More

    ನಾಲ್ಕೇ ರಸ್ತೆಗಳಲ್ಲಿ 10 ಟನ್ ಕಸ ಸಂಗ್ರಹ: ಹೊಸ ವರ್ಷಾಚರಣೆ ಹಿನ್ನೆಲೆ, ಬೆಳಗಾಗುವ ವೇಳೆಗೆ ಸ್ವಚ್ಛಗೊಳಿಸಿದ ಸಿಬ್ಬಂದಿ

    ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಸಹಸ್ರಾರು ಯುವಕ, ಯುವತಿಯರು ಡಿ.31ರ ರಾತ್ರಿ ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ರೆಸಿಡೆನ್ಸಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್​ನಲ್ಲಿ ಜಮಾಯಿಸಿ, ಕುಣಿದು ಕುಪ್ಪಳಿಸುವುದು ಸಾಮಾನ್ಯ ಸಂಗತಿ. ಇದರಿಂದಾಗಿ ಒಂದು ರಾತ್ರಿಯಲ್ಲೇ ಈ ನಾಲ್ಕು ರಸ್ತೆಗಳಲ್ಲಿ 10 ಟನ್ ಕಸ ಉತ್ಪಾದನೆಯಾಗಿತ್ತು.

    ತಿಂಡಿ, ತಿನಿಸು, ಮದ್ಯದ ಬಾಟಲ್, ನೀರಿನ ಬಾಟಲ್ ಸೇರಿ ಹಲವು ಬಗೆಯ ತ್ಯಾಜ್ಯವನ್ನು ರಸ್ತೆ, ಪಾದಚಾರಿ ಮಾರ್ಗದಲ್ಲಿ ಹಾಕಲಾಗಿತ್ತು. ಬೆಳಗಿನ ಜಾವ 3 ಗಂಟೆಗೇ ಈ ರಸ್ತೆಗಳಲ್ಲಿ ಬಿಬಿಎಂಪಿ ಪೌರಕಾರ್ವಿುಕರು ಸ್ವಚ್ಛತಾ ಕಾರ್ಯ ಆರಂಭಿಸಿದರು. ಪೂರ್ವದಲ್ಲಿ ಸೂರ್ಯ ಮೂಡುವ ವೇಳೆಗೆ ಒಟ್ಟು 10 ಟನ್ ತ್ಯಾಜ್ಯವನ್ನು ತೆರವುಗೊಳಿಸಿ, ರಸ್ತೆಗಳನ್ನು ಸ್ವಚ್ಛ ಮತ್ತು ಸುಂದರಗೊಳಿಸಿದರು.

    ಕಸ ಹುಡುಕುವ ಸ್ಪರ್ಧೆ: ಹೊಸ ವರ್ಷ ನಡೆದ ಸ್ಥಳ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಬಿಬಿಎಂಪಿ ಹಾಗೂ ದಿ ಅಗ್ಲಿ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಬುಧವಾರ ನಾಲ್ಕೂ ರಸ್ತೆಗಳ ಮೂರು ಕಿ.ಮೀ. ವಿಸ್ತೀರ್ಣದಲ್ಲಿ ಕಸ ಹುಡುಕುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅಂದಾಜು 40 ಮಂದಿ ಭಾಗವಹಿಸಿದ್ದರು. ನಾಲ್ಕು ರಸ್ತೆಗಳಲ್ಲಿ ಒಂದು ಇಂಚು ಬಿಡದಂತೆ ಇವರೆಲ್ಲರೂ ತ್ಯಾಜ್ಯ ಹುಡುಕಿದರು.

    ಪಾಲಿಕೆಯ ಪೌರಕಾರ್ವಿುಕರು ರಸ್ತೆಗಳನ್ನು ಮೊದಲೇ ಸ್ವಚ್ಛಗೊಳಿಸಿದ್ದರು. ಹೀಗಾಗಿ ಇವರಿಗೆ ಪಾದಚಾರಿಗಳು ಅಲ್ಲಲ್ಲಿ ಹಾಕಿದ್ದ ಅಂದಾಜು 8 ಕೆ.ಜಿ. ತ್ಯಾಜ್ಯ ಮಾತ್ರ ಪತ್ತೆ ಮಾಡಲು ಸಾಧ್ಯವಾಯಿತು. ಈ 8 ಕೆ.ಜಿ.ಯ ಪೈಕಿ ಅತಿಹೆಚ್ಚು ಪ್ರಮಾಣದ ತ್ಯಾಜ್ಯ ಹುಡುಕಿದ ಐವರಿಗೆ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ಬಹುಮಾನ ನೀಡಿದರು.

    ದಿ ಅಗ್ಲಿ ಇಂಡಿಯನ್ ಸಂಸ್ಥೆಯೇ ಸ್ಪರ್ಧೆ ಆಯೋಜಿಸಿ, ಬಹುಮಾನಗಳನ್ನು ನೀಡಿತು. ಹೀಗಾಗಿ, ಪಾಲಿಕೆ ವತಿಯಿಂದ ಯಾವುದೇ ಹಣ ವೆಚ್ಚವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

    ಹೊಸ ವರ್ಷಕ್ಕೂ ಮುನ್ನಾದಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಚರ್ಚ್ ಸ್ಟ್ರೀರ್ಟ್​ಗಳಲ್ಲಿ ಸಾವಿರಾರು ಜನರು ಸೇರುತ್ತಾರೆ. ಆಗ ಸಹಜವಾಗಿ ಅತಿಹೆಚ್ಚು ಕಸ ಉತ್ಪತ್ತಿಯಾಗುತ್ತದೆ. ಪಾಲಿಕೆಯ ಪೌರಕಾರ್ವಿುಕರು ಬೆಳಗಿನ ಜಾವ 3 ಗಂಟೆಗೆ ಕಸ ತೆರವುಗೊಳಿಸಿದರು. ಒಟ್ಟು 10 ಟನ್ ಕಸವನ್ನು ಕಾಂಪ್ಯಾಕ್ಟರ್​ಗಳ ಮೂಲಕ ವಿಲೇವಾರಿ ಮಾಡಿದರು.

    | ಡಿ. ರಂದೀಪ್ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts