More

    ನಾನು,ಚಂದ್ರಣ್ಣ ಒಂದೇ ತಟ್ಟೆಯಲ್ಲಿ ಉಂಡಿರುವ ಅಣ್ಣ ತಮ್ಮಂದಿರು

    ಚಿತ್ರದುರ್ಗ:ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಚಿತ್ರದುರ್ಗ ನಿವಾಸಕ್ಕೆ ಚಿತ್ರದುರ್ಗ ಲೋಕಸಭಾ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರ ಬುಧವಾರ ಬೆಳಗ್ಗೆ ಭೇಟಿ ನೀಡಿದ್ದರು.
    ಪುತ್ರ ರಘುಚಂದನ್‌ಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ದೊರೆಯಲಿಲ್ಲ ಎಂಬ ಕಾರಣಕ್ಕೆ ಚಂದ್ರಪ್ಪ ಹಾಗೂ ಎಂ.ಸಿ. ರಘು ಚಂದನ್ ಅವರು ಏ.3ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು.
    ಆದರೆ ನಂತರದ ರಾಜಕೀಯ ಕ್ಷೀಪ್ರ ಬೆಳವಣಿಗೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಆದ ಮಾತುಕತೆ ಬಳಿಕ ಕಣದಿಂದ ಹಿಂದೆ ಸರಿಯುವ ಹಾಗೂ ಗೋವಿಂದ ಕಾರಜೋಳ ಪರ ಕೆಲಸ ಮಾಡುವುದಾಗಿ ಹೇಳಿದ್ದರು.
    ಈ ಹಿನ್ನೆಲೆಯಲ್ಲಿ ಚಂದ್ರಪ್ಪ ನಿವಾಸಕ್ಕೆ ತೆರಳಿದ ಕಾರಜೋಳ ಅವರು ಪಕ್ಷದ ಇತರೆ ಮುಖಂಡರೊಂದಿಗೆ ಉಪಹಾರ ಸೇವಿಸಿದರು. ಚಂದ್ರಪ್ಪ ಮಾತನಾಡಿ,ಕಳೆದ ಬಾರಿ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರಿಂದ ರಘುಚಂದನ್ ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರವಾಸ ನಡೆಸಿ ಪಕ್ಷ ಸಂಘಟಿಸಿದ್ದ. ಟಿಕೆಟ್ ದೊರೆಯುವ ಭರವಸೆ ಇತ್ತು.
    ಆದರೆ ಹೈಕಮಾಂಡ್ ಕಾರಜೋಳ ಅವರಿಗೆ ಟಿಕೆಟ್ ಕೊಟ್ಟಿದೆ. ನರೇದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಮುಖ್ಯ.ಹೇಳುವುದು ಒಂದು ಮಾಡುವುದು ಇನ್ನೊಂದು ಜಾಯಮಾನ ನನ್ನದಲ್ಲ. ಮಧ್ಯಾಹ್ನ ಬೆಂಬಲಿಗರ ಸಭೆ ಕರೆದಿದ್ದೇನೆ. ಕಾರಜೋಳ ಅವರ ಗೆಲುವಿಗೆ ಶ್ರಮಿ ಸುವುದಾಗಿ ಹೇಳಿದರು.
    ಗೋವಿಂದ ಕಾರಜೋಳ ಅವರು ಮಾತನಾಡಿ,ಯುವಕ ರಘುಚಂದನ್ ಆಶಾವಾದಿ. ಯಾವುದೋ ಕಾರಣಕ್ಕೆ ಅವರಿಗೆ ಟಿಕೆಟ್ ತಪ್ಪಿದೆ. ವರಿ ಷ್ಠರು ಮಾತು ಮೀರಲಾಗದೆ ಸ್ಪರ್ಧಿಸಿದ್ದೇನೆ. ಚಂದ್ರಣ್ಣ ನಾನು ಒಂದೇ ತಟ್ಟೆಯಲ್ಲಿ ಉಂಡಿರುವ ಅಣ್ಣತಮ್ಮಂದಿರು. ಟಿಕೆಟ್ ತಪ್ಪಿದ ಬೇಸ ರದಲ್ಲಿ ಆವೇಶಭರಿತರಾಗಿ ಮಾತನಾಡಿದ್ದಾರೆ.
    ಈಗ ಸ್ವಚ್ಛ ಮನಸಿನಿಂದ ಚುನಾವಣೆ ಜವಾಬ್ದಾರಿ ನಮ್ಮದೆ ಎಂದು ಹೇಳಿದ್ದಾರೆ. ಚಂದ್ರಪ್ಪ ಮತ್ತು ರಘುಚಂದನ್ ಮೇಲೆ ವಿಶ್ವಾಸವಿದೆ. ನಾಳೆ ಎಲ್ಲರೂ ಒಗ್ಗಟ್ಟಿನಿಂದ ನಾಮ ಪತ್ರ ಸಲ್ಲಿಸುತ್ತೇವೆ. ನಮ್ಮಲ್ಲಿ ಹಣ ಹಂಚುವ ಪದ್ಧತಿ ಇಲ್ಲವೆಂದು ಮೊಳಕಾಲ್ಮೂರು ಎಸ್ಟಿ ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ ಹಣ ಹಂಚಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ ಮತ್ತಿತರ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts