More

    ನಿರುದ್ಯೋಗ ಸಮಸ್ಯೆಗೆ ತಾಂತ್ರಿಕ ಶಿಕ್ಷಣ ಪರಿಹಾರ: ಗೃಹ ಸಚಿವ ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ತಾಂತ್ರಿಕ ಶಿಕ್ಷಣ ಪಡೆಯುವವರು ಪದವಿಯೊಂದಿಗೆ ನೈಪುಣ್ಯತೆ ಹೆಚ್ಚಿಸಿಕೊಂಡಲ್ಲಿ ಉತ್ತಮ ಉದ್ಯೋಗ ಅವಕಾಶಗಳಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಆನಂದಗಿರಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ಸಂಪತ್ತನ್ನು ರಾಷ್ಟ್ರೀಯ ಸಂಪತ್ತಾಗಿ ಪರಿವರ್ತಿಸುವಲ್ಲಿ ಈ ತರಬೇತಿ ಅತ್ಯಂತ ಮಹತ್ವದ್ದಾಗಿದೆ. ಅಂತೆಯೇ ಇದು ನನ್ನ ಕನಸಿನ ಸಂಸ್ಥೆಯಾಗಿದ್ದು ಇದರ ಯಶಸ್ಸಿಗೆ ಸದಾ ಬೆಂಬಲವಿದೆ. ದೇಶದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿಯೂ ಇಂಜಿನಿಯರಿಂಗ್ ಪದವಿಗಿಂತಲೂ ಹೆಚ್ಚಿನ ಅವಕಾಶ ಐಟಿಐ ತರಬೇತಿ ಪಡೆದವರಿಗೆ ದೊರೆಯುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಉದ್ಯೋಗ ಖಚಿತ. ಆದರೆ ನೀವು ಕಲಿಯುವ ವಿಭಾಗಗಳಲ್ಲಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಹೊಣೆಗಾರಿಕೆಯೂ ನಿಮ್ಮ ಮೇಲಿದೆ ಎಂದು ಹೇಳಿದರು.
    ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಉದ್ಯೋಗ ಯೋಜನೆಯ ಕಾರ್ಯಕ್ರಮದ ಟಾಟಾ ಸಂಸ್ಥೆ ನೀಡಿರುವ ಅನುದಾನದಲ್ಲಿ ಈ ಸಂಸ್ಥೆಗೆ ಅತ್ಯಾಧುನಿಕ ತಂತಜ್ಞಾನಕ್ಕೆ ಪೂರಕ ಉಪಕರಣಗಳು ಬಂದಿದೆ. ಜತೆಗೆ ಟಾಟಾ ಸಂಸ್ಥೆಯಲ್ಲಿ ಉದ್ಯೋಗವಕಾಶ ಕೂಡ ದೊರೆಯುತ್ತದೆ. ನನ್ನ ಕ್ಷೇತ್ರದಲ್ಲಿ ಎರಡು ಐಟಿಐ ಕಾಲೇಜುಗಳಿದ್ದು ಇದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿದ್ದೇನೆ. ಆರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಾಲೇಜಿಗೆ 65 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲು ಹಣ ಮಂಜೂರಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts