More

    ನಿಯಮ ಪಾಲನೆ ಮಾಡದಿದ್ದರೆ ಶಾಸ್ತಿ, ವಿವಿಧ ಇಲಾಖಾಧಿಕಾರಿಗಳಿಂದ ಕ್ರಷರ್‌ಗಳ ಪರಿಶೀಲನೆ

    ಬೆಂಗಳೂರು ಗ್ರಾಮಾಂತರ: ಹೋಬಳಿ ತೈಲಗೆರೆ, ಮುದ್ದನಾಯಕನಹಳ್ಳಿ, ಮುದುಗುರ್ಕಿ, ದಾಸರಹಳ್ಳಿ ಗ್ರಾಮಗಳಲ್ಲಿ ಕ್ರಷರ್ ನಡೆಸುತ್ತಿರುವ ಪ್ರದೇಶಗಳಿಗೆ ಮಂಗಳವಾರ ಅಧಿಕಾರಿಗಳ ತಂಡ ಭೇಟಿ ನೀಡಿ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಿತು.

    ಜಿಲ್ಲೆಯಲ್ಲಿ ಕ್ರಷರ್ ನಡೆಸಲು ಒಟ್ಟು 14 ಪರವಾನಗಿ ನೀಡಲಾಗಿದ್ದು, ಅಂತಹ ಸ್ಥಳಗಳಿಗೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಂದಾಯ ಇಲಾಖೆ, ಪೋಲೀಸ್ ಮತ್ತು ಸ್ಥಳಿಯ ಆಡಳಿತಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಗ್ರಾಮಸ್ಥರು ಹಲವು ದೂರು ನೀಡಿದ್ದು, ಶಬ್ದಮಾಲಿನ್ಯ, ಬೆಳೆ ಮೇಲೆ ಧೂಳು ಆವರಿಸುತ್ತಿರುವುದಾಗಿ ಅಲವತ್ತುಕೊಂಡಿದ್ದಾರೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ರಶ್ಮಿ ತಿಳಿಸಿದರು.

    ಜಿಲ್ಲಾಧಿಕಾರಿಗಳು ಟಾಸ್ಕ್ ೆರ್ಸ್ ರಚಿಸಿದ್ದು, ನಿಯಮ ಪಾಲನೆ ಮಾಡದ ಕ್ರಷರ್ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕ್ರಷರ್‌ಗಳಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅವರ ಆಧಾರ್ ಕಾರ್ಡ್, ದೂರವಾಣಿ ಸಂಖ್ಯೆಯನ್ನು ಇಲಾಖೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಕ್ರಷರ್ ಮಾಲೀಕರಿಂದ ಕಾರ್ಮಿಕರಿಗೆ ಅನ್ಯಾಯ ಆಗದಿರಲು ಈ ನಿರ್ದೇಶನ ನೀಡಲಾಗಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಅರೋಳಿಕರ್ ಮಾಹಿತಿ ನೀಡಿದರು.

    ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರಳುಕುಮಾರ್, ಕಾರಹಳ್ಳಿ ಪಿಡಿಒ ಕವಿತಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts