More

    ನಿಡಸೋಸಿಯಲ್ಲಿ ಮಹಾಶಿವರಾತ್ರಿ ಬೆಳ್ಳಿ ರಥೋತ್ಸವ ಸಂಭ್ರಮ

    ಸಂಕೇಶ್ವರ: ಸಮೀಪದ ನಿಡಸೋಸಿಯ ದುರದುಂಡೀಶ್ವರರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳ್ಳಿ ರಥದ ಭವ್ಯ ಮೆರವಣಿಗೆ ಸಕಲ ವಾದ್ಯಮೇಳಗಳೊಂದಿಗೆ ಭಕ್ತರು ಸಂಭ್ರಮದಿಂದ ನೆರವೇರಿಸಿದರು.

    ಮಠಕ್ಕೆ ಕಾಣಿಕೆ ರೂಪದಲ್ಲಿ ಬಂದ ಬೆಳ್ಳಿ ಒಟ್ಟುಗೂಡಿಸಿ ಭಕ್ತರ ಆಶಯದಂತೆ ಬೆಳ್ಳಿ ರಥ ನಿರ್ಮಿಸಲಾಗಿದ್ದು, ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮಾಜಿ ಸಚಿವ ಎ.ಬಿ.ಪಾಟೀಲ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ದಾರಿಯುದ್ದಕ್ಕೂ ರಂಗೋಲಿ ಬಿಡಿಸಿ, ತಳಿರು-ತೋರಣ ಕಟ್ಟಿ, ಬಿಂದಿಗೆ ಮೂಲಕ ನೀರೆರೆದು ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು. ಡೊಳ್ಳು ವಾದನ ಜನಮನ ರಂಜಿಸಿತು. ಹಿರೇಮಠ ಮನೆತನದವರು ವಿಶೇಷ ಪೂಜೆ ಸಲ್ಲಿಸಿದರು. ಲಕ್ಷ್ಮೀ ಓಣಿ, ಕುರುಬರ ಓಣಿ, ವಾಡೇದ ಓಣಿ, ಮಠದ ಓಣಿ ಮಾರ್ಗವಾಗಿ ಹನುಮಾನ ಗಲ್ಲಿ, ಬೋರಗಲ್ಲ ರೋಡವರೆಗೂ ಸಂಚರಿಸಿತು. ನಿಡಸೋಸಿ ಗೇಟ ಬಳಿಯಿರುವ ಮಹಾದ್ವಾರದ ಗೋಪುರಗಳಿಗೆ ಕಳಸಾರೋಹಣ ನೆರವೇರಿಸಲಾಯಿತು. ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಕಮತೇನಟ್ಟಿಯ ಗುರುದೇವರು, ಹಾರನಹಳ್ಳಿಯ ಚೇತನ ದೇವರು, ಮಾಜಿ ಸಚಿವರಾದ ಎ.ಬಿ. ಪಾಟೀಲ, ಶಶಿಕಾಂತ ನಾಯಿಕ, ಹಿರಾಶುಗರ್ಸ್‌ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ, ಜಗದೀಶ ಕವಟಗಿಮಠ, ನಾಗೇಶ ಕಿವಡ, ಬಸನಗೌಡ ಪಾಟೀಲ, ನಿರಂಜನಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts