More

    ನಮೋ ಸ್ವಾಗತಕ್ಕೆ ಯುದ್ದೋಪಾದಿಯಲ್ಲಿ ಸಿದ್ಧತೆ


    ಯಾದಗಿರಿ: ಸ್ಕಾಡಾ ಗೇಟ್ ರಾಷ್ಟ್ರಕ್ಕೆ ಸಮರ್ಪಣೆ ಸೇರಿ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಕಾಲಜ್ಞಾನಿ ಬಸವಣ್ಣನ ನೆಲವಾದ ಕೊಡೆಕಲ್ಗೆ ಜ.19 ರಂದು ಮೊದಲ ಬಾರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದ ಭರದ ಸಿದ್ಧತೆ ನಡೆಯುತ್ತಿದೆ.

    ಕಾರ್ಯಕ್ರಮದ ವೇದಿಕೆ ನಿಮರ್ಾಣ ಜರ್ಮನ್ ತಂತ್ರಜ್ಞಾನದ ಪೆಂಡಾಲ್ ಹಾಸುವಿಕೆ ಸೇರಿದಂತೆ ಇನ್ನಿತರ ಕೆಲಸಗಳು ಶಾಸಕ ನರಸಿಂಹ ನಾಯಕ (ರಾಜುಗೌಡ ) ಯುದ್ದೋಪಾದಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಕಾರಿ ಸ್ನೇಹಲ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ ಸೇರಿದಂತೆ ಜಿಲ್ಲಾ ಮಟ್ಟದ ಅಕಾರಿಗಳು ಕಳೆದ ಮೂರು ದಿನಗಳಿಂದ ಸ್ಥಳದಲ್ಲೇ ಮೊಕ್ಕಾ ಹೂಡುವ ಮೂಲಕ ಅಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

    19ರಂದು ಬೆಳಗ್ಗೆ 11.10ಕ್ಕೆ ಕಲಬುರಗಿಯಿಂದ ಹೆಲಿಕ್ಯಾಪ್ಟರ್ ಮೂಲಕ ನಾರಾಯಣಪುರಕ್ಕೆ ಬಂದಿಳಿಯಲಿರುವ ನಮೋ, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಡೆಕಲ್ನ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಶ್ಚೇತನ ಹಾಗೂ ನವೀಕರಣ ಯೋಜನೆ ಉದ್ಘಾಟನೆ ಮತ್ತು ಸೂರತ್- ಚೆನ್ನೈ ಎಕ್ಸ್ಪ್ರೆಸ್ ವೇ ಶಂಕುಸ್ಥಾಪನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಅಡಿಗಲ್ಲು ನೆರವೇರಿಸಿ, ಲಕ್ಷಾಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವಾಹನದಟ್ಟಣೆ ನಿಯಂತ್ರಣಕ್ಕೆ ಕೊಡೆಕಲ್, ನಾರಾಯಣಪುರದ ಹಲವು ಮಾರ್ಗಗಳನ್ನು ಬದಲಿಸಲಾಗಿದೆ. ಅಲ್ಲದೆ 19 ರಂದು ಹುಣಸಗಿ ತಾಲೂಕಿನ ಎಲ್ಲ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

    ಕೊಡೇಕಲ್ಗ್ರಾಮಕ್ಕೆ ಪ್ರದಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ವಾಯು ಸೇನಾ ಹೆಲಿಕಾಪ್ಟರ್ಗಳು ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ನಿಮರ್ಿಸಿದ ಹೆಲಿಪ್ಯಾಡನಲ್ಲಿ ಮೂರು ಬಾರಿ ಬಂದಿಳಿಯುವ ಮೂಲಕ ಪ್ರಾಯೋಗಿಕ ಹಾರಾಟ ನಡೆಸಿದವು. ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಒಟ್ಟು 6 ಹೆಲಿಪ್ಯಾಡ್ಗಳನ್ನು ನಿಮರ್ಿಸಲಾಗಿದೆ. ಮೊದಲ ಕಾಪ್ಟರ್ ಬಂದು ಹೋದ ನಂತ ಮತ್ತೊಂದು ಹೆಲಿಕಾಪ್ಟರ್ ಕೂಡಾ ಹಾರಾಟ ನಡೆಸುವ ಮೂಲಕ ಮತ್ತೊಮ್ಮೆ ಹೆಲಿಪ್ಯಾಡ್ನಲ್ಲಿಳಿದು ಕೆಲ ಕ್ಷಣಗಳ ಕಾಲ ನಿಂತು ಮತ್ತೆ ಹಾರಿತು. ಪೊಲೀಸ್ ಇಲಾಖೆ ಹಿರಿಯ ಶ್ರೇಣಿಯ ಅಕಾರಿಗಳಿಂದ ಹಿಡಿದು, ಕೆಎಸ್ಆರ್ಪಿ ತುಕಡಿಗಳು ಸ್ಥಳದಲ್ಲಿ ನಿಯೋಜನೆಗೊಂಡಿವೆ.
    ಪ್ರಧಾನಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ಹುಣಸಗಿ ತಾಲೂಕು ಪೊಲೀಸ್ ಸರ್ಪಗಾವಲಿನಲ್ಲಿರಲಿದೆ. ನಾರಾಯಣಪುರ, ಕೊಡೆಕಲ್ನಲ್ಲಿ ಖಾಕಿಗಳ ಪಹರೆ ಜೋರಾಗಿದ್ದು, ಮಂಗಳವಾರ ಸಂಜೆ ಕಾನೂನು ಮತ್ತು ಸುವ್ಯವಸ್ಥೆ

    ಎಡಿಜಿಪಿ ಅಲೋಕಕುಮಾರ್ ಆಗಮಿಸಿ, ಜಿಲ್ಲಾಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳೊಡನೆ ಬಂದೋಬಸ್ತ್ಗೆ ಸಂಬಂಸಿದಂತೆ ಸುರ್ಘ ಸಭೆ ನಡೆಸಿದರು. ಕಾರ್ಯಕ್ರಮಕ್ಕೆ ಒಟ್ಟು 6 ಜನ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ, 2 ಅಪರ ಪೊಲೀಸ್ ವರಿಷ್ಠಾಕಾರಿ, 22 ಜನ ಡಿವೈಎಸ್ಪಿ, 53 ಜನ ಸಿಪಿಐ, 120 ಪಿಎಸ್ಐ, 115 ಎಎಸ್ಐ, 129 ಮಹಿಳಾ ಪೇದೆ, 792 ಪೊಲೀಸ್ ಪೇದೆಗಳು, 500 ಜನ ಗೃಹ ರಕ್ಷಕ ದಳ ಸಿಬ್ಬಂದಿ, 13 ಡಿಆರ್ ಪೊಲೀಸ್ ವಾಹನ ಮತ್ತು 15 ರಾಜ್ಯ ಮೀಸಲು ಪೊಲೀಸ್ ವಾಹನಗಳನ್ನು ನಿಯೋಜನೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts