More

    ನಾಗೋಡಾದಲ್ಲಿ ಕೆಎಫ್​ಡಿ ಆತಂಕ

    ಜೊಯಿಡಾ: ತಾಲೂಕಿನ ನಾಗೊಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಗಳು ಸಾವನ್ನಪ್ಪುತ್ತಿದ್ದು, ಜನರಲ್ಲಿ ಮಂಗನ ಕಾಯಿಲೆಯ ಭೀತಿ ಎದುರಾಗಿದೆ. ಅಂಬರ್ಡಾ ಗ್ರಾಮದಲ್ಲಿ ಕಳೆದ ಎರಡು ದಿನದಲ್ಲಿ ನಾಲ್ಕು ಮಂಗಗಳು ಸಾವನ್ನಪ್ಪಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಾಪೇಲಿಯ ಮನೆಯೊಂದರ ಹಂಚಿನ ಮೇಲೆ ಮಂಗಳವಾರ ಮಂಗವೊಂದು ಸತ್ತು ಬಿದ್ದಿದೆ. ಕಳೆದ ವರ್ಷ ಜಿಲ್ಲೆಯ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್​ಡಿ) ತೀವ್ರವಾಗಿತ್ತು. ಪಕ್ಕದ ಗೋವಾದಲ್ಲೂ ಕಳೆದ ಬಾರಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಇದರಿಂದ ಇಲ್ಲಿನ ಮಂಗಗಳಿಗೂ ಕಾಯಿಲೆ ಹಬ್ಬಿರುವ ಸಾಧ್ಯತೆ ಇದೆ. ಅರಣ್ಯ, ಪಶು ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    ಬುಧವಾರ ಸಂಜೆಯ ವೇಳೆಗೆ ಮಂಗ ಸಾವನ್ನಪ್ಪಿದ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
    | ಮಹಿಮ್ ಜನ್ನು ಆರ್​ಎಫ್​ಒ

    ಅಂಬರ್ಡಾದಲ್ಲಿ ನಾಲ್ಕು ಮಂಗಗಳ ಮೃತ ದೇಹ ಕಂಡುಬಂದಿದ್ದು, ಮಂಗನ ಕಾಯಿಲೆ ಯಿಂದ ಸತ್ತಿರುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ.
    | ಸುಭಾಷ ಮಾಂಜ್ರೇಕರ್ ನಾಗೋಡಾ ಗ್ರಾಪಂ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts