More

    ನಿಲ್ದಾಣ ತುಂಬ ವಿದ್ಯಾರ್ಥಿಗಳು

    ಕಾರವಾರ: ಬಸ್ ತಂಗುದಾಣ ತುಂಬ ವಿದ್ಯಾರ್ಥಿಗಳಿರುತ್ತಾರೆ. ಆದರೆ, ಅವರ್ಯಾರೂ ಬಸ್ ಬಂದರೂ ಅದನ್ನು ಏರುವುದಿಲ್ಲ. ಅಲ್ಲೇ ಕುಳಿತಿರುತ್ತಾರೆ. ಅವರೇನು ಹರಟೆ ಹೊಡೆಯಲು ಬಂದು ಸೇರಿದವರಲ್ಲ. ಎಲ್ಲ ಆನ್​ಲೈನ್ ತರಗತಿಗಾಗಿ ಸೇರಿದವರು.

    ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 260 ಮನೆಗಳಿವೆ. 1500 ರಷ್ಟು ಜನಸಂಖ್ಯೆ ಇದೆ. 150 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಹೈಸ್ಕೂಲ್ ಹಾಗೂ ಕಾಲೇಜ್ ಕಲಿಯುವವರಿದ್ದಾರೆ. ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳಲ್ಲಿ 5 ಗ್ರಾಮಕ್ಕೆ ನೆಟ್ ವರ್ಕ್ ಇಲ್ಲ. ಇದರಿಂದ ನೆಟ್ ವರ್ಕ್ ಸಿಗುವ ಒಂದೇ ತಾಣ ಬಸ್ ತಂಗುದಾಣಕ್ಕೆ. ಇನ್ನು ಕೆಲವರು ತಮ್ಮ ಸಂಬಂಧಿಕರ ಮನೆಗೆ ವಿದ್ಯಾರ್ಥಿಗಳು ಸೈಕಲ್ ಮೂಲಕ ಇಲ್ಲವೇ ನಡೆದು ಬರುತ್ತಾರೆ.

    ಇಲ್ಲಿ ಬಿಎಸ್​ಎನ್​ಎಲ್ ಬಿಟ್ಟರೆ ಬೇರೆ ಖಾಸಗಿ ನೆಟ್ವರ್ಕ್ ಇಲ್ಲ. ಹಲವು ಬಾರಿ ನೆಟ್ ವರ್ಕ್ ಸಮಸ್ಯೆ ಎದುರಾಗುತ್ತದೆ ಎಂಬುದು ವಿದ್ಯಾರ್ಥಿಗಳ ಗೋಳು.

    ದೇವಳಮಕ್ಕಿಯಲ್ಲಿ ಬಿಎಸ್​ಎನ್​ಎಲ್ ಬಿಟ್ಟರೆ ಬೇರೆ ನೆಟ್ವರ್ಕ್ ಇಲ್ಲ. ಅದು ಹಲವು ಬಾರಿ ಕೆಟ್ಟಿರುತ್ತದೆ. ಈ ಬಗ್ಗೆ ಹಲವು ಬಾರಿ ನಾವು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ಖಾಸಗಿ ಕಂಪನಿಯ ಮೊಬೈಲ್ ನೆಟ್ ವರ್ಕ್ ಒದಗಿಸುವ ಟವರ್​ನ್ನಾದರೂ ಕೊಡಬೇಕು. | ಪ್ರಜ್ವಲ ಶೇಟ್ ಕವಿವಿ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts