More

    ನಮ್ಮ ವಿರುದ್ಧ ಆರೋಪ,ಈಗ ಆಡಳಿತದಲ್ಲಿ ಶೇ.40 ಭ್ರಷ್ಟಾಚಾರದ ಅನುಷ್ಠಾನ


    ಚಿತ್ರದುರ್ಗ: ನಮ್ಮ ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿದ್ದ ಕಾಂಗ್ರೆಸ್ ಈಗ ತನ್ನ ಆಡಳಿತದಲ್ಲಿ ಅದನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರ ಬಂದ ದಿನಿದಂದಲ್ಲಿ ಬಿಜೆಪಿ ವಿರುದ್ಧ ಮಾಡಿದ್ದ ಭ್ರಷ್ಟಾಚಾರದಲ್ಲಿ ಮುಳುಗಿದೆ, ಇನ್‌ಕಂ ಟ್ಯಾಕ್ಸ್ ದಾಳಿ ಆದಾಗ ಕಾಂಗ್ರೆಸ್ಸಿಗರಿಗೆ ತುಂಬಾ ನೋವಾಗಿದೆ. ಸೀಜ್ ಆದ ಹಣ ಆ ಪಕ್ಷದವರಿಗೆ ಸೇರಿದೆ ಎಂ ಬುದು ಅವರ ನೋವಿಗೆ ಕಾರಣವಾಗಿದೆ.

    ಸಿಎಂ ಪುತ್ರ ಯತೀಂದ್ರ ವರ್ಗಾವಣೆ ಕುರಿತಾದ ವಿಡಿಯೊ ಕಾಂಗ್ರೆಸ್ಸಿಗರ ಹಗಲು ದರೋಡೆಗೆ ಸಾಕ್ಷಿಯಾಗಿದೆ. ಐಟಿ ದಾಳಿ ವೇಳೆ ಇವರ ಭ್ರಷ್ಟಾಚಾರದ ಆಡಳಿತಕ್ಕೆ ಈ ವಿಡಿಯೋ ಮತ್ತಷ್ಟು ಪುಷ್ಠಿ ನೀಡಿದೆ. ವರ್ಗಾವಣೆ ದಂಧೆ, ಅವ್ಯವಹಾರ ವ್ಯಾಪಕವಾಗಿ ನಡೆದಿದೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಅರೆಬೆಂದ ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಸಿಗೆ ಈವರೆಗೂ ಒಂದೇ ಒಂದು ಹೊಸ ಕಾರ‌್ಯಕ್ರಮವನ್ನು ಘೋಷಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲವೆಂದು ಹರಿಹಾಯ್ದರು.

    ಕಾಂತರಾಜ್ ವರದಿ ಎಸಿ ರೂಂನಲ್ಲಿ ಕುಳಿತು ಸಿದ್ಧಪಡಿಸಲಾಗಿದೆ. ಎಲ್ಲರ ಮನೆಗಳಿಗೆ ಸರಿಯಾಗಿ ಭೇ ನೀಡದೆ ತಯಾರಿಸದ ವರದಿ ಇದಾಗಿದೆ. ವೀರಶೈವ-ಲಿಂಗಾಯಿತ ಧರ್ಮದ ವಿಚಾರದಲ್ಲಿ ಕಾ ಂಗ್ರೆಸ್ ಬೆಂಕಿ ಹಚ್ಚಿತ್ತು. ಈಗ ಕಾಂತರಾಜ್ ವರದಿ ವಿಚಾರದಲ್ಲಿ ಸಮಾಜವನ್ನು ಒಡೆಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪ ಡಿಸಿದರು.

    ತಮ್ಮ ಅಧಿಕಾರ ಸ್ವೀಕಾರದ ಸಮಾರಂಭದಲ್ಲಿ ಪಕ್ಷದ ಅನೇಕ ಹಿರಿಯರು ಆಗಮಿಸಿದ್ದಾರೆ. ಇದನ್ನು ನೀವು ಯಾಕೆ ಗಮನಿಸುವುದಿಲ್ಲ ವೆಂದು ಮಾಧ್ಯಮ ದವರನ್ನು ಮರು ಪ್ರಶ್ನಿಸಿದ ವಿಜಯೇಂದ್ರ, ಬಸವನಗೌಡ ಪಾಟೀಲ್ ಯತ್ನಾಳ್,ವಿ.ಸೋಮಣ್ಣ ಮೊದಲಾದ ಪಕ್ಷದ ಹಿರಿಯರನ್ನು ಭೇಟಿಯಾಗಿ ಚರ್ಚಿಸುವುದಾಗಿ ಹೇಳಿದರು.

    ತಮಾಷೆಗೆ ಹೇಳುತ್ತಿಲ್ಲ

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಮಾತನ್ನು ನಾನು ತಮಾಷೆಗೆ ಹೇಳುತ್ತಿಲ್ಲ. ಹಿಂದಿನ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದನ್ನು ಅಂದು ಯಾರೂ ನಂಬಿರಲಿಲ್ಲ ಎಂದರು.

    ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿರುವ ನಾನಾ ಲೋಕಸಭೆ, ಜಿಪಂ,ತಾಪಂ ಚು ನಾವಣೆಗೆ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸುವೆ.ಒಂದು ದಿನವೂ ಮನೆಯಲ್ಲಿ ಕೂರುವುದಿಲ್ಲವೆಂದರು. ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ತಿಪ್ಪೇಸ್ವಾಮಿ,ರೇಣುಕಾಚಾರ‌್ಯ,ಎಂಎಲ್‌ಸಿಗಳಾದ ಕೆ.ಎಸ್.ನವೀನ್,ವೈ.ಎ.ನಾರಾಯಣ ಸ್ವಾ ಮಿ,ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts