More

    ನಗರಾಭಿವೃದ್ಧಿ ಸಚಿವರ ನಗರ ಪ್ರದಕ್ಷಿಣೆ

    ಶಿವಮೊಗ್ಗ: ಮಂಗಳವಾರ ಬೆಳಗ್ಗೆ 5.30ರಿಂದ ಭರ್ತಿ ಮೂರು ತಾಸು ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದರು. ಜತೆಗೆ ಹಲವು ಕಾಮಗಾರಿಗಳನ್ನು ವೀಕ್ಷಿಸಿದರು. ಲೋಪ ಆಗಿರುವ ಕಡೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಉದ್ಯಾನ, ಯುಜಿಡಿ ಟ್ರೀಟ್​ವೆುಂಟ್ ಪ್ಲಾಂಟ್, ಕ್ರೀಡಾಂಗಣ, ಚರಂಡಿ, ರಸ್ತೆ ಎಲ್ಲವನ್ನೂ ವೀಕ್ಷಿಸಿದರು. ಸ್ಮಾರ್ಟ್​ಸಿಟಿ ಯೋಜನೆ ಸ್ಮಾರ್ಟ್ ಆಗಿ ನಡೆಯದೇ ಇದ್ದ ಕಡೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಹೊರಾಂಗಣ ಜಿಮ್ಲ್ಲಿ ಕೆಲಹೊತ್ತು ಉಲ್ಲಾಸದಿಂದ ವ್ಯಾಯಾಮ ಮಾಡಿದರು.

    ಕ್ರೀಡಾ ಸಮುಚ್ಚಯಕ್ಕೆ ಭೇಟಿ ನೀಡಿ ಮತ್ತಷ್ಟು ಸೌಲಭ್ಯ ಒದಗಿಸುವುದಾಗಿ ಪ್ರಕಟಿಸಿದರು. ಸಿದ್ದೇಶ್ವರ ನಗರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ವಿುಕರ ಸಮಸ್ಯೆಗಳನ್ನು ಸಹನೆಯಿಂದ ಆಲಿಸಿದರು. ಪುರಲೆ ಬಳಿ ನಿರ್ವಣವಾಗುತ್ತಿರುವ ಯುಜಿಸಿ ಟ್ರೀಟ್​ವೆುಂಟ್ ಪ್ಲಾಂಟ್ ಕೆಲಸವನ್ನು ಬೇಗ ಮುಗಿಸುವಂತೆ ಸೂಚಿಸಿದರು.

    ಡಿಎಚ್​ಎಸ್ ಮನೆಗೆ ಭೇಟಿ: ಬಿಜೆಪಿ ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ ನಿವಾಸಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್, ಡಿಎಚ್​ಎಸ್ ಅವರನ್ನು ಗೌರವಿಸಿ ಕೆಲ ಸಮಯ ಉಭಯ ಕುಶಲೋಪರಿ ವಿಚಾರಿಸಿದರು. ಶಿವಮೊಗ್ಗಕ್ಕೆ ತಾವು ಭೇಟಿ ನೀಡಿದ ಔಚಿತ್ಯ, ನಗರಪಾಲಿಕೆ ಹಾಗೂ ಸ್ಮಾರ್ಟ್​ಸಿಟಿ ಯೋಜನೆಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ನೀಡಲಾಗುವ ಸಹಕಾರದ ಬಗ್ಗೆ ಮಾಹಿತಿ ನೀಡಿದರು. ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts