More

    ನಾಗನಗೌಡ ಸೈದ್ಧಾಂತಿಕ ರಾಜಕಾರಣಿ

    ಯಾದಗಿರಿ: ತತ್ವನಿಷ್ಠ, ಸಿದ್ಧಾಂತಗಳನ್ನು ನಂಬಿ, ಬಾಳಿ ಬದುಕಿದ ಕಲ್ಯಾಣ ಕನರ್ಾಟಕ ಭಾಗದ ಹಿರಿಯ ರಾಜಕೀಯ ಧುರೀಣ, ಮಾಜಿ ಶಾಸಕ ನಾಗನಗೌಡ ಕಂದಕೂರ ಸೈದ್ಧಾಂತಿಕ ರಾಜಕಾರಣಿಯಾಗಿದ್ದರು ಎಂದು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿಗಳು ಬಣ್ಣಿಸಿದರು.

    ಮಂಗಳವಾರ ಸಂಜೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ, ತಾಲೂಕು ಮತ್ತು ಯುವ ಘಟಕ ಹಾಗೂ ವೀರಶೈವ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದಿ.ನಾಗನಗೌಡ ಕಂದಕೂರ ನುಡಿನಮನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಕಂದಕೂರ ಕೇವಲ ರಾಜಕಾರಣಿಯಾಗಿರದೆ ಮಾನವೀಯ ಮೌಲ್ಯ ತುಂಬಿದ ವ್ಯಕ್ತಿಯಾಗಿದ್ದರು. ಯಾವುದೇ ಜಾತಿ, ಧರ್ಮಗಳಿಗೆ ಅಂಟಿಕೊಳ್ಳದೆ ಜ್ಯಾತ್ಯಾತೀತ ನಿಲುವು ಹೊಂದಿದ್ದರು ಎಂದರು.

    ಸಾರ್ವಜನಿಕ ರಂಗದಲ್ಲಿ ಪರಿಶುದ್ಧ್ದರಾಗಿ ಬಾಳಿ ಬದುಕಿದರು. ಲೇಸೆನಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು, ಗುರುಮಠಕಲ್ ಶ್ರೀಮಠದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಸಮಾಜದ ಎಲ್ಲ ರಂಗಗಳ ಬಗೆಗಿನ ಆಗು ಹೋಗುಗಳ ಬಗ್ಗೆ ಮತ್ತು ಅಭಿವೃದ್ಧಿಯ ಕುರಿತಾಗಿ ಅಪಾರ ಜ್ಞಾನ, ಅಪಾರವಾದ ಕಾಳಜಿ ಅವರಿಗಿತ್ತು ಎಂದು ತಿಳಿಸಿದರು.

    ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಶರಣಗೌಡ ಬಾಡಿಯಾಳ, ಅಯ್ಯಣ್ಣ ಹುಂಡೇಕಾರ, ಮಹಿಪಾಲರೆಡ್ಡಿ ಜೋಳದೆಡಗಿ, ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿದರು.

    ಮಹಾಸಭೆ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರು, ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ, ಆರ್. ಮಹಾದೇವಪ್ಪಗೌಡ, ಬಸವಂತರಾಯಗೌಡ ಮಾಲಿಪಾಟೀಲ್, ರಾಜಶೇಖರಗೌಡ ಕಿಲ್ಲನಕೇರಾ, ನೂರಂದಪ್ಪ ಲೇವಡಿ, ಅನ್ನಪೂರ್ಣಮ್ಮ ಜವಳಿ, ಚನ್ನಪ್ಪಗೌಡ ಮೋಸಂಬಿ, ಬಸವರಾಜ ನಾಶಿ, ಚನ್ನಪ್ಪ ಅಕ್ಕಿ, ಸೋಮನಾಥ ಜೈನ್, ಚನ್ನಪ್ಪ ಠಾಣಗುಂದಿ, ಮಹೆಶ ಹಿರೇಮಠ, ರಮೇಶ ದೋಡ್ಮನಿ, ಶೇಖರ್ ಅರಳಿ, ನೀಲಕಂಠ ಶೀಲವಂತ, ಇಡ್ಲೂರು ಶರಣು, ಬಸಣಗೌಡ ಕನ್ನೆಕೊಳೂರು, ಬಸವರಾಜ ಮೋಟ್ನಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts