More

    ನರೇಗಾ ಮೂಲಕ ಉದ್ಯೋಗ ನೀಡಿದ್ದು ಕಾಂಗ್ರೆಸ್ ಸರ್ಕಾರ

    ರಿಪ್ಪನ್‍ಪೇಟೆ: ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಜಮೀನು, ನಿವೇಶನ ರಹಿತರಿಗೆ ಭೂಮಿ ಹಕ್ಕು ನೀಡಿದ್ದು, ಗೇಣಿದಾರರು ಹಾಗೂ ಭೂಮಾಲೀಕರ ನಡುವಿನ ಸಂಘರ್ಷ ಇತ್ಯರ್ಥಗೊಳಿಸಿ ಉಳುವವನನ್ನೇ ಭೂ ಒಡೆಯನನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
    ಪಟ್ಟಣದ ವಿನಾಯಕ ವೃತ್ತದಲ್ಲಿ ಕಾಂಗ್ರೆಸ್ ಹೋಬಳಿ ಘಟಕ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಜಾಗೃತ ಸಭೆಯಲ್ಲಿ ಮಾತನಾಡಿದರು.
    ಮಹಿಳೆ ತನ್ನ ಹಕ್ಕುಗಳಿಂದ ವಂಚಿತವಾಗಬಾರದೆಂದು ಎಲ್ಲ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಿ ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಲಾಗಿದೆ. ಜಾತಿ ತಾರತಮ್ಯ ಹೋಗಲಾಡಿಸಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ. ಕೂಲಿಕಾರ್ಮಿಕರು, ನಿರುದ್ಯೋಗಿಗಳಿಗೆ ದುಡಿಯುವ ಹಕ್ಕನ್ನು ನರೇಗಾ ಯೋಜನೆ ಮೂಲಕ ನೀಡಿರುವುದು ಕಾಂಗ್ರೆಸ್ ಎಂದರು.
    ದೇಶ ಮತ್ತು ರಾಜ್ಯವನ್ನಾಳುತ್ತಿರುವ ಬಿಜೆಪಿ ಸರ್ಕಾರ ಸಮಾಜಕ್ಕೆ ಪೂರಕವಾದ ಕಾಂಗ್ರೆಸ್‍ನ ಯೋಜನೆಗಳನ್ನು ಮೂಲೆಗುಂಪು ಮಾಡಿದೆ. ಪ್ರಸ್ತುತ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗಾಗಿ ಕಾಂಗ್ರೆಸ್ ಪಕ್ಷವು ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಗೌರವಧನ, ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ನೀಡಿ ಸುರಕ್ಷಿತ ಕುಟುಂಬ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದರು.

    ಜನತೆಗೆ ದರ ಏರಿಕೆ ಬರೆ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಪ್ರಾಣ ತ್ಯಾಗ ಮಾಡಿದ, ಸಾಮಾಜಿಕ ನ್ಯಾಯ ಕಲ್ಪಿಸಿದ, ಸಮಾನತೆ ಸಾರಿದ ಪರಂಪರೆ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ ಬಿಜೆಪಿಗೆ ಯಾವ ಪರಂಪರೆ ಇದೆ ಎಂದು ಕೆಪಿಸಿಸಿ ವಕ್ತಾರ ಸು„ೀರ್‍ಕುಮಾರ್ ಮುರೊಳ್ಳಿ ಪ್ರಶ್ನಿಸಿದರು. ಬಿಜೆಪಿಯೇ ಭರವಸೆಯೆಂದು ಪ್ರಚಾರ ಮಾಡುತ್ತಿದ್ದೀರಿ. ಪೆಟ್ರೋಲ್, ಅಡುಗೆ ಎಣ್ಣೆ, ಇಂಧನ, ದಿನಸಿ, ವಿದ್ಯುತ್, ಹಾಲು, ಉಪ್ಪು, ರಸಗೊಬ್ಬರ ದರ ಏರಿಸಿ ಜನರಿಗೆ ಬರೆ ಎಳೆದಿರುವುದು ನಿಮ್ಮ ಭರವಸೆಯೇ? ಜನರು ನಿಮ್ಮ ಉದ್ಘೋಷಕ ಆಡಳಿತವನ್ನು ಕಂಡು ಬೇಸತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts