More

    ನಾನಕಮಟ್ಟಾ ಗುರುದ್ವಾರದ ಬಾಬಾ ತಾರ್ಸೆಮ್ ಸಿಂಗ್ ಮೇಲೆ ಫೈರಿಂಗ್​: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಡೆಹ್ರಡೂನ್: ಉತ್ತರಾಖಂಡದ ಉಧಮ್ ಸಿಂಗ್ ಜಿಲ್ಲೆಯ ನಾನಕಮಟ್ಟಾ ಗುರುದ್ವಾರದ ಡೇರಾ ಕರ್ ಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುರುವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ. ಸಿಂಗ್ ಅವರು ಈ ಹುಂದೆ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದಾದ ಕೆಲವು ದಿನಗಳ ನಂತರ ದುರ್ಘಟನೆ ನಡೆದಿದೆ.

    ಇದನ್ನೂ ಓದಿ: ನಾಮಪತ್ರ ಸಲ್ಲಿಕೆಗೂ ಮುನ್ನ ಕನಕಪುರದಲ್ಲಿ ಡಿಕೆ ಸುರೇಶ್​ ವಿಶೇಷ ಪೂಜೆ!

    ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದ್ದು, ಬೈಕ್​ನಲ್ಲಿ ಬಂದ ಇಬ್ಬರು ಅವರಿದ್ದ ಮನೆ ಆವರಣಕ್ಕೆ ನುಗ್ಗಿ ಚೇರ್​ ಮೇಲೆ ಕುಳಿತಿದ್ದ 60 ವರ್ಷದ ಸಿಂಗ್‌ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ತುರ್ತು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಗಮಿಸಿದ ಸ್ವಲ್ಪ ಸಮಯದ ನಂತರ ಕೊನೆಯುಸಿರು ಎಳೆದಿದ್ದಾರೆ.

    ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ

    ವರದಿಗಳ ಪ್ರಕಾರ, ಸಿಂಗ್ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಗಿದೆ. ಒಂದು ಗುಂಡು ಅವರ ಹೊಟ್ಟೆಯನ್ನು ಸೀಳಿಹೊರಬಂದಿದ್ದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ,

    ಮಾರ್ಚ್‌ನಲ್ಲಿ ನಂಕಮಟ್ಟಾದಲ್ಲಿ ನಡೆಯಲಿರುವ ಹೋಲ ಮಹಲ್ಲಾ ಹಬ್ಬಕ್ಕೆ ಸಿಂಗ್ ಸಿದ್ಧತೆ ನಡೆಸಿದ್ದರು. ಗುರುವಾರವೂ ಸಿದ್ಧತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

    ಸಿಂಗ್ ಸಾವಿನ ನಂತರ, ಸಂಭಾವ್ಯ ಉದ್ವಿಗ್ನತೆಯನ್ನು ತಪ್ಪಿಸಲು ಪೊಲೀಸರು ನಂಕಮಟ್ಟಾ ಮತ್ತು ಆಸ್ಪತ್ರೆಯಲ್ಲಿ ಭದ್ರತೆ ಬಿಗಿಗೊಳಿಸಿದ್ದರು.

    ಪಾಕ್​ ರೆಡ್​ಲೈಟ್​ ಏರಿಯಾ ‘ಹೀರಾಮಂಡಿ’ ರಿಯಲ್ ಸ್ಟೋರಿ ಓಟಿಟಿ ಬಿಡುಗಡೆಗೆ ಸಜ್ಜು.. ಯಾವಾಗ ಸ್ಟ್ರೀಮಿಂಗ್​ ಶುರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts