More

    ನಿಪ್ಪಾಣಿ ಜನರ ಬಹುದಿನದ ಕನಸು ನನಸು

    ನಿಪ್ಪಾಣಿ, ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 1934ರಲ್ಲಿ ಪಟ್ಟಣದ ಗಾಂಧಿ ವೃತ್ತದಲ್ಲಿ ಜರುಗಿದ್ದ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಆ ಸ್ಥಳದಲ್ಲಿ ಅವರ ಪ್ರತಿಮೆ ಅನಾವರಣ ಮಾಡುವ ಐತಿಹಾಸಿಕ ಕ್ಷಣ ನಮಗೆ ಒಲಿದು ಬಂದಿರುವುದು ಜೊಲ್ಲೆ ಕುಟುಂಬದ ಸೌಭಾಗ್ಯ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಇಲ್ಲಿ ಮಹಾತ್ಮ ಗಾಂಧಿ ಚೌಕ್‌ದಲ್ಲಿ ಭಾನುವಾರ ಗಾಂಧೀಜಿ ಪ್ರತಿಮೆ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಅನೇಕ ದಿನಗಳ ಬೇಡಿಕೆ ಈಗ ಈಡೇರಿದೆ ಎಂದರು.
    ಸ್ವಾತಂತ್ರ್ಯದ ನಂತರ ಇಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಬೇಕು ಎಂದು ಅನೇಕರು ಹೇಳಿದ್ದರು. ಆದರೆ, ನಗರಸಭೆ ಸದಸ್ಯೆ ಸೋನಲ್ ಕೋಠಾಡಿಯಾ ಮತ್ತು ರಾಜೇಶ ಕೋಠಾಡಿಯಾ ಇಬ್ಬರೂ ಇಲ್ಲಿ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸಬೇಕೆಂದು ಪಟ್ಟು ಹಿಡಿದಿದ್ದರು. ಅದರಂತೆ ಅವರ ಕನಸು ಇಂದು ಈಡೇರಿದೆ ಎಂದು ತಿಳಿಸಿದರು.

    ಬಹುವರ್ಷಗಳಿಂದ ಮುಚ್ಚಲ್ಪಟ್ಟಿದ್ದ ನಗರದ ಹಳೆಯ ಸರಲಾಬಾಯಿ ಹೆರಿಗೆ ಆಸ್ಪತ್ರೆಯನ್ನೂ ಸಹ ಪುನರಾರಂಭಿಸಬೇಕು ಎಂದು ಇಬ್ಬರು ಸದಸ್ಯರು ಪಟ್ಟು ಹಿಡಿದಿದ್ದರು. ಅದನ್ನೂ ಸಹ ಕೆಲ ತಿಂಗಳ ಹಿಂದೆ ಆರಂಭಿಸಲಾಗಿದ್ದು ಇಲ್ಲಿಯವರೆಗೆ ಸುಮಾರು 6 ಸಾವಿರಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಲಾಗಿದೆ ಹಾಗೂ 30ಕ್ಕೂ ಅಧಿಕ ಸಹಜ ಹೆರಿಗೆ ಮಾಡಿಸಲಾಗಿದೆ ಎಂದು ವಿವರಿಸಿದರು.

    ಬ್ರಹ್ಮಕುಮಾರಿ ಆಶ್ರಮದ ಶಾಖೆಗೂ 10 ಲಕ್ಷ ರೂ. ಅನುದಾನ ಅನುಮೋದನೆಗೊಂಡಿದೆ. ಪೌರಾಯುಕ್ತ ಜಗದೀಶ ಹುಲಿಗೆಜ್ಜೆ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸುಂದರ ಸ್ವಚ್ಛ ಪಟ್ಟಣಕ್ಕೆ ಪರಿಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ತತ್ತ್ವ ಆದರ್ಶಗಳನ್ನು ಮಕ್ಕಳಿಗೆ ಹೇಳಿಕೊಡುವ ಅವಶ್ಯಕವಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿದರು. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ಆಶೀಶ್ ಶಹಾ, ನಗರ ಯೋಜನಾ ಪ್ರಾಧಿಕಾರದ ಚೇರ್ಮನ್ ಅಭಯ ಮಾನವಿ, ಹಾಲಶುಗರ್ಸ್‌ ಸಂಚಾಲಕ ಆರ್.ವೈ.ಪಾಟೀಲ, ಸುರೇಶ ಶೆಟ್ಟಿ, ವಿಭಾವರಿ ಖಾಂಡಕೆ, ಬಾಳು ಚವ್ಹಾಣ, ಸುಭಾಷ ಮೆಹತಾ, ತವನಪ್ಪ ಕಾಗೆ, ಶಿಲ್ಪಿ ಸಂಜೀವ ಸಂಕಪಾಳ, ಸೋನಲ್ ಕೋಠಾಡಿಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts