More

    ನಿರೀಕ್ಷಿತ ಪ್ರಗತಿ ಕಾಣದ ಉದ್ಯೋಗ ಖಾತ್ರಿ

    ಕುಮಟಾ: ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿಲ್ಲ ಎಂದು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಓಂಬುಡ್ಸಮನ್ ಆರ್.ಜಿ. ನಾಯಕ ಹೇಳಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಪಿಡಿಒಗಳನ್ನು ಕರೆದು ರ್ಚಚಿಸಿ, ಸರಿಯಾದ ಸೂಚನೆ ನೀಡಬೇಕು. ಸಂದೇಹಗಳಿದ್ದಲ್ಲಿ ನಿವಾರಿಸಬೇಕು. ನೋಂದಾಯಿತ ಕೂಲಿ ಕಾರ್ವಿುಕರ ವೈಯಕ್ತಿಕ ಹಾಗೂ ಸಾಮೂಹಿಕ ಸೌಲಭ್ಯಗಳನ್ನು ಕಲ್ಪಿಸಲು ತಾಪಂ ಇಒಗಳಿಗೆ ಸೂಚಿಸಲಾಗಿದೆ ಎಂದರು.

    ಗ್ರಾಮೀಣ ಭಾಗದಿಂದ ಕೌಶಲರಹಿತರು ದೂರದ ಶಹರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗಬಾರದು. ಅವರಿರುವ ಸ್ಥಳದಲ್ಲಿಯೇ ವರ್ಷದಲ್ಲಿ ಕನಿಷ್ಟ 100 ದಿನ ಕೆಲಸ ಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 18,000 ಕುಟುಂಬಗಳು ಹೆಸರು ನೋಂದಾಯಿಸಿವೆ ಎಂದರು.

    ತಾಲೂಕಿನಲ್ಲಿ 25 ಕೋ.ರೂ. ಮೊತ್ತದ 1500 ಕಾಮಗಾರಿಗಳ ಕ್ರಿಯಾಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಆದರೆ, 80 ಲಕ್ಷ ರೂ. ವೆಚ್ಚದ ಕೆಲಸ ಮಾತ್ರ ಆಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 550 ಕೋ.ರೂ. ಕ್ರಿಯಾಯೋಜನೆಯಲ್ಲಿ 35,000 ವಿವಿಧ ಕಾಮಗಾರಿ ಮಾಡಲಾಗಿದೆ ಎಂದು ನಾಯಕ ಹೇಳಿದರು.

    ಯೋಜನೆಯಡಿ ಯಂತ್ರಗಳನ್ನು ಗುತ್ತಿಗೆದಾರರನ್ನು ಬಳಸಲು ಅವಕಾಶವಿಲ್ಲ. ಆದರೂ ಜೆಸಿಬಿ ಬಳಸಿ ಗುತ್ತಿಗೆದಾರ ಲಾಭ ಮಾಡಿಕೊಳ್ಳುತ್ತಾರೆ. ಕೆಲ ತಾಲೂಕುಗಳಲ್ಲಿ 50 ರಿಂದ 80 ರೂ. ಕೂಲಿ ನೀಡುತ್ತಿರುವುದರಿಂದ ಕಾರ್ವಿುಕರು ಕೆಲಸಕ್ಕೆ ಬರುತ್ತಿಲ್ಲ. ಕೆಲವೆಡೆ ಬೇರೆ ಕಾರ್ವಿುಕರ ಹೆಸರಲ್ಲಿ ಹಣ ಪಡೆಯುವುದು, ಕಮೀಷನ್ ದಂಧೆ ಮುಂತಾದವು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ಪ್ರಕರಣಗಳಲ್ಲಿ ಇಂಜಿನಿಯರ್​ಗಳು ಶಾಮೀಲಾತಿಯಿಲ್ಲದೇ ಸಾಧ್ಯವಿಲ್ಲ. ಅವರಿಗೂ ಎಚ್ಚರಿಕೆ ನೀಡಲಾಗಿದೆ ಎಂದರು.

    ನಿಗದಿತ ಕನಿಷ್ಟ ಕೂಲಿ ನೀಡಿದರೆ ಉದ್ಯೋಗ ಮಾಡಲು ನೋಂದಾಯಿತ ಉದ್ಯೋಗ ಖಾತ್ರಿ ಕಾರ್ವಿುಕರು ಬರುತ್ತಾರೆ. ಕರೊನಾ ಸಂಕಟ ಕಾಲದಲ್ಲಿ ಇದು ಬಹಳ ಅಗತ್ಯವೂ ಆಗಿದೆ. ಕೃಷಿ- ತೋಟಗಾರಿಕೆಯಲ್ಲಿ ವಿಶೇಷವಾಗಿ ಯೋಜನೆಯ ಲಾಭ ಪಡೆಯಬಹುದು. ಯೋಜನೆ ಪಾರದರ್ಶಕವಾಗಿ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ನಡೆಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಆರ್.ಜಿ. ನಾಯಕ ಹೇಳಿದರು. ತಾಲೂಕು ಪಂಚಾಯಿತಿ ಇಒ ಸಿ.ಟಿ. ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts