More

    ನರೇಗಾ ಹಣ ಲಪಟಾಯಿಸಿದವನ ಬಂಧನ

    ಧಾರವಾಡ: ಜಿಲ್ಲಾ ಎಂಜಿಎನ್​ಆರ್​ಇಜಿಎ (ನರೇಗಾ) ಆಡಳಿತ ವೆಚ್ಚದ ಖಾತೆ ಹ್ಯಾಕ್ ಮಾಡಿ ಅಕ್ರಮವಾಗಿ ಹಣ ಲಪಟಾಯಿಸಿದ್ದ ವ್ಯಕ್ತಿಯನ್ನು ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ ಠಾಣೆ ಅಧಿಕಾರಿಗಳು ಫೆ. 24ರಂದು ಬಂಧಿಸಿದ್ದಾರೆ.

    ಚಿತ್ರದುರ್ಗದ ಚಂದ್ರಶೇಖರಪ್ಪ ಎಚ್. (30) ಬಂಧಿತ ಆರೋಪಿ. ಚಿತ್ರದುರ್ಗ ಜಿಲ್ಲೆ ಬೊಮ್ಮವ್ವನಾಗತಿಹಳ್ಳಿ ಗ್ರಾಮದ ನಿವಾಸಿ ಚಂದ್ರಶೇಖರಪ್ಪ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ. ಈತ ಧಾರವಾಡ ಪ್ರಭುನಗರದ ಹೊನ್ನಾಪುರ ಮತ್ತು ಕುಂದಗೋಳ ತಾಲೂಕಿನ ಗೌಡಗೇರಿ ಗ್ರಾಪಂ ಹೆಸರಿನಲ್ಲಿ ಡೊಂಗಲ್ ಬಳಸಿ ಎಂಡ್ ಟು ಎಂಡ್ ತಂತ್ರಾಂಶದಲ್ಲಿ ನರೇಗಾ ಆಡಳಿತ ವೆಚ್ಚದ ಖಾತೆ ಹ್ಯಾಕ್ ಮಾಡುವ ಮೂಲಕ ಅಕ್ರಮವಾಗಿ ಹಣ ಪಡೆದು ಮೋಸ ಮಾಡಿದ್ದ. ಈ ಕುರಿತು ಕಲಂ. 66 (ಡಿ) ಐಟಿ ಆಕ್ಟ್ ಮತ್ತು 420 ಐಪಿಸಿ ಅಡಿ ಜ. 28ರಂದು ಪ್ರಕರಣ ದಾಖಲಾಗಿತ್ತು. ತನಿಖೆ ಪ್ರಾರಂಭಿಸಿದ್ದ ಪೊಲೀಸರು, ಫೆ. 24ರಂದು ಆತನನ್ನು ಬೊಮ್ಮವ್ವನಾಗತಿಹಳ್ಳಿಯಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ ಲ್ಯಾಪ್​ಟಾಪ್, ಡೊಂಗಲ್ ಮತ್ತು 21,750 ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ತನಿಖೆಯನ್ನು ಅಧಿಕಾರಿ ಜಯಂತ ಗೌಳಿ ಕೈಗೊಂಡಿದ್ದು, ಎಎಸ್​ಐ ಆರ್.ಎಸ್. ಜಾಧವ, ಬಿ.ಎಸ್. ಬೆಳಗಾಂವಕರ, ಬಿ.ಎನ್. ಬಳಗಣ್ಣವರ, ಪಿ.ಜಿ.ಕಾಳಿ, ಪಿ.ಜಿ.ಪಾಟೀಲ್, ಎಸ್.ಎಂ.ಹಪ್ಪಳಿ, ಎಂ.ಜಿ. ಪಾಟೀಲ ತನಿಖಾ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts