More

    ನನಸಾಗದ ವಾಣಿಜ್ಯ ಮಳಿಗೆ ಕನಸು

    ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾ ಬಳಿಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ-1ರ ನಿವೇಶನದಲ್ಲಿ ನಗರೋತ್ಥಾನ ಯೋಜನೆಯಡಿ ಮೂರು ವರ್ಷಗಳ ಹಿಂದೆ ನಿರ್ವಣವಾಗಬೇಕಿದ್ದ ವಾಣಿಜ್ಯ ಮಳಿಗೆ ಇನ್ನೂ ಆರಂಭವಾಗಿಲ್ಲ.

    ಅಧಿಕಾರಿಗಳ ನಿರ್ಲಕ್ಷ್ಯೇ ಇದಕ್ಕೆಲ್ಲ ಕಾರಣ. ಐದಾರು ವರ್ಷಗಳ ಹಿಂದೆಯೇ ಪುರಸಭೆಯ ಕೈ ಬಿಟ್ಟು ಹೋಗುತ್ತಿದ್ದ ಒಂದು ಎಕರೆಗಿಂತಲೂ ಹೆಚ್ಚು ವ್ಯಾಪ್ತಿಯ ನಿವೇಶನ ಪುರಸಭೆ ಆಡಳಿತ ಮಂಡಳಿ ಮತ್ತು ಹಿರಿಯರ ಹೋರಾಟ ಫಲವಾಗಿ ಉಳಿದುಕೊಂಡಿದೆ. ಕೋಟ್ಯಂತರ ರೂ. ಮೌಲ್ಯದ ಈ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ವಿುಸಿ ಪುರಸಭೆಗೆ ಆದಾಯ ತಂದುಕೊಳ್ಳುವ ಉದ್ದೇಶದಿಂದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ. 2017-18ರ ನಗರೋತ್ಥಾನ 3ನೇ ಹಂತದಲ್ಲಿ 45.67 ಲಕ್ಷ ರೂ.ಗಳಿಗೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಿುಸಲು ಸ್ಥಳ ಹಸ್ತಾಂತರಿಸಲಾಗಿತ್ತು. ಧಾರವಾಡದ ಸುಪ್ರದಾ ಕನ್​ಸ್ಟ್ರಕ್ಷನ್ ಕಂಪನಿಗೆ ಟೆಂಡರ್ ನೀಡಲಾಗಿದೆ. ನಿಯಮದಂತೆ 15 ತಿಂಗಳಿಗೆ ಟೆಂಡರ್ ಕಾಮಗಾರಿ ಪೂರ್ಣಗೊಂಡು ನಿರ್ವಣಗೊಂಡ ಮಳಿಗೆಯಿಂದ ಪುರಸಭೆಗೆ ಲಕ್ಷಾಂತರ ರೂ. ಆದಾಯ ಬರಬೇಕಿತ್ತು. ಆದರೆ, ಈ ವಾಣಿಜ್ಯ ಮಳಿಗೆ ನಿರ್ವಣಕ್ಕೆ 2017 ಡಿಸೆಂಬರ್​ನಲ್ಲಿ ಆಗಿನ ಸಿಎಂ ಸಿದ್ದರಾಮಯ್ಯನವರಿಂದ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಶಿಲಾನ್ಯಾಸ ನೆರವೇರಿಸಿದ್ದರು. ಮುಂದೆ ಶಾಸಕ ರಾಮಣ್ಣ ಲಮಾಣಿ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ.

    ಅಲ್ಲದೆ, ‘ಇದು ಪುರಸಭೆ ನಿವೇಶನವಾಗಿದ್ದು ಅತಿಕ್ರಮಣ ನಿಷೇಧಿಸಿದೆ’ ಎಂದು ಸೂಚನಾ ಫಲಕ ಹಾಕಿದ್ದರೂ ಹತ್ತಾರು ಅನಧಿಕೃತ ಎಗ್​ರೈಸ್ ಗೂಡಂಗಡಿಗಳು ಈ ಜಾಗವನ್ನು ಅತಿಕ್ರಮಿಸಿಕೊಂಡಿವೆ.

    ಪೊಲೀಸ್​ಠಾಣೆ, ಪ್ರವಾಸಿ ಮಂದಿರ, ಶಾಲಾ-ಕಾಲೇಜ್​ಗೆ ಹೋಗುವ ಮಾರ್ಗದ ನಿವೇಶನದಲ್ಲಿ ಅನಧಿಕೃತ ಗೂಡಂಗಡಿಗಳು, ಬೇಕಾಬಿಟ್ಟಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಕಿರಿಕಿರಿ ಸಾಮಾನ್ಯವಾಗಿದೆ. ಕೊಳಚೆ ನಿರ್ವಣವಾಗಿ ರೋಗರುಜಿನಗಳ ತಾಣವಾಗಿ ಮಾರ್ಪಟ್ಟಿದೆ.

    ಪುರಸಭೆಯ ಜಾಗ ಎಗ್​ರೈಸ್ ಗೂಡಂಗಡಿಗಳ ಸಂಕೀರ್ಣವಾಗಿದೆ. ಕೊಳಚೆಯಿಂದ ಅನಾರೋಗ್ಯಕರ ವಾತಾವರಣ ನಿರ್ವಣವಾಗಿದೆ. ಸ್ವಚ್ಛ ಭಾರತ ಕಾರ್ಯಕ್ರಮ ಕೇವಲ ದಾಖಲೆ ಮತ್ತು ಪ್ರಚಾರವಾಗಬಾರದು. ಈ ಕೂಡಲೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನಿಸಬೇಕು. ಇಲ್ಲಿ ವಾಣಿಜ್ಯ ಮಳಿಗೆ ನಿರ್ವಿುಸಲು ಮತ್ತು ಸ್ವಚ್ಛತೆಗೆ ಪುರಸಭೆ ಕ್ರಮ ಕೈಗೊಳ್ಳಬೇಕು.

    | ಪ್ರವೀಣ ಬಾಳಿಕಾಯಿ, ಪುರಸಭೆ ಸದಸ್ಯ

    ಗುತ್ತಿಗೆ ಪಡೆದ ಸುಪ್ರದಾ ಕನ್​ಸ್ಟ್ರಕ್ಷನ್​ನವರಿಗೆ ಕಾಮಗಾರಿ ನಿರ್ವಣದ ಅವಧಿ ವಿಸ್ತರಿಸಿಕೊಟ್ಟು ವಾರದೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು.

    | ಜಿ.ಎನ್. ಗೋನಾಳ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts