More

    ನಿಲ್ಲದ ಮಳೆ ಜನಜೀವನ ಅಸ್ತವ್ಯಸ್ತ

    ಬೀದರ್: ನಗರ ಸೇರಿ ಜಿಲ್ಲಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಮಧ್ಯಾಹ್ನ ಶುರುವಾದ ಭಾರಿ ಮಳೆ ಶನಿವಾರ ಬೆಳಗ್ಗಿನ ಜಾವದವರೆಗೆ ಸುರಿದಿದ್ದು, ಅತಿವೃಷ್ಟಿ ಸಂಕಷ್ಟ ತರುವ ಲಕ್ಷಣ ಗೋಚರಿಸಿದೆ.

    ಎರಡು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಪಾವಧಿಯ ಪ್ರಮುಖ ಬೆಳೆಗಳಾದ ಸೋಯಾಬೀನ್, ಉದ್ದು, ಹೆಸರಿಗೆ ಮಳೆ ಆಪತ್ತು ತಂದಿದೆ. ಮಳೆ ಜತೆಗೆ ಜೋರಾಗಿ ಗಾಳಿಯೂ ಬೀಸುತ್ತಿರುವುದರಿಂದ ಸಮೃದ್ಧವಾಗಿ ಬಂದ ಕಬ್ಬಿಗೂ ಕುತ್ತು ಬಂದಿದೆ. ಇನ್ನಷ್ಟು ಮಳೆಯಾದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ಸಾಧ್ಯತೆಗಳಿವೆ.

    ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ 64.29 ಮಿ.ಮೀ. ಮಳೆಯಾಗಿದ್ದು, ಬಹುತೇಕ ಹಳ್ಳ-ಕೊಳ್ಳಗಳು ಭತರ್ಿಯಾಗಿವೆ. 125 ಕೆರೆಗಳ ಪೈಕಿ ಅರ್ಧದಷ್ಟು ಮೈದುಂಬಿಕೊಂಡಿವೆ. ಜಿಲ್ಲೆಯಲ್ಲಿ ಹರಿಯುವ ಏಕೈಕ ಮಾಂಜ್ರಾ ನದಿಯಲ್ಲೂ ನೀರಿನ ಮಟ್ಟ ಹೆಚ್ಚಾಗಿದ್ದು, ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಬೆಳೆಹಾನಿಯಾಗಿದೆ. ನೀರಿನ ಮಟ್ಟ ಕ್ರಮೇಣ ಏರುತ್ತಿರುವುದರಿಂದ ತೀರದಲ್ಲಿರುವ ರೈತರ ಆತಂಕ ಹೆಚ್ಚಿದೆ. ಕಾರಂಜಾ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, 7.69 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 5.174 ಟಿಎಂಸಿ ನೀರಿದೆ.

    ಥಂಡಿಯಾದ ವಾತಾವರಣ: ಶುಕ್ರವಾರ ಮಧ್ಯಾಹ್ನದಿಂದ ಶನಿವಾರವರೆಗೆ ವಾತಾವರಣ ಪೂರ್ಣ ಥಂಡಿಯಾಗಿತ್ತು. ಹೀಗಾಗಿ ನಗರ ಸೇರಿ ಜಿಲ್ಲೆಯ ಎಲ್ಲೆಡೆ ಸಾಮಾನ್ಯ ಜನಜೀವನ ಪ್ರಭಾವಿತಗೊಂಡಿತ್ತು. ಮಳೆ ಹಿನ್ನೆಲೆಯಲ್ಲಿ ಅಂಗನವಾಡಿ ಹಾಗೂ 1ರಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಗೋವಿಂದರಡ್ಡಿ ಘೋಷಿಸಿದ್ದಾರೆ.

    ಸಂತಪುರದಲ್ಲಿ ಅಧಿಕ ಮಳೆ: ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 64.29 ಮಿ.ಮೀ. ಮಳೆಯಾಗಿದೆ. ಔರಾದ್ ತಾಲೂಕಿನ ಸಂತಪುರದಲ್ಲಿ ಅಧಿಕ 120 ಮಿ.ಮೀ. ಮಳೆಯಾದರೆ, ಬಸವಕಲ್ಯಾಣ ತಾಲೂಕಿನ ಮುಡಬಿಯಲ್ಲಿ ಕಮ್ಮಿ 31 ಮಿಮೀ ಆಗಿದೆ. ಔರಾದ್ ತಾಲೂಕಿನಲ್ಲಿ 93.57, ಹುಮನಾಬಾದ್ 74.10, ಭಾಲ್ಕಿ 68.50, ಹುಲಸೂರು 68.20, ಬೀದರ್ 64.17, ಚಿಟಗುಪ್ಪ 59.53, ಕಮಲನಗರ 49 ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ 47.10 ಮಿ.ಮೀ. ಮಳೆಯಾಗಿದೆ.

    ತೇವಾಂಶ ಹೆಚ್ಚಳದಿಂದ ಬೆಳೆ ಕೊಳೆಯುವ ಆತಂಕ
    ಔರಾದ್: 15 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಸೋಯಾಬೀನ್, ತೊಗರಿ, ಹೆಸರು, ಉದ್ದು ಬೆಳೆಗಳು ಜಲಾವೃತವಾಗಿದ್ದು, ತೇವಾಂಶ ಹೆಚ್ಚಳದಿಂದ ಬೇರುಗಳು ಕೊಳೆತು ಬೆಳೆ ಹಾಳಾಗುವ ಆತಂಕ ಎದುರಾಗಿದೆ. ಮುಂಗಾರು ಸ್ವಲ್ಪ ತಡವಾದರೂ ಮಳೆ ಚೆನ್ನಾಗಿ ಬಿದ್ದಿದ್ದರಿಂದ ರೈತರು ಬಿತ್ತನೆ ಮಾಡಿದ್ದಾರೆ. ಅದರಂತೆ 25-30 ದಿನದಲ್ಲಿ ಬೆಳೆಗಳು ಹುಲುಸಾಗಿ ಬೆಳೆಯುತ್ತಿವೆ. ಆದರೆ ಸತತ ಮಳೆಯಿಂದ ರೈತನ ಸ್ಥಿತಿ ಚಿಂತಾಜನಕವಾಗಿದೆ. ಕಳೆದ 24 ಗಂಟೆಯಲ್ಲಿ ಔರಾದ್ನಲ್ಲಿ 80.40 ಮಿಮೀ, ಚಿಂತಾಕಿ 80.30, ಸಂತಪುರ ವಲಯದಲ್ಲಿ ಅತಿ ಹೆಚ್ಚು 120 ಮಿಮೀ ಮಳೆಯಾಗಿದೆ. ಬೆಳೆಗಳು ಜಲಾವೃತವಾಗಿ ಹೊಲಗಳು ಕೆರೆಯಂತೆ ಕಂಡುಬರುತ್ತಿವೆ. ನಿರಂತರ ಮಳೆಯಿಂದಾಗಿ ವಡಗಾಂವ(ದೇ) ಗ್ರಾಮದಲ್ಲಿ ಶನಿವಾರ ಶಿವರಾಜ ಬುಣಗೆ ಹಾಗೂ ತೇಜಮ್ಮ ಭೀಮಣ್ಣ ಅವರ ಮನೆಗಳು ಕುಸಿದಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃಷಿ ಮತ್ತು ಕಂದಾಯ ಅಧಿಕಾರಿಗಳು ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಕರ್ಾರದಿಂದ ಆದಷ್ಟು ಬೇಗ ಪರಿಹಾರ ಕೊಡಿಸಬೇಕೆಂದು ರೈತರಾದ ರಾಜಕುಮಾರ ಬಿರಾದಾರ, ವೀರಶೆಟ್ಟಿ ಬಿರಾದಾರ, ವೆಂಕಟರಾವ, ಮಲ್ಲಿಕಾಜರ್ುನ ಸೊರಳೆ, ಮಾರುತೆಪ್ಪ ಮೇತ್ರೆ, ರಾಜಕುಮಾರ ಮಾನುರೆ, ಅಯೂಬ್ಖಾನ್ ಪಟೇಲ್ ಬೋಗರ್ಿ, ಅಶೋಕ ನಂದಿನಾಗೂರ, ಗಣಪತಿ ಸಿಂಗಟೆ, ಗಣಪತಿ ತುಳಜಾಪುರೆ, ರವಿ ಮೇತ್ರೆ ಜೋಜನಾ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts