More

    ನಾಲ್ಕು ಸಾವಿರದತ್ತ ಕರೊನಾ ದಾಪುಗಾಲು

    ಧಾರವಾಡ: ಜಿಲ್ಲೆಯಲ್ಲಿ ಗುರುವಾರ 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಪೀಡಿತರ ಸಂಖ್ಯೆ 3908ಕ್ಕೆ ಏರಿದೆ. ಇದುವರೆಗೆ 1,807 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1977 ಪ್ರಕರಣಗಳು ಸಕ್ರಿಯವಾಗಿವೆ. 39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 124 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

    ಗುರುವಾರ ಪತ್ತೆಯಾದ ಸ್ಥಳಗಳು:

    ಧಾರವಾಡ ತಾಲೂಕು: ಮದಿಹಾಳ, ಜನ್ನತ ನಗರ, ಲಕಮಾಪುರ ಗ್ರಾಮ, ಲಕ್ಷ್ಮೀನಗರ ವಿದ್ಯಾಗಿರಿ, ರಸೂಲಪುರ ಓಣಿ, ಗ್ರಾಮೀಣ ಪೊಲೀಸ್ ಕ್ವಾರ್ಟರ್ಸ್, ವಿಜಯನಗರದ ಬನಶ್ರೀನಗರ, ಕೊಪ್ಪದಕೇರಿ, ಹೆಬ್ಬಳ್ಳಿ ಅಗಸಿ, ವಿದ್ಯಾರಣ್ಯ ಶಾಲೆ, ಹಾರೋಬೆಳವಡಿ ಗ್ರಾಮ, ಆಕಾಶವಾಣಿ ಕೆಸಿಡಿ ರಸ್ತೆ, ಎತ್ತಿನಗುಡ್ಡ, ಮಾಳಮಡ್ಡಿಯ ಎಮ್ಮಿಕೇರಿ, ಎಸ್​ಡಿಎಂ ಸ್ಟಾಫ್ ವಸತಿ ನಿಲಯ, ಯಾಲಕ್ಕಿ ಶೆಟ್ಟರ ಕಾಲನಿ, ಗರಗ ಗ್ರಾಮದ ಜೈನರ ಓಣಿ, ಕ್ಯಾರಕೊಪ್ಪ ಗ್ರಾಮದ ಆನಂದನಗರ, ಹೊನ್ನಾಪುರ ಗ್ರಾಮದ ಹುದ್ದಾರ ಓಣಿ, ಮುರುಘರಾಜೇಂದ್ರ ನಗರ, ಮಾದನಶೆಟ್ಟಿ ಓಣಿ, ಮಾಳಾಪುರ ಕುಂಬಾರ ಓಣಿ, ಹೊಸಯಲ್ಲಾಪುರ, ಆರ್.ಎನ್. ಶೆಟ್ಟಿ ಕ್ರೀಡಾಂಗಣ ಪ್ರದೇಶ, ಎಸ್​ಡಿಎಂ ಆಸ್ಪತ್ರೆ, ಮರಾಠಾ ಕಾಲನಿ, ವನಸಿರಿನಗರ ಸತ್ತೂರ, ಪ್ರಧಾನ ಅಂಚೆ ಕಚೇರಿ ಹತ್ತಿರ, ವಿನಾಯಕನಗರ ನವಲೂರ, ಸಿದ್ಧಾರ್ಥ ಕಾಲನಿ, ಕುಂಬಾರ ಓಣಿ, ಮದಿಹಾಳ, ಮಹಾಂತ ಕಾಲನಿ, ಲಕಮನಹಳ್ಳಿ, ನವಲಗುಂದ ಓಣಿ, ಮೂಕಾಂಬಿಕಾನಗರ, ಜನ್ನತನಗರ, ಲಕಮನಹಳ್ಳಿ ದೊಡ್ಡವಾಡ ಆಯಿಲ್ ಮಿಲ್, ಶೆಟ್ಟರ ಕಾಲನಿ.

    ಹುಬ್ಬಳ್ಳಿ ತಾಲೂಕು: ನವನಗರದ ಪಂಚಾಕ್ಷರಿ ನಗರ, ಕೆಸಿಸಿ ಬ್ಯಾಂಕ್, ಶಾಂತಾನಗರದ ಬಸವ ಲೇಔಟ್, ಹೊಸೂರ 3ನೇ ಕ್ರಾಸ್, ಚಾಲುಕ್ಯನಗರ, ಮಧುರಾ ಕಾಲನಿ, ತಬೀಬಲ್ಯಾಂಡ್, ಅಯೋಧ್ಯಾನಗರ, ಸಿಟಿ ಪಾರ್ಕ್, ವಾಸವಿನಗರ, ಹಬೀಬ್ ಗಂಜ್ ಗುರಾಣಿ ಪ್ಲಾಟ್, ಉಣಕಲ್ಲ ಗಾಣಿಗೇರ ಓಣಿ, ಇಂದಿರಾನಗರ, ಕುಸುಗಲ್ ಓಣಿ, ಮೌಲಾಲಿ ಗ್ರೌಂಡ್ ರೈಲ್ವೆ ಸುರಕ್ಷಾದಳ, ಅಂಬೇಡ್ಕರ್ ಕಾಲನಿ, ಅಯೋಧ್ಯಾನಗರ, ಗದಗ ರಸ್ತೆ ರೈಲ್ವೆ ಕ್ವಾರ್ಟರ್ಸ್ ವಿನೋಬಾನಗರ, ಗಾಂಧಿವಾಡ ಎಬಿಎನ್ ಚರ್ಚ್ ಹತ್ತಿರ, ಗಾಮನಗಟ್ಟಿ ಬಾಗವಾನ ಓಣಿ, ಪಾರಸವಾಡಿ ಲೇಔಟ್, ಘಂಟಿಕೇರಿ, ನೇಕಾರನಗರ, ಲಿಂಗರಾಜನಗರ, ನವನಗರ, ನೇಕಾರನಗರ ರಣದಮ್ಮ ಕಾಲನಿ, ಸಿದ್ಧಾರೂಢ ಮಠ ಮಗಜಿಕೊಂಡಿ ಲೇಔಟ್, ಬೆಂಡಿಗೇರಿ ಓಣಿ ಪೈ ಮಹಾರಾಜ ಬಿಲ್ಡಿಂಗ್ ಹತ್ತಿರ, ಗುಡಿಹಾಳ ರಸ್ತೆಯ ಅಧ್ಯಾಪಕನಗರ, ಕೇಶ್ವಾಪುರದ ಕೆಎಚ್​ಬಿ ಕಾಲನಿಯ ಸುಭಾಷನಗರ, ಅಕ್ಷಯ ಎನ್​ಕ್ಲೇವ್, ವೆಂಕಟೇಶ್ವರ ಕಾಲನಿ, ವಿದ್ಯಾನಗರದ ಶಕುಂತಲಾ ಆಸ್ಪತ್ರೆ, ಸಿದ್ಧಾರೂಢನಗರ, ರೇಣುಕಾನಗರ, ಗೋಕುಲ ರಸ್ತೆಯ ನೆಹರುನಗರ, ಭವಾನಿನಗರ ಸಹಜೀವನ ಅಪಾರ್ಟ್​ವೆುಂಟ್, ಕೆ.ಕೆ. ನಗರ ಯಲ್ಲಾಪುರ ಓಣಿ, ಗಾಂಧಿನಗರ, ಹೆಬಸೂರ ಭೂಮಣ್ಣವರ ಓಣಿ, ಕೇಶ್ವಾಪುರ ಭವಾನಿನಗರ, ವಿಶ್ವೇಶ್ವರನಗರ, ಮೇದಾರ ಓಣಿ, ಹಳೇಹುಬ್ಬಳ್ಳಿ ಅರವಿಂದನಗರ, ಇಸ್ಲಾಮಪುರ ಓಣಿ, ಬೆಂಡಿಗೇರಿ ಓಣಿ, ಗೋಪನಕೊಪ್ಪ, ಮಂಟೂರ ರಸ್ತೆ, ಗದಗ ರಸ್ತೆ ರೈಲ್ವೆನಗರ, ಸಾಯಿನಗರ ಉಣಕಲ್ಲ, ತಾರಿಹಾಳ ಶ್ರುತಿನಗರ, ವಿಶಾಲನಗರ, ಮೇದಾರ ಓಣಿ, ಈಶ್ವರನಗರ, ಸಂತೋಷನಗರ, ಬಸವೇಶ್ವರನಗರ, ಚನ್ನಾಪೂರ, ಶಾಂತಿನಿಕೇತನ ಕಾಲನಿ, ಪ್ರೆಸಿಡೆಂಟ್ ಹೋಟೆಲ್ ಉಣಕಲ್, ಗಣೇಶಪೇಟೆ, ವಾಕರಸಾಸಂ ನಗರ ಘಟಕ ಡಿಪೋ 1, ಬಾಪೂಜಿನಗರ, ಮದರ್​ವೆುೕರಿ ಶಾಲೆ, ವಿದ್ಯಾನಗರ ಕಿನ್ನಾಳ ಬಿಲ್ಡಿಂಗ್ ಎದುರಿಗೆ, ಇಸ್ಲಾಂಪುರ ಓಣಿ ಸುಂಡಕೆ ಹಳ್ಳ, ಸಾಯಿನಗರ ಸಾಯಿ ಕಾಲನಿ, ಶಿರೂರ ಪಾರ್ಕ್ ಪ್ರಶಾಂತ ಕಾಲನಿ, ಎಪಿಎಂಸಿ ಈಶ್ವರನಗರ, ಇಂಡಿ ಪಂಪ್ ಆಸರ ಓಣಿ, ಮಕಾನದಾರ ಗಲ್ಲಿ.

    ಅಳ್ನಾವರ ತಾಲೂಕಿನ ಇಂದಿರಾನಗರ. ಕುಂದಗೋಳ ಬಸ್ ನಿಲ್ದಾಣ ಹತ್ತಿರ, ಪಟ್ಟಣದ ಸಿದ್ಧಾರೂಢನಗರ, ಕಾಳಿದಾಸನಗರ, ಕಮಡೊಳ್ಳಿ ಗ್ರಾಮ, ಬೆಟದೂರ, ಮಂಡಿಗನಾಳ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹತ್ತಿರ, ಬಿಳೆಬಾಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರ, ಹಿರೇನರ್ತಿ, ಗುಡಗೇರಿ ಜೈನರ ಓಣಿ, ಮುಳ್ಳೊಳ್ಳಿ, ಯರಗುಪ್ಪಿ ಗ್ರಾಮದ ಮಂಗೋಣಿಯರ ಓಣಿ.

    ಕಲಘಟಗಿ ತಾಲೂಕಿನ ಹುಲಿಕಟ್ಟಿ ಗ್ರಾಮ, ಬೆಂಡಲಗಟ್ಟಿ, ಕಾಮಧೇನು, ಬಸವನಕೊಪ್ಪ ಗ್ರಾಮ.

    ನವಲಗುಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣ, ಬಸದಿ ಓಣಿ, ಮೊರಬ ಗ್ರಾಮ, ಅಣ್ಣಿಗೇರಿ ಪಟ್ಟಣ.

    ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಬಿಆರ್​ಡಿ ರಸ್ತೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಬನೂರ, ತಡಸ ಪೊಲೀಸ್ ಠಾಣೆ, ಸವಣೂರಿನ ತೊಂದೂರು, ವಿಜಯಪುರ ಜಿಲ್ಲೆಯ ತಾಳಿಕೋಟಿಯ ಎಪಿಎಂಸಿ ಯಾರ್ಡ್. ಕೊಪ್ಪಳದ ಗಣೇಶನಗರ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಖುದಾನಪುರ ಗ್ರಾಮಗಳಲ್ಲಿ ಕರೊನಾ ಪ್ರಕರಣಗಳು ವರದಿಯಾಗಿವೆ.

    ಕರೊನಾ ವಿರುದ್ಧ ಜಾಗೃತಿ ಗೀತೆ ರಚನೆ

    ಹುಬ್ಬಳ್ಳಿ: ಕರೊನಾ ವಿರುದ್ಧ ಜಾಗೃತಿ ಮೂಡಿಸಲು ಇಲ್ಲಿಯ ನವಋತು ಕ್ರಿಯೇಷನ್ಸ್​ದವರು ‘ಪರಿವರ್ತನೆ ಜಗದ ನಿಯಮ’ ಎಂಬ ಶೀರ್ಷಿಕೆಯ ವಿಡಿಯೋ ಗೀತೆ ನಿರೂಪಿಸಿದ್ದು, ಯೂ ಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದಾರೆ.

    ನಿಯಮ ಪಾಲನೆಯಿಂದ ಕರೊನಾ ಹರಡುವಿಕೆ ತಡೆಗಟ್ಟುವ ಮತ್ತು ಆತ್ಮನಿರ್ಭರ ಭಾರತದ ಸಂದೇಶವನ್ನು ಈ ಗೀತೆ ಒಳಗೊಂಡಿದೆ. ನವೀನ ಶೆಟ್ಟರ್ ಸಾಹಿತ್ಯ, ವೈಭವ ಭಟ್ ಸಂಗೀತ ನಿರ್ದೇಶನ, ರಕ್ಷಿತಾ ಭಟ್ ಹಾಗೂ ಭದ್ರಿಪ್ರಸಾದ ಗಾಯನ, ತರುಣ ಶೆಟ್ಟಿ, ವಿಜಯ ಇಬ್ರಾಹಿಂಪುರ ಛಾಯಾಗ್ರಹಣ, ಜಿ.ಕೆ. ಮಿಲ್ಕ್ ಇಂಡಸ್ಟ್ರೀಸ್ ನೆರವಿನ ನಿರ್ವಣದ ಗೀತೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಅಶ್ವಿನಿ ಮಜ್ಜಗಿ, ಮಾಜಿ ಸದಸ್ಯರಾದ ಪಿ.ಕೆ. ರಾಯನಗೌಡರ, ಉಮೇಶ ಕೌಜಗೇರಿ ಜಾಗೃತಿ ಸಂದೇಶ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಪರೀಕ್ಷೆಗೆ 12 ವಿಶೇಷ ತಂಡ ರಚನೆ

    ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಆರಂಭಿಸಿರುವ ರ್ಯಾಪಿಡ್ ಆಂಟಿಜನ್ ಕರೊನಾ ಪರೀಕ್ಷೆಯನ್ನು ಯಶಸ್ವಿಗೊಳಿಸಲು 12 ವಿಶೇಷ ತಂಡ ರಚಿಸಲಾಗಿದೆ. ತಂಡಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ಕೋವಿಡ್- 19 ನಿಗ್ರಹ ಕುರಿತು ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಕರೊನಾ ಪರೀಕ್ಷೆಯನ್ನು ಗುರಿಗಿಂತ ಹೆಚ್ಚು ಮಾಡಲಾಗುತ್ತಿದೆ. ಇದರಿಂದಾಗಿ ಹೆಚ್ಚು ಜನರಲ್ಲಿ ಪಾಸಿಟಿವ್ ಕಂಡು ಬರುತ್ತಿದೆ. ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಅನಗತ್ಯ ಸಂಚಾರ ನಿಯಂತ್ರಿಸಿ, ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶುಕ್ರವಾರದಿಂದ ಹುಬ್ಬಳ್ಳಿಯ 8 ಮತ್ತು ಧಾರವಾಡದ 4 ಮಾರುಕಟ್ಟೆ ಪ್ರದೇಶಗಳಲ್ಲಿ ರ್ಯಾಪಿಡ್ ಆಂಟಿಜನ್ ಕರೊನಾ ಪರೀಕ್ಷೆ ಮುಂದುವರಿಸಲಾಗುವುದು. ಕೆಲವರು ಅಸಹಕಾರ ಹಾಗೂ ಅಂಗಡಿಗಳನ್ನು ಮುಚ್ಚುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಮಾರ್ಕೆಟ್ ಪ್ರದೇಶದ ಪ್ರತಿ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಯನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ವಿಶೇಷ ತಂಡ ರಚಿಸಲಾಗಿದೆ. ಆರೋಗ್ಯ, ಕಂದಾಯ, ಪಾಲಿಕೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಿಬ್ಬಂದಿ ಇರುತ್ತಾರೆ ಎಂದರು.

    ರ್ಯಾಪಿಡ್ ಆಂಟಿಜನ್ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬರುವ ಅಂಗಡಿ, ವಾಣಿಜ್ಯ ಸಂಕೀರ್ಣಗಳನ್ನು ಸ್ಥಳದಲ್ಲಿಯೇ ಸೀಲ್​ಡೌನ್ ಮಾಡಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೀದಿ ಬದಿಯ ವ್ಯಾಪಾರಿಗಳ ಪ್ರದೇಶವನ್ನು ನಿರ್ಬಂಧಿಸಲಾಗುತ್ತದೆ. ಪಾಸಿಟಿವ್ ಬರುವ ವ್ಯಕ್ತಿಗಳಿಗೆ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಕ್ಷಣ ಏರ್ಪಾಡು ಮಾಡಲಾಗುತ್ತದೆ ಎಂದರು.

    ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಕರೊನಾ ಪರೀಕ್ಷೆಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಾರ್ವಜನಿಕರಿಂದ ಅಸಹಕಾರ, ತೊಂದರೆಯಾದರೆ ತಕ್ಷಣ ಚಾಲುಕ್ಯ ವಾಹನಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ವಿಳಂಬ, ಅಸಹಕಾರ ಮತ್ತು ಅನಗತ್ಯ ತೊಂದರೆ, ಕಿರಿಕಿರಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಡಾ. ಷಣ್ಮುಖ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಹುಡಾ ಆಯುಕ್ತ ಎನ್.ಎಂ. ಕುಮ್ಮಣ್ಣವರ, ಡಿಎಚ್​ಒ ಡಾ. ಯಶವಂತ ಮದೀನಕರ, ಡಿವೈಎಸ್​ಪಿ ರವಿ ನಾಯಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಇತರರಿದ್ದರು.

    ಕೋವಿಡ್​ನಿಂದ 8 ಜನರ ಮರಣ

    ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ 7 ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಬ್ಬ ವೃದ್ಧೆ ಸೇರಿ 8 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುರುವಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ 74 ವರ್ಷದ ವೃದ್ಧೆೆ, ಹುಬ್ಬಳ್ಳಿಯ ಕಮಡೊಳ್ಳಿ ಗಲ್ಲಿಯ 64 ವರ್ಷದ ಮಹಿಳೆ, ಆಜಾದ್ ರಸ್ತೆಯ 71 ವರ್ಷದ ವೃದ್ಧ, ಮಂಗಳಾ ಓಣಿಯ 84 ವರ್ಷದ ವೃದ್ಧೆ, ವಿಶಾಲನಗರ 80 ವರ್ಷದ ವೃದ್ಧೆ, ಉಣಕಲ್ಲ ಸಾಯಿನಗರದ 72 ವರ್ಷದ ವೃದ್ಧೆ, ಹುಬ್ಬಳ್ಳಿ ಮಂಟೂರ ರಸ್ತೆಯ 68 ವರ್ಷದ ಪುರುಷ ಹಾಗೂ ಧಾರವಾಡ ಸಾಧನಕೇರಿಯ 82 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ, ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.

    ಬೀಳ್ಕೊಡುಗೆ ನೆಪದಲ್ಲಿ ಕಾನೂನು ಉಲ್ಲಂಘನೆ?

    ಹುಬ್ಬಳ್ಳಿ: ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಬೀಳ್ಕೊಡುಗೆ ಸಮಾರಂಭದ ನೆಪದಲ್ಲಿ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಪರಸ್ಪರ ಅಂತರ ಮರೆತು ಕಾನೂನು ಉಲ್ಲಂಘಿಸಿರುವ ಘಟನೆ ಇಲ್ಲಿನ ಗೋಪನಕೊಪ್ಪ ರಸ್ತೆಯ ಹೆಸ್ಕಾಂ ಭವನದಲ್ಲಿ ಗುರುವಾರ ನಡೆದಿದೆ.

    ಹೆಸ್ಕಾಂ ಅಧಿಕಾರಿ ಪಿ.ಜಿ. ಅಮ್ಮಿನಬಾವಿ ನಿವೃತ್ತರಾದ ಹಿನ್ನೆಲೆಯಲ್ಲಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪಾಲ್ಗೊಂಡಿದ್ದ ಹಲವು ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬದವರು ಪರಸ್ಪರ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಂಡಿರಲಿಲ್ಲ. ತಿಳಿದವರೇ ತಪ್ಪಿರುವುದು ಟೀಕೆಗೆ ದಾರಿ ಮಾಡಿಕೊಟ್ಟಿದೆ.

    ನೇಮಕಾತಿಗೆ ಅರ್ಜಿ ಆಹ್ವಾನ

    ಧಾರವಾಡ: ಕೋವಿಡ್-19 ಪ್ರಯುಕ್ತ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 3 ಶುಶ್ರೂಷಕ ಹಾಗೂ 1 ಕಿರಿಯ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್ ಹುದ್ದೆಗಳನ್ನು 3 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. ಆ. 1ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ಕೆ.ಸಿ. ಪಾರ್ಕ್ ಹತ್ತಿರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಮೂಲ ಶೈಕ್ಷಣಿಕ ದಾಖಲಾತಿಗಳೊಂದಿಗೆ ಹಾಜರಾಗಬೇಕು ಎಂದು ಆರೋಗ್ಯಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts