More

    ನಿಪ್ಪಾಣಿಯ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ

    ನಿಪ್ಪಾಣಿ: ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಕೈಗೊಂಡ ಹಲವಾರು ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿವೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ತಾಲೂಕಿನ ಬುದಲಮುಖ ಹಾಗೂ ಪಾಂಗೇರಿ(ಬಿ) ಗ್ರಾಮಗಳಲ್ಲಿ ಸೋಮವಾರ ಬಿರುಸಿನ ಪ್ರಚಾರ ಕೈಗೊಂಡು ಮಾತನಾಡಿ, ಎರಡು ಬಾರಿ ಶಾಸಕಿಯಾಗಿ ಬುದಲಮುಖ ಗ್ರಾಮದಲ್ಲಿ 10.40 ಕೋಟಿ ರೂ.ಕ್ಕಿಂತ ಅಧಿಕ ಮತ್ತು ಪಾಂಗೇರಿ(ಬಿ) ಗ್ರಾಮದಲ್ಲಿ 13 ಕೋಟಿ ರೂ.ಕ್ಕಿಂತ ಹೆಚ್ಚಿನ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ, ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದೇನೆ. ಕ್ಷೇತ್ರದ ಜನತೆ ನನ್ನ ಮೇಲಿಟ್ಟ ಭರವಸೆ ಉಳಿಸಿಕೊಂಡಿದ್ದು, ಪ್ರಸಕ್ತ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬುದಲಮುಖ ಗ್ರಾಪಂ ಸದಸ್ಯೆ ರೂಪಾಲಿ ಪಾಟೀಲ, ಕವಿತಾ ಕಾಂಬಳೆ, ಸದಾಶಿವ ಪಾಟೀಲ, ಬಾಳಾಸಾಹೇಬ ದೇವಡಕರ, ಧೋಂಡಿರಾಮ ಕನಸೆ, ಶಿವಾಜಿ ಕುಂಬಾರ, ಸರ್ಜೆರಾವ ಕಾಂಬಳೆ, ಬಾಳು ಪಾಟೀಲ, ದತ್ತಾ ನಾರೆ, ನಿವೃತ್ತಿ ಹೆಗಡೆ, ತುಕಾರಾಮ ಸಾಂಡುಗಡೆ, ಪಾಂಗೇರಿ(ಬಿ) ಗ್ರಾಮದ ಗ್ರಾಪಂ ಸದಸ್ಯ ಆನಂದ ಕುಂಬಾರ, ಕವಿತಾ ದೇಶಮುಖ, ಶಾಮರಾವ ಜಾಧವ, ಶಿವಾಜಿ ಚೌಗಲೆ, ಶೋಭಾ ಜಾಧವ, ರೇಷ್ಮಾ ಕುಂಬಾರ ಇತರರಿದ್ದರು.

    ಕೇಂದ್ರ ಸಚಿವ ಅಠವಳೆ ಪ್ರಚಾರ ಇಂದು

    ನಿಪ್ಪಾಣಿ: ಕೇಂದ್ರ ಸಚಿವ ರಾಮದಾಸ್ ಅಠವಳೆ ಮೇ 2ರಂದು ತಾಲೂಕಿನ ಗಳತಗಾದಲ್ಲಿ ಸಂಜೆ 5ಕ್ಕೆ ಹಮ್ಮಿಕೊಂಡಿರುವ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಪ್ರಚಾರ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts