More

    ನರೇಗಾ ಕೆಲಸಕ್ಕೆ ಕುತ್ತು ತಂದ ನಗರಸಭೆ ವ್ಯಾಪ್ತಿ

    ಗೌರಿಬಿದನೂರು: ಅಧಿಕಾರಿಗಳು, ಜನಪ್ರತಿನಿಧಿಗಳು ನರೇಗಾ ಯೋಜನೆಯಡಿ ನೋಂದಾಯಿಸಿಕೊಂಡು ಕೆಲಸ ಮಾಡಿ ಎನ್ನುತ್ತಾರೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಜನರ ಪಾಲಿಗೆ ಆ ಅವಕಾಶವೇ ಇಲ್ಲದಂತಾಗಿದೆ. ಕೆಲಸವಿಲ್ಲದೆ ದುಡಿಯುವ ಕೈಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

    ನಗರಕ್ಕೆ ಹೊಂದಿಕೊಂಡಿರುವ ಕಾದಲವೇಣಿ, ಚಿಕ್ಕಕುರುಗೋಡು, ಗಂಗಸಂದ್ರ, ಹಿರೇಬಿದನೂರು ಗ್ರಾಮ ಪಂಚಾಯಿತಿಗಳ ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿರುವುದರಿಂದ ನರೇಗಾ ಕೆಲಸಕ್ಕೆ ಕುತ್ತು ತಂದಿದೆ.

    23 ವಾರ್ಡ್‌ಗಳಿದ್ದ ಪುರಸಭೆಯನ್ನು 31 ವಾರ್ಡ್‌ಗಳಿಗೆ ಹೆಚ್ಚಿಸಿ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ, ಇದಕ್ಕಾಗಿ ನಗರದ ಆಸುಪಾಸಿನಲ್ಲಿರುವ ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಹೆಸರಿಗೆ ಮಾತ್ರ ನಗರಸಭೆ ವ್ಯಾಪ್ತಿಯಾಗಿದ್ದು ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಇಂದಿಗೂ ಹಳ್ಳಿಯ ವಾತಾವರಣವೇ ಕಂಡುಬರುತ್ತಿದೆ.

    ಕರೊನಾ ಸಂಕಷ್ಟದಿಂದಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ನರೇಗಾ ಯೋಜನೆಯಡಿ ಕೆಲಸ ಕೊಡಿ ಎಂದು ಅರ್ಜಿ ಸಲ್ಲಿಸಲು ಹೋದರೆ, ನಿಮ್ಮ ಹಳ್ಳಿಗಳು ನಗರ ವ್ಯಾಪ್ತಿಗೆ ಸೇರ್ಪಡೆಗೊಂಡಿರುವುದರಿಂದ ಯೋಜನೆ ನಿಮಗೆ ಅನ್ವಯವಾಗುವುದಿಲ್ಲ ಎಂದು ಹೇಳಿ ಅಧಿಕಾರಿಗಳು ಸಾಗಹಾಕುತ್ತಿದ್ದಾರೆ.

    ಇದೇ ಗ್ರಾಮಸ್ಥರು ಈ ಹಿಂದೆ ಯೋಜನೆಯಡಿ ನೋಂದಾಯಿಸಿಕೊಂಡು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗ ನರೇಗಾದಲ್ಲಿ ಕೆಲಸ ಮಾಡಲು ಮನಸ್ಸಿದ್ದರೂ ಕೆಲಸ ನೀಡುವವರೇ ಇಲ್ಲದಾಗಿದೆ.

    ಕರೊನಾದಿಂದಾಗಿ ಅಸಂಘಟಿತ ವಲಯದ ಶೇ.70 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದ್ದರಿಂದ ನರೇಗಾ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಣೆ ಮಾಡಬೇಕು. ಕೈಬಿಟ್ಟಿರುವ ಹಳ್ಳಿಗಳನ್ನು ಯೋಜನೆಯಡಿ ಸೇರ್ಪಡೆಗೊಳಿಸಬೇಕು. ಇದರಿಂದ ನಗರ ಪ್ರದೇಶದ ಸ್ಲಂ ವಾಸಿಗಳು, ಬಡವರಿಗೆ ಅನುಕೂಲವಾಗಲಿದೆ. ಸಾಕಷ್ಟು ಮಂದಿಗೆ ಕೆಲಸ ದೊರೆಯಲಿದೆ.
    ಲೋಕೇಶ್‌ಗೌಡ, ರೈತ ಸಂಘದ ಅಧ್ಯಕ್ಷ

    ಗ್ರಾಮೀಣ ವ್ಯಾಪ್ತಿಯ ಮತದಾರರ ಗುರುತಿನ ಕಾರ್ಡ್ ಹೊಂದಿದ್ದರೆ ಮಾತ್ರ ಯೋಜನೆಗೆ ಅರ್ಹರು, ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಯೋಜನೆ ಅನ್ವಯಿಸುವುದಿಲ್ಲ, ಇದು ಸರ್ಕಾರದ ಮಾರ್ಗಸೂಚಿ.
    ಮುನಿರಾಜು, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts