More

    ನಾಡು-ನುಡಿ ಸಂರಕ್ಷಣೆಯಲ್ಲಿ ಹುಬ್ಬಳ್ಳಿ ಕೊಡುಗೆ ಅನನ್ಯ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಕನ್ನಡ ನಾಡು-ನುಡಿ ಸಂರಕ್ಷಣೆಯಲ್ಲಿ ಹುಬ್ಬಳ್ಳಿಗರ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.

    ನಗರದ ಹೊಸೂರಿನಲ್ಲಿನ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಧಾರವಾಡ ಜಿಲ್ಲಾ 15ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಸರ್ ಸಿದ್ದಪ್ಪ ಕಂಬಳಿ ಅವರಿಂದ ಹಿಡಿದು ಪಾಟೀಲ ಪುಟ್ಟಪ್ಪ ಅವರವರೆಗೆ ಹಲವು ಮಹನೀಯರು ನಾಡು ನುಡಿಗೆ ಶ್ರಮಿಸಿದ್ದಾರೆ. ಹಿರಿಯ ಸಾಹಿತಿಗಳಾದ ಡಾ. ಡಿ.ಎಸ್. ರ್ಕ, ಡಾ. ಕೆ.ಎಸ್. ಶರ್ವ, ಕವಿಗಳಾದ ಗಂಗಪ್ಪ ವಾಲಿ, ಎಂ.ಡಿ ಗೋಗೇರಿ ಸೇರಿದಂತೆ ಬಹಳಷ್ಟು ಸಾಹಿತಿಗಳ ಕೊಡುಗೆ ಅನನ್ಯ. ಮಾ. 24 ಮತ್ತು 25ರಂದು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಜರುಗುವ ಧಾರವಾಡ ಜಿಲ್ಲಾ 15ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಕೈಜೋಡಿಸಲು ವಿನಂತಿಸಿದರು.

    ಕರವೇ ಜಿಲ್ಲಾಧ್ಯಕ್ಷ ಅಮೃತ ಇಜಾರಿ ಹಾಗೂ ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ ಮಾತನಾಡಿದರು.

    ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

    ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ, ಡಾ. ಮಹೇಶ ಹೊರಕೇರಿ, ಸಿ.ಎಂ. ಚನ್ನಬಸಪ್ಪ, ವೆಂಕಟೇಶ ಮರೇಗುದ್ದಿ , ಪ್ರೊ. ಕೆ.ಎಸ್. ಕೌಜಲಗಿ, ಡಾ.ಎಸ್.ಎಸ್. ದೊಡ್ಡಮನಿ, ಡಾ. ಬಿ.ಎಸ್. ಮಾಳವಾಡ , ಡಾ.ಎಚ್.ವಿ. ಬೆಳಗಲಿ, ವಿ.ಜಿ.ಪಾಟೀಲ, ಡಾ.ಲಿಂಗರಾಜ ಮುಳ್ಳಳ್ಳಿ, ಹುಬ್ಬಳ್ಳಿ ನಗರ ಕಸಾಪ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ಚನ್ನಬಸಪ್ಪ ಧಾರವಾಡಶೆಟ್ಟರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts