More

    ನಿಯಮಬಾಹಿರವಾಗಿ ನೌಕರರ ಸೇರ್ಪಡೆ ಆರೋಪ

    ಬೆಳಗಾವಿ: ಗ್ರಾಮ ಪಂಚಾಯಿತಿ ಕ್ಲರ್ಕ್, ಅಕೌಂಟೆಂಟ್ ಕಂ ಬೆರಳಚ್ಚುಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ನಿಯಮಬಾಹಿರವಾಗಿ ಕರ ವಸೂಲಿಗಾರ ವೃಂದದ ನೌಕರರು ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸಿ ಗ್ರಾಪಂ ನೌಕರರ ಸಂಘಟನೆಯ ಸದಸ್ಯರು ಸೋಮವಾರ ಬೆಳಗಾವಿ ಜಿಪಂ ಕಚೇರಿ ಎದುರು ಪ್ರತಿಭಟಿಸಿದರು.

    ಬೆಳಗಾವಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಿಂದ ಪ್ರಕಟಿಸಿರುವ ಕ್ಲರ್ಕ್ ಪಟ್ಟಿಯಲ್ಲಿ ಗ್ರಾಪಂ ಕರ ವಸೂಲಿಗಾರರು ಸೇರ್ಪಡೆಯಾಗಿದ್ದಾರೆ. ಕ್ಲರ್ಕ್ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಗೊಂಡ ಕರ ವಸೂಲಿಗಾರರು ಸರ್ಕಾರದ 1994 ಮತ್ತು 2008ರ ಆದೇಶದಲ್ಲಿ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಹಾಗೂ ಮಾನದಂಡ ಹೊಂದಿಲ್ಲ. ಆದ್ದರಿಂದ ಅವರನ್ನು ಕ್ಲರ್ಕ್ ಪಟ್ಟಿಯಿಂದ ತೆಗೆದು ಕರ ವಸೂಲಿಗಾರರ ಪಟ್ಟಿಗೆ ಸೇರಿಸಬೇಕು ಹಾಗೂ ಈಗಾಗಲೇ ಅನುಮೋದನೆಯಾಗಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಕ್ಲರ್ಕ್ ಕಂ ಡಿಇಒಗಳನ್ನು ಅಂತಿಮ ಪಟ್ಟಿಯಲ್ಲಿ ಕೈ ಬಿಟ್ಟಿದ್ದಾರೆ. ಇದರಿಂದ ಅವರಿಗೆ ಅನ್ಯಾಯವಾಗಿದ್ದು, ಪುನಃ ಅವರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ 4-5 ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಒಂದು ವಾರದಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸಿ, ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜಿಪಂ ಎದುರು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ದಿಲೀಪ ಕಾಂಬಳೆ, ಹಣಮಂತ ಮಡಿವಾಳರ, ಶಿವಾನಂದ ನಿಲೂಗಲ್ಲ, ವಿಠ್ಠಲ ಕೌಂಸಕೊಪ್ಪ, ಸಿದ್ದಣ್ಣ ಹವಳಿ, ಬಸವರಾಜ ತಳಸೆ, ಶೈಲಾ ನಿಪ್ಪಾಣಿಕರ, ವಿಜಯ್ ರವಳೋಜಿ, ಸಂತೋಷ ಹೊಳೆಪ್ಪಗೋಳ, ಅರುಣ ದೇಸಾಯಿ, ಮಹೇಶ ಪಾಟೀಲ, ಮಹಾಂತೇಶ ನಿಚ್ಚಣಕಿ, ಮಂಜುನಾಥ ಹೊನ್ನಪ್ಪಗೋಳ, ಪ್ರಶಾಂತ ಹೊಸಮನಿ, ಮಲ್ಲಪ್ಪ ಕರಿಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts