More

    ನಮ್ಮದು ಶ್ರೇಷ್ಠ, ಆದರ್ಶ ಪರಂಪರೆ


    ವಿಜಯವಾಣಿ ಸುದ್ದಿಜಾಲ ಶಹಾಬಾದ್
    ಧಮರ್ೋ ರಕ್ಷತಿ ರಕ್ಷಿತಃ ಎಂಬ ಅನುಭವಿ ವಾಣಿಯಂತೆ ನಾವೂ ಧರ್ಮವನ್ನು ರಕ್ಷಣೆ ಮಾಡಿದಾಗ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಹೀಗಾಗಿ ಎಲ್ಲರೂ ಧರ್ಮ, ನ್ಯಾಯ, ನೀತಿಯಿಂದ ಬಾಳಬೇಕು ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಲಹೆ ನೀಡಿದರು.
    ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಭಾರತ ಧರ್ಮ ಪ್ರಧಾನ ದೇಶವಾಗಿದ್ದು, ಶ್ರೇಷ್ಠ ಹಾಗೂ ಆದರ್ಶ ಪರಂಪರೆ ನಮ್ಮದಾಗಿದೆ. ಮಾಲಗತ್ತಿ ಗ್ರಾಮದ ಹಿರೋಡೇಶ್ವರ ದೇವಸ್ಥಾನವನ್ನು ನಂಬಿ ಸಾಕಷ್ಟು ಭಕ್ತರು ಬರುತ್ತಿದ್ದಾರೆ. ಅವರ ಎಲ್ಲ ಕಷ್ಟಗಳನ್ನು ದೇವರು ದೂರ ಮಾಡುತ್ತಿದ್ದಾರೆ. ಇದೊಂದು ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿನ ಶ್ರೀಗಳ ಸೇವಾ ಮನೋಭಾವ ಆಮೋಘವಾಗಿದೆ ಎಂದರು.
    ಶ್ರೀ ಚನ್ನಬಸವ ಶರಣರು ಪಾದಪೂಜೆ ನಡೆಸಿ, ಶ್ರೀಗಳನ್ನು ಸತ್ಕರಿಸಿದರು. ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರು, ಪ್ರಮುಖರಾದ ಡಾ.ಗುಂಡಣ್ಣ ಬಾಳಿ, ಸಿದ್ದಲಿಂಗಪ್ಪ ಸ್ವಾಮಿ, ಮಲ್ಲಿಕಾಜರ್ುನ ಇಟಗಿ, ಕಾಶೀನಾಥ ಸಣಮೋ, ದೇವೀಂದ್ರ ಯಾದಗಿರ, ದೇವಪ್ಪ ಕೋಲಕುಂದಿ, ಸಿದ್ದರಾಮ ರೇಷ್ಮಿ, ಬಾಲಪ್ಪ ಪೂಜಾರಿ, ಈಶ್ವರ ಮೂಗುಳನಾಗಾಂವ, ವಿಜಯಕುಮಾರ ದುಗುಂಡ, ಸುರೇಶ ರಾವೂರ, ಶಿವಕುಮಾರ, ಸಿದ್ದು ಕದ್ದರಿಗಿ, ಅಪ್ಪಾಸಾಬ ರದ್ದೇವಾಡಗಿ, ಬಸವಲಿಂಗಪ್ಪ ಬಾಳಿ, ದೇವೀಂದ್ರಪ್ಪ ಇದ್ದರು.

    ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ನಾಳೆ
    ಇತ್ತೀಚೆಗೆ ಲಿಂಗೈಕ್ಯರಾದ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿರಕ್ತ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮ 19ರಂದು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8ಕ್ಕೆ ಶ್ರೀ ಸಿದ್ಧಲಿಂಗ ಸ್ವಾಮಿಗಳ ಕತರ್ೃ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ಮಹಾಪೂಜೆ ನಡೆಯುವುದು. 10.30ಕ್ಕೆ ವಿವಿಧ ಮಠಗಳ ಪೂಜ್ಯರ ಸಾನ್ನಿಧ್ಯದಲ್ಲಿ ನುಡಿ ನಮನ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12ಕ್ಕೆ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ 7ಕ್ಕೆ ರಾವೂರ ಹಾಗು ವಿವಿಧ ಗ್ರಾಮದಿಂದ ಆಗಮಿಸಿದ ಕಲಾವಿದರಿಂದ ಅಹೋ ರಾತ್ರಿ ಭಜನೆ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts