶಾಲೆಗಳಲ್ಲಿರುತ್ತಾರೆ. ಖಾಸಗಿ ಶಾಲೆಗಳಲ್ಲಿಯೇ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ರೈತರ ಪಂಪ್‌ಸೆಟ್‌ಗಾಗಿ ಸರ್ಕಾರ 14,700 ಕೋಟಿ ರೂ. ವಿದ್ಯುತ್ ಕಂಪನಿಗಳಿಗೆ ತುಂಬುತ್ತಿದೆ ಎಂದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, 7 ಕೋಟಿ ರೂ. ವೆಚ್ಚದ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಉಪಯೋಗ ಪಡೆದುಕೊಳ್ಳಬೇಕು. ಉಸ್ತುವಾರಿ ಸಚಿವರು ನಿಲ್ದಾಣದ ಆವರಣ ಕಾಂಕ್ರೀಟ್ ಕಾಮಗಾರಿಗೆ 3.5 ಕೋಟಿ ರೂ. ಹಾಗೂ ಮಲಪ್ರಭಾ 7 ಏತ ನೀರಾವರಿ ಪುನಸ್ಚೇತನಕ್ಕಾಗಿ ಅನುದಾನ ನೀಡಲು ಮನವಿ ಮಾಡಿದರು. ವಸತಿ ನಿಲಯಕ್ಕೆ 3.5 ಕೋಟಿ ರೂ., ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ 4.5 ಕೋಟಿ ರೂ. ತಗುಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 9.5 ಕೊಟಿ ರೂ. ವೆಚ್ಚದಲ್ಲಿ ಸುಂದರ ದೊಡ್ಡ ಕೆರೆ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ಸದುಪಯೋಗವಾಗಲಿದೆ ಎಂದರು.

    ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದರು. ವಾಯವ್ಯ ಸಾರಿಗೆ ಸಂಸ್ಥೆಯ ನಿಗಮದ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿಯ ಸೇವೆ ಅಮೂಲ್ಯವಾಗಿತ್ತು. ಮುಖ್ಯಮಂತ್ರಿಗಳು ನೂತನ ಬಸ್ ನಿಲ್ದಾಣಗಳಿಗೆ ಹೆಚ್ಚಿನ ಬಸ್ ನೀಡಲಿದ್ದಾರೆ ಎಂದರು.
    ಸಂಸದೆ ಮಂಗಲ ಅಂಗಡಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪೂರ, ವಿಭಾಗೀಯ ಅಧಿಕಾರಿ ಗಣೇಶ ರಾಥೋಡ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಸಾರಿಗೆ ಸಂಸ್ಥೆ ನಿರ್ದೇಶಕರಾದ ಅಶೋಕ ಮಾಳಗಿ, ಸದಾಶಿವ ತೇಲಿ, ಮುಖ್ಯ ಅಭಿಯಂತರ ಪ್ರಕಾಶ ಕಬಾಡಿ, ತಹಸೀಲ್ದಾರ್ ಜಯದೇವ ಅಷ್ಠಗಿಮಠ, ತಾ.ಪಂ ಇಒ ಸುಭಾಸ ಸಂಪಗಾವಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಇತರರು ಇದ್ದರು.

    ಪುರಸಭೆ ಉಪಾದ್ಯಕ್ಷೆ ಲಕ್ಷ್ಮೀ ಬಡ್ಲಿ, ವಿರೋಧ ಪಕ್ಷದ ನಾಯಕ ಶಿವಾನಂದ ಕೋಲಕಾರ, ಸದಸ್ಯರಾದ ರುದ್ರಪ್ಪ ಹೊಸಮನಿ, ವಿಜಯ ಬೋಳನ್ನವರ, ಅರ್ಜುನ ಕಲಕುಟ್ಕರ್, ಬಸವರಾಜ ಶಿಂತ್ರಿ, ಮಲ್ಲೇಶ ಹೊಸಮನಿ, ನಿವತ್ತ ಮುಖ್ಯೋಪಾಧ್ಯಾಯ ಗುರುಪುತ್ರಪ್ಪ ತುರಮರಿ, ಕಾರ್ಮಿಕ ಕಲ್ಯಾಣಾಧಿಕಾರಿ ಸತ್ಯನಾರಾಯಣ, ಶ್ರೀಶೈಲ ಯಡಳ್ಳಿ, ಶಿವಲಿಂಗ ಪರಂಡಿ, ಶಿವು ಹಂಪನ್ನವರ, ಹಸನ ಗೋರನಕೊಳ್ಳ, ಸಾರಿಗೆ ವ್ಯವಸ್ಥಾಪಕ ಶಿವಮೂರ್ತಿ ತಳವಾರ, ಮಂಜು ಆನಿಕಿವಿ, ಬಿ.ಎಸ್.ಪುಡಲಕಟ್ಟಿ, ಸುರೇಶ ಯರಡ್ಡಿ, ಸುಭಾಷ ರುದ್ರಾಪೂರ, ಪುರಸಭೆ ಸದಸ್ಯರು ಸಾರಿಗೆ ಸಿಬ್ಬಂದಿ, ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts