More

    ನದಿ ತೀರದ ಗ್ರಾಮಗಳಿಗೆ ಶುದ್ಧ ಜಲ

    ಐನಾಪೂರ, ಬೆಳಗಾವಿ: ನದಿ ತೀರದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ರಾಷ್ಟ್ರೀಯ ಹಸಿರು ನ್ಯಾಯಪೀಠ ಅಗತ್ಯ ಕ್ರಮ ವಹಿಸಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
    ಐನಾಪುರ ಪಟ್ಟಣದ ಲಕ್ಷ್ಮೀ ನಗರದಲ್ಲಿ ಮಂಗಳವಾರ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅನುದಾನದಲ್ಲಿ 13.31 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿ, ಕೃಷ್ಣಾ ನದಿ ಜನರ ಜೀವನಾಡಿಯಾಗಿದೆ. ಗಟಾರ ಮತ್ತು ಕಾರ್ಖಾನೆಗಳ ಕಲುಷಿತ ನೀರು ನದಿಗಳಿಗೆ ಸೇರಿ ಹಲವು ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ. ಈ ವಿಷಯವನ್ನು ಮನಗಂಡ ರಾಷ್ಟ್ರೀಯ ಹಸಿರು ಪ್ರಾಧಿಕಾರ ಮಂಡಳಿ ವಿಶೇಷ ಅನುದಾನ ಬಿಡುಗಡೆಗೊಳಿಸಿ ಕಲುಷಿತ ನೀರು ನದಿ ಸೇರದಂತೆ ಮುತುವರ್ಜಿ ವಹಿಸಿದೆ ಎಂದರು.

    ಬಿಜೆಪಿ ಬ್ಲಾಕ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ಮುಖಂಡರಾದ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಅಭಿಯಂತ ಉಮೇಶ ಆರ್.ಕೆ., ಅಜಿತ ಚೌಗಲಾ, ಮುಖ್ಯಾಧಿಕಾರಿ ಎ.ಆರ್.ಕುಲಕರ್ಣಿ, ಬಿ.ಎಸ್. ಪಾಟೀಲ, ರತನ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts