More

    ನಶಿಸಿ ಹೋಗುತ್ತಿದೆ ಬುಡಕಟ್ಟು ಸಂಸ್ಕೃತಿ : ಪ್ರೊ.ಎಂ.ಆರ್.ಗಂಗಾಧರ ಆತಂಕ

    ಮೈಸೂರು: ಜೀವನ ಭದ್ರತೆ, ಉದ್ಯೋಗವನ್ನರಸಿ ಬುಡಕಟ್ಟು ಜನರು ವಲಸೆ ಹೋಗುತ್ತಿರುವ ಪರಿಣಾಮ ಅವರ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳು ಹಾಗೂ ಅವರ ಭಾಷೆ ದಿನಕಳೆದಂತೆ ಮರೆಯಾಗುತ್ತಿವೆ ಎಂದು ಮೈಸೂರು ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್.ಗಂಗಾಧರ ತಿಳಿಸಿದರು.

    ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮತ್ತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಕುವೆಂಪುನಗರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್‌ಗೊಂಡ್ ಬುಡಕಟ್ಟು ಸಮುದಾಯದಲ್ಲಿ ಪಾರಂಪರಿಕ ಗಿಡಮೂಲಿಕೆ ಔಷಧ ಜ್ಞಾನ ಪದ್ಧತಿಯ ಸಂಶೋಧನಾ ಅಧ್ಯಯನ ಕುರಿತ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಬುಡಕಟ್ಟು ಸಮುದಾಯದ ಮಕ್ಕಳಿಗೆ ಜೀವನ ಕೌಶಲ್ಯ ತಿಳಿಸುವ ಶಿಕ್ಷಣ ಬೇಕಾಗಿದ್ದು, ನಾವು ಕೊಡುವ ವಿದ್ಯೆ ಅವರಿಗೆ ಸಾಲುತ್ತಿಲ್ಲ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಶಿಕ್ಷಣ ಪಡೆದಿದ್ದಾರೆ. ಆದರೆ ಅವರಿಗೂ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಆದ್ದರಿಂದ ಉನ್ನತ ಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಈ ಸಮುದಾಯದ ಯುವಕರಿಗೆ ಮಾತೃಭಾಷೆಯೇ ಪ್ರಮುಖ ಸಾಧನವಾಗಿದ್ದು, ಇತರ ಭಾಷೆಗಳ ಜ್ಞಾನವಿಲ.್ಲ ಇದರಿಂದ ಮಾತೃಭಾಷೆ ಜತೆ, ಬೇರೆ ಭಾಷೆಗಳ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

    ರಾಜ್ಯದ ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ಬುಡಕಟ್ಟು ಜನರು ವಾಸಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅವರ ಸಂಸ್ಕೃತಿ ಹಾಗೂ ಭಾಷೆ ನಶಿಸಿಹೋಗುತ್ತಿದೆ. ಬುಡಕಟ್ಟು ಜನರ ಪಾರಂಪರಿಕ ಗಿಡಮೂಲಿಕೆ ಔಷಧ ಜ್ಞಾನ ಅದೇ ಸ್ಥಿತಿ ತಲುಪಿದೆ. ಆ ಔಷಧಗಳಿಂದ ತುಂಬಾ ಉಪಯೋಗ ಇದೆ. ಆದರೆ ವೈಜ್ಞಾನಿಕವಾದ ತಳಪಾಯವಿಲ್ಲದೆ ಇರುವುದರಿಂದ ನಶಿಸಿ ಹೋಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.

    ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಮಾತನಾಡಿ, ಕೇಂದ್ರ ಸರ್ಕಾರದ ವೋಕಲ್ ಫಾರ್ ಲೋಕಲ್ ಎಂಬ ಕಲ್ಪನೆಯ ಪ್ರಕಾರ ಬುಡಕಟ್ಟು ಸಮುದಾಯದ ಪಾರಂಪರಿಕ ನಾಟಿ ಔಷಧ ಪದ್ಧತಿಯನ್ನು ಪರಿಚಯ ಮಾಡಿಕೊಡುವ ಉದ್ದೇಶವನ್ನು ನಮ್ಮ ಸಂಶೋಧನೆ ಹೊಂದಿದೆ. ಇದಕ್ಕಾಗಿ 3 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಬೀದರ್ ಜಿಲ್ಲೆಯ 6 ಜನ ಪರಿಣಿತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಪ್ರತಿಯೊಬ್ಬರು ತಮ್ಮದೆ ಆದ ವಿಶಿಷ್ಟ ಪಾರಂಪರಿಕ ಜ್ಞಾನವನ್ನು ಹೊಂದಿದ್ದಾರೆ. ವಿಶಿಷ್ಟವಾಗಿರುವ ಈ ಔಷಧವನ್ನು ತಯಾರಿಸುವುದು ಹೇಗೆ, ಯಾವ ಕಾಯಿಲೆಗೆ ಔಷಧ ನೀಡಬೇಕು ಎಂದು ವಿಸ್ತೃತವಾಗಿ ತಿಳಿದುಕೊಳ್ಳುವ ಸಲುವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ರಾಜ್‌ಗೊಂಡ್ ಬುಡಕಟ್ಟು ಸಮುದಾಯದ ಮುಖಂಡ ರತನ್ ಮಹಾರಾಜ್ ಮಾತನಾಡಿ, ಈಗ ರಾಜ್‌ಗೊಂಡ್ ಆದಿವಾಸಿ ಸಮುದಾಯವನ್ನು ಹುಡುಕಿ ಸಂಶೋಧನೆ ನಡೆಸಬೇಕು ಎಂದಿದ್ದಾರೆ. ಈ ಸಮುದಾಯ ಇಂದು ಸಮಾಜದಿಂದ ಬೇರ್ಪಟ್ಟಿದ್ದೆ. ನಮ್ಮ ಸಮುದಾಯ ನಶಿಸಿಹೋಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಸಮಾಜವನ್ನು ಗುರುತಿಸಿ ಅವರ ಗಿಡಮೂಲಿಕೆ ಪದ್ಧತಿ ಕುರಿತು ಕಾರ್ಯಾಗಾರ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಯೋಜನೆ ರೂಪಿಸಿರುವುದು ಸಂತಸ ತಂದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts