More

    ನಿವೇಶನ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

    ಬ್ಯಾಡಗಿ: ಪಟ್ಟಣದ ಬಡ ಅರ್ಹ ಪಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ನ್ಯಾಸ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಬುಧವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

    ಸಮಿತಿಯ ಸಂಚಾಲಕ ಎಂ.ಡಿ. ಚಿಕ್ಕಣ್ಣನವರ ಮಾತನಾಡಿ, ಪಟ್ಟಣದಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಬಡವರು ನಿವೇಶನ ಸಹಿತ ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ 2 ಕೋ.ರೂ. ವೆಚ್ಚದಲ್ಲಿ ಇಲ್ಲಿನ ಮಲ್ಲೂರು ರಸ್ತೆಯಲ್ಲಿ ಪುರಸಭೆ 10 ಎಕರೆ ಜಾಗ ಖರೀದಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಆಯ್ಕೆಪಟ್ಟಿ ವರ್ಷದಿಂದ ಕಚೇರಿ ದಾಖಲೆಯಲ್ಲಿ ಉಳಿದುಕೊಂಡಿದ್ದು, ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದಾರೆ. ಆದ್ದರಿಂದ ಕೂಡಲೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

    ಕರುನಾಡು ವೇದಿಕೆ ಅಧ್ಯಕ್ಷೆ ಪರೀದಾಭಾನು ನದಿಮುಲ್ಲಾ ಮಾತನಾಡಿ, ಬಡವರ ಮನೆಗಳು ಮುಖಂಡರ, ಹಿಂಬಾಲಕರ ಹಾಗೂ ಉಳ್ಳವರ ಪಾಲಾಗುತ್ತಿವೆ. ಪಟ್ಟಣದಲ್ಲಿ ಸ್ವಂತ ಮನೆಯಿದ್ದರೂ, ಕೆಲವರು ಸರ್ಕಾರಿ ನಿವೇಶನ ಪಡೆದು ಮಾರಾಟ ಮಾಡುತ್ತಿದ್ದಾರೆ. ನಿಜವಾದ ಬಡವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ಹಕ್ಕುಪತ್ರ ವಿತರಣೆ ಮಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪಟ್ಟುಹಿಡಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶರಣಮ್ಮ ಕಾರಿ, ಸದ್ಯ ಪುರಸಭೆ ಆಡಳಿತದಲ್ಲಿಲ್ಲ, ಉಪವಿಭಾಗಾಧಿಕಾರಿ ಅಧಿಕಾರ ನಡೆಸುತ್ತಿದ್ದು, ಮನೆ ಹಂಚಿಕೆ ಮಾಡಲು ಬರುವುದಿಲ್ಲ. ಮುಂಬರುವ ದಿನಗಳಲ್ಲಿ ಬಡವರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ‘ಉಪವಿಭಾಗಾಧಿಕಾರಿಗೆ ಪ್ರತಿಭಟನೆ ಕುರಿತು ಮೊದಲೇ ಮನವಿ ಪತ್ರ ನೀಡಿದ್ದೇವೆ. ಬ್ಯಾಡಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದು, ಪುರಸಭೆಗೆ ಬಾರದೆ ರಾಣೆಬೆನ್ನೂರಿಗೆ ತೆರಳಿದ್ದಾರೆ. ಮಹಿಳೆಯರು ಎಳೆಯ ಕಂದಮ್ಮಗಳೊಂದಿಗೆ ಬಿರುಬಿಸಿಲಿನಲ್ಲಿ ಕುಳಿತಿದ್ದರೂ ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದಿಲ್ಲ. ಅವರು ಇಲ್ಲಿಗೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಸುರೇಶ ಡಂಬಳ, ವಿದ್ಯಾ ವಡ್ಡರ, ರೂಪಾ ಮಡಿವಾಳರ, ಅಂಜನಾ ದೊಡ್ಡಮನಿ, ರಾಧಾ ಶಿರಾಳಕೊಪ್ಪ, ಕುಸುಮಾ ಹಿರೇಮಠ, ಲಕ್ಷ್ಮೀಬಾಯಿ ಲಮಾಣಿ, ನಾಗರಾಜ ಕುಂಚೂರು ಇತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts