More

    ನಾಳೆಯಿಂದ ಕಬ್ಬು ಕಟಾವು, ಸಾಗಣೆ ಬಂದ್

    ಕಾಗವಾಡ, ಬೆಳಗಾವಿ: ಸ್ವಾಭಿಮಾನಿ ಶೇತ್ಕರಿ ಸಂಘಟನೆ ವತಿಯಿಂದ ಮಹಾರಾಷ್ಟ್ರದಲ್ಲಿ ನ.17 ಮತ್ತು 18 ರಂದು ಕಬ್ಬು ಕಟಾವು, ಸಾಗಣೆ ಬಂದ್ ಮಾಡಿ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ಹೇಳಿದರು.

    ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಬಸವೇಶ್ವರ ಏತ ನೀರಾವರಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನೀಡಿರುವ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಜತೆಗೆ 200 ರೂ. ಹೆಚ್ಚು ನೀಡಬೇಕು. ಪ್ರಸಕ್ತ ಹಂಗಾಮಿನಲ್ಲಿ ನುರಿಸಿದ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಸೇರಿ 350 ರೂ. ಹೆಚ್ಚು ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಕಬ್ಬು ಕಟಾವು ಹಾಗೂ ಸಾಗಣಿ ಬಂದ್ ಮಾಡಿ, ಪ್ರತಿಭಟನೆ ಕೈಗೊಳ್ಳಲಿದ್ದೇವೆ. ಮಹಾರಾಷ್ಟ್ರ ಕಾರ್ಖಾನೆಗಳಿಗೆ ಕರ್ನಾಟಕ ರೈತರು ಕಬ್ಬು ಸಾಗಿಸಲಾಗುವುದಿಲ್ಲ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದರು.

    ಮುಖಂಡರಾದ ತಮ್ಮಣ್ಣ ತಮದಡ್ಡಿ, ಸುರೇಶ ಚೌಗುಲಾ, ಭೀಮು ಅಕಿವಾಟೆ, ಅಪ್ಪಾಸಾಬ ಚೌಗುಲೆ, ರಾಜು ಪಾಟೀಲ, ಆದಿನಾಥ ಬಿಂದಗೆ, ಪ್ರಕಾಶ ಹೆಮಗೀರೆ, ದಾದುಗೌಡಾ ಪಾಟೀಲ, ಸುನೀಲ ಕಾತ್ರಾಳೆ, ಧೂಳಪ್ಪ ಅಕಿವಾಟೆ, ಜಗದೀಶ ಕುಸನಾಳೆ, ಚಿದಾನಂದ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts