More

    ನಾಳೆಯಿಂದ ಕುಂದಾನಗರಿ ವೈಭವ

    ರಾಮದುರ್ಗ, ಬೆಳಗಾವಿ: ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್ಸ್‌, ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೆಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕವು ನವದೆಹಲಿಯ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೇಷನ್ ಮತ್ತು ಜಿಲ್ಲಾ ಘಟಕದ ನೇತೃತ್ವದಲ್ಲಿ ಪಟ್ಟಣದಲ್ಲಿ ಕುಂದಾನಗರಿ ವೈಭವ-2022 ಮಹಾ ಅಧಿವೇಶನ ಕಾರ್ಯಕ್ರಮ ಅ. 12, 13ರಂದು ಜರುಗಲಿದೆ ಎಂದು ಸಂಘದ ಅಧ್ಯಕ್ಷ ಕೆ. ನರಸಿಂಹಮೂರ್ತಿ ಅಪ್ಪಣ್ಣ ಹೇಳಿದರು.

    ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೆ ರಾಜ್ಯದಲ್ಲಿ 16 ಮಹಾ ಅಧಿವೇಶನಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, 17ನೇ ಅಧಿವೇಶನವನ್ನು ರಾಮದುರ್ಗದಲ್ಲಿ ಎರಡು ದಿನಗಳ ಕಾಲ ಪಟ್ಟಣದ ಹೊರವಲಯದ ರಾಠಿ ಗೆಸ್ಟ್‌ಹೌಸ್ ಮತ್ತು ಎಸ್.ಜಿ. ಕಲಾಲ್ ಗೆಸ್ಟ್ ಹೌಸ್‌ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

    ಒಟ್ಟು 14 ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಮಹಾ ಅಧಿವೇಶನದಲ್ಲಿ ಶಾಮಿಯಾನಕ್ಕೆ ಬೇಕಾದ ಹೊಸ ಬಗೆಯ ವಸ್ತುಗಳನ್ನೊಳಗೊಂಡ 100 ಮಳಿಗೆಗಳನ್ನು ತೆರೆಯಲಾಗುವುದು. ವೃತ್ತಿ ನಿರತರು ಎದುರಿಸುತ್ತಿರುವ ಸಮಸ್ಯೆ ಮತ್ತು ಈ ವರೆಗೆ ಸಂಘ ಕೈಗೊಂಡ ಹೋರಾಟ ಹಾಗೂ ಸಾಮಾಜಿಕ ಚಟುವಟಿಕೆಗಳ ಮೇಲೆ ಸಮಗ್ರ ಬೆಳಕು ಚೆಲ್ಲುವ ಸಲುವಾಗಿ ಆಯೋಜಿಸಲಾಗಿದೆ ಎಂದರು.

    ಅಧಿವೇಶನದಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳು, ಸರ್ವ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ಶಾಸಕರು, ರಾಜ್ಯ ಮತ್ತು ರಾಷ್ಟ್ರ ಘಟಕದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ರಾಜ್ಯ ಗೌರವ ಪ್ರಧಾನ ಕಾರ್ಯದರ್ಶಿ ಮೋಹನ ಗಜಕೋಶ ಮಾತನಾಡಿ, ಶಾಮಿಯಾನ ವೃತ್ತಿನಿರತರು ಅನುಕೂಲಕ್ಕಾಗಿ ದೇಶದ ವಿವಿಧ ಶಾಮಿಯಾನ ಸಾಮಗ್ರಿ ತಯಾರಿಕೆಯ ಕಂಪನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಅಧಿವೇಶನ ಯಶಸ್ಸಿಗೆ 9 ಸಮಿತಿ ರಚಿಸಲಾಗಿದ್ದು, 3 ತಿಂಗಳಿನಿಂದ ನಿರಂತರ ಶ್ರಮವಹಿಸಲಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಬಿ.ಎಂ. ಸೋಮಶೇಖರ, ಖಚಾಂಚಿ ಈ. ಸುಬ್ರಮಣ್ಯಂ, ಉಪಾಧ್ಯಕ್ಷರಾದ ಮಾಣಿಕಚಂದ್ ಲಾಡರ್, ರಾಜಕುಮಾರ ತೊರಗಲ್ಲ, ಚಂದ್ರಶೇಖರ ಹಣವಾಳ, ಸುರೇಶ ಕಲಬರ್ಗಿ, ಜಿಲ್ಲಾಧ್ಯಕ್ಷ ಪುಂಡಲೀಕ ಗೌಳಿ, ಪ್ರಧಾನ ಕಾರ್ಯದರ್ಶಿ ರಾಜು ಕನೇರಿ, ಖಚಾಂಚಿ ಗುಡುಸಾಬ್ ನಿಂಗಾಪೂರ, ಸೋಮನಾಥ ಗವನಾಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts