More

    ನಿವೇಶನ ಹಂಚಿಕೆಯಲ್ಲಿ ಅನ್ಯಾಯ ಆರೋಪ

    ಮುಂಡರಗಿ: ಆಶ್ರಯ ಮನೆ ನಿವೇಶನ ಹಂಚಿಕೆ ಪರಿಷ್ಕೃತ ಪಟ್ಟಿಯಲ್ಲಿ ಅನ್ಯಾಯವಾಗಿದ್ದು, ಸಾಮಾಜಿಕ ನ್ಯಾಯ ಸಿಗುವವರೆಗೆ ಪಟ್ಟಿಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಪುರಸಭೆಯ ಕೆಲ ಸದಸ್ಯರು ಆಶ್ರಯ ಮನೆ ನಿವೇಶನ ವಂಚಿತರ ಜತೆಗೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

    ‘ಪುರಸಭೆಯ ನೂತನ ಚುನಾಯಿತ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ಪಕ್ಷಪಾತ ನಡೆಸಿ ಪರಿಷ್ಕೃತ ಪಟ್ಟಿ ತಯಾರಿಸಲಾಗಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಿ ನೂತನ ಕಮಿಟಿ ಆಡಳಿತಕ್ಕೆ ಬಂದ ಮೇಲೆ ನಿವೇಶನ ಹಂಚಿಕೆ ಮಾಡಬೇಕು. ಪರಿಷ್ಕೃತ ಪಟ್ಟಿಯಲ್ಲಿ ಬಡವರಿಗೆ, ಶ್ರಮಿಕರಿಗೆ, ಕಾರ್ವಿುಕರಿಗೆ, ಪೌರ ಕಾರ್ವಿುಕರಿಗೆ, ವಿಧವೆಯರಿಗೆ, ದೇವದಾಸಿಯರಿಗೆ, ಅಂಗವಿಕಲರಿಗೆ ಅನ್ಯಾಯವಾಗಿದೆ. ಸಾಮಾಜಿಕ ನ್ಯಾಯ ಸಿಗುವ ತನಕ ಪಟ್ಟಿಯನ್ನು ರದ್ದು ಪಡಿಸಬೇಕು’ ಎಂದು ಆಗ್ರಹಿಸಿದರು.

    ‘ಆಶ್ರಯ ಮನೆ ನಿವೇಶನಕ್ಕಾಗಿ ಪುರಸಭೆಗೆ 3 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ ಶಿರೋಳ ಬಳಿ ಸರ್ಕಾರದಿಂದ ಆಶ್ರಯ ಯೋಜನೆಯಡಿ ಖರೀದಿಸಿದ್ದ 25 ಎಕರೆ ಜಮೀನಿನಲ್ಲಿ 1050 ಫಲಾನುಭವಿಗಳಿಗೆ ನಿವೇಶನ ನೀಡಲಾಗುತ್ತದೆ. ಮತ್ತೆ 25 ಎಕರೆ ಜಮೀನು ಖರೀದಿಸುವ ಮೂಲಕ ಎಲ್ಲ ಅರ್ಜಿದಾರರನ್ನು ಪರಿಗಣಿಸಿ ಮನೆ ವಿತರಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು. ಪುರಸಭೆ ಸದಸ್ಯರಾದ ರೈಮಾನಸಾಬ್ ಮಲ್ಲಿನಕೇರಿ, ರಫೀಕ್ ಮುಲ್ಲಾ, ರಾಜಾಬಕ್ಷೀ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ನಬಿಸಾಬ್ ಕೆಲೂರ, ಎಂ.ಕೆ. ತಳಗಡೆ, ಅಬುಬ್​ಕರ್ ಚೌಥಾಯಿ, ಮೈನುದ್ದೀನ್ ರಾಟಿ, ಸೈನಾಜ್ ನದಾಫ್, ಮಂಜುಳಾ ಬಗರಿಕಾರ, ಶಬೀನಾಬಾನು ಟಂಕದ, ಸುಶೀಲಮ್ಮ ಕಟ್ಟಿಮನಿ, ಯಮುನಾಬಿ ಹಣಗಿ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts