More

    ನರೇಗಾ ಯೋಜನೆ ಗುರಿ ಮೀರಿ ಸಾಧನೆ

    ಹಳಿಯಾಳ: ಲಾಕ್​ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಚಿಂತಿತರಾಗಿದ್ದ ಗ್ರಾಮೀಣ ಭಾಗದ 6550ಕ್ಕೂ ಹೆಚ್ಚು ಕೂಲಿ ಕಾರ್ವಿುಕರಿಗೆ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ನೀಡುವ ಮೂಲಕ 50,317 ಮಾನವ ದಿನಗಳ ಸೃಜನೆ ಮಾಡಿದ ಜಿಲ್ಲೆಯ ಮೊದಲ ತಾಲೂಕು ಎಂಬ ಹೆಗ್ಗಳಿಕೆಗೆ ಹಳಿಯಾಳ ಪಾತ್ರವಾಗಿದೆ.

    ತಾಲೂಕಿನ ಎಲ್ಲ 24 ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತ್ರಿ ಆರಂಭಗೊಂಡಿವೆ. ಜಿಲ್ಲಾಡಳಿತ ತಾಲೂಕು ಪಂಚಾಯಿತಿಗೆ ನೀಡಿದ 38,940 ಮಾನವ ದಿನಗಳ ಸೃಜನೆ ಮಾಡುವ ಗುರಿ ಮೀರಿ ಸಾಧನೆ ಮಾಡಿದ್ದು, ಈವರೆಗೆ 1.43 ಕೋಟಿ ರೂಪಾಯಿ ದಿನಗೂಲಿ ಪಾವತಿಸಲಾಗಿದೆ. ಕೋವಿಡ್-19 ನಿಯಮಗಳನ್ನು ಪಾಲಿಸಲಾಗಿದೆ.

    ಕಾಮಗಾರಿಗಳು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ 27, ಕುಂಟೇ ಕಾಮಗಾರಿ 3, ಗೋಕಟ್ಟೆ ನಿರ್ಮಾಣ 5, ಅರಣ್ಯ ಕಾಮಗಾರಿ 13, ಶಾಲಾ ಆವರಣ 4, ದನದ ಕೊಟ್ಟಿಗೆ 68, ಕೃಷಿ ಹೊಂಡ 3, ತೋಟಗಾರಿಕೆ 5, ಚೆಕ್​ಡ್ಯಾಂ 5, ಭೂ ಸುಧಾರಣೆ 14, ವಸತಿ ನಿರ್ವಣದ 455 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

    ಕಳೆದ ವರ್ಷ ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಹರಿದಿರುವ ತಟ್ಟಿಹಳ್ಳದಲ್ಲಿ ನೆರೆ ಬಂದು ಸಾಕಷ್ಟು ಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಅರ್ಲವಾಡದಿಂದ ಕಲಘಟಗಿಯ ಗಡಿಗ್ರಾಮ ಹಂಪಿಹೋಳಿಯವರೆಗೂ ಹರಿಯುವ ತಟ್ಟಿಹಳ್ಳವನ್ನು ನೆರೆಯಿಂದ ಉಕ್ಕೇರದಂತೆ ತಡೆಯಲು ಹೂಳು ತೆಗೆಯಲು ಯೋಜನೆಯೊಂದನ್ನು ತಾಲೂಕು ಪಂಚಾಯಿತಿ ಸಿದ್ಧಪಡಿಸುತ್ತಿದೆ.

    ನರೇಗಾ ಯೋಜನೆಯಲ್ಲಿ ಕೈಗೊಳ್ಳುವ ವೈಯುಕ್ತಿಕ ಕಾಮಗಾರಿಗಳ ಮಾಹಿತಿ ನೀಡಲು ತಾಲೂಕು ಪಂಚಾಯಿತಿಯಿಂದ ನರೇಗಾ ಜಾಗೃತ ರಥವು ಗ್ರಾಮೀಣ ಭಾಗದಲ್ಲಿ ಸಂಚರಿಸಲಿದೆ. ಗ್ರಾಮಸ್ಥರು ಕೈಗೊಳ್ಳಲು ಇಚ್ಛಿಸುವ ವೈಯುಕ್ತಿಕ ಕಾಮಗಾರಿಗಳ ಪಟ್ಟಿ ಪಡೆದು ತಾಲೂಕು ಮಟ್ಟದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು.

    |ಪ್ರವೀಣಕುಮಾರ, ಸಾಲಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

    ಜಿಲ್ಲೆಯಲ್ಲಿಯೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದೋಗ ಖಾತ್ರಿ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಂಡು, ಅತ್ಯಂತ ಹೆಚ್ಚು ಕೂಲಿ ಕಾರ್ವಿುಕರಿಗೆ ಕೆಲಸವನ್ನು ಹಳಿಯಾಳ ತಾಲೂಕಿನಲ್ಲಿ ನೀಡಲಾಗಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
    | ಆರ್.ವಿ. ದೇಶಪಾಂಡೆ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts