More

    ನಾಮಪತ್ರ ಹಿಂಪಡೆದ ಹಲವರು

    ಕಾರವಾರ/ದಾಂಡೇಲಿ: ಜಿಲ್ಲೆಯ ಘಟ್ಟದ ಮೇಲಿನ 7 ತಾಲೂಕುಗಳ 126 ಗ್ರಾಮ ಪಂಚಾಯಿತಿಗಳಿಗೆ ಡಿ. 27ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಶನಿವಾರ ರಾತ್ರಿವರೆಗೂ ಈ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿಲ್ಲ. ಸಾಕಷ್ಟು ಮಂದಿ ಈ ಸಂದರ್ಭದಲ್ಲಿ ನಾಮಪತ್ರ ಹಿಂಪಡೆದು ಕಣದಿಂದ ದೂರ ಸರಿದರು. ನೂರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರು. ನಂತರ ಅವಿರೋಧ ಆಯ್ಕೆ ಘೊಷಣೆ ಹಾಗೂ ಕಣದಲ್ಲಿರುವವರಿಗೆ ಚಿಹ್ನೆಗಳ ಹಂಚಿಕೆ ಕಾರ್ಯವೂ ನಡೆಯಿತು.

    ದಾಂಡೇಲಿಯಲ್ಲಿ 111 ಅಭ್ಯರ್ಥಿಗಳು: ಹೊಸ ತಾಲೂಕು ಆಗಿ ದಾಂಡೇಲಿಯು ರಚನೆಯಾದ ಇದರ ವ್ಯಾಪ್ತಿಯ ಆಲೂರ, ಅಂಬೇವಾಡಿ, ಬಡಾಕಾನಶಿರಡಾ, ಅಂಬಿಕಾನಗರ ಸೇರಿ ಒಟ್ಟು 4 ಗ್ರಾಪಂಗಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಇಲ್ಲಿನ ಒಟ್ಟು 37 ಸ್ಥಾನಗಳಿಗೆ 117 ನಾಮಪತ್ರಗಳು ಸ್ವೀಕೃತವಾಗಿ ದ್ದವು. ಇದರಲ್ಲಿ ಆಲೂರಿನಲ್ಲಿ 1, ಅಂಬಿಕಾನಗರದಲ್ಲಿ 2, ಬಡೆಕಾನಶಿರಡಾದಲ್ಲಿ ಮೂವರು ಸೇರಿ ಒಟ್ಟು 6 ಜನ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. 111 ಅಭ್ಯರ್ಥಿಗಳು ಉಳಿದಿದ್ದಾರೆ.

    ಚುನಾವಣೆ ವೀಕ್ಷಕರಿಂದ ಮತಗಟ್ಟೆ ವೀಕ್ಷಣೆ
    ಮುಂಡಗೋಡ:
    ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೆಲವು ಮತಗಟ್ಟೆಗಳಿಗೆ ಚುನಾವಣೆ ವೀಕ್ಷಕ ಶರಣಬಸಪ್ಪ ಕೋಟೆಪ್ಪನವರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಚುನಾವಣೆ ಅಧಿಕಾರಿ ಪ್ರಕಾಶ ಎಂ.ಕೆ., ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಗೋಪಾಲ ಎಂ., ಪಿಡಿಒ ಎಂ.ಎಸ್. ವಾರದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts