More

    ನಗರಾಭಿವೃದ್ಧಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಗದಗ: ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್. ಅವರ ಮನೆ ಮತ್ತು ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿ 850 ಗ್ರಾಂ ಚಿನ್ನ ಮತ್ತು 1.35 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಅಕ್ರಮ ಸಂಪಾದನೆ ಮಾಡಿರುವ ಆರೋಪದಡಿ ಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಕ್ವಾರ್ಟರ್ಸ್​ನಲ್ಲಿರುವ ರುದ್ರೇಶ ಅವರ ಮನೆ, ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಮತ್ತು ಅವರ ಸ್ವಂತ ಗ್ರಾಮವಾದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಮನೆ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಚಿಕ್ಕಜಾಜೂರಿನ ಮನೆಯಲ್ಲಿ 700 ಗ್ರಾಂ ಚಿನ್ನ, 1.25 ಲಕ್ಷ ರೂ. ನಗದು ಮತ್ತು ಗದಗ ಸರ್ಕಾರಿ ಕ್ವಾರ್ಟರ್ಸ್ ಮನೆಯಲ್ಲಿ 150 ಗ್ರಾಂ ಚಿನ್ನ, 10 ಸಾವಿರ ರೂ. ನಗದು ದೊರೆತಿದೆ. ಜಿಲ್ಲಾಡಳಿತ ಭವನದಲ್ಲಿರುವ ಯೋಜನಾ ನಿರ್ದೇಶಕರ ಕಚೇರಿ ಮೇಲೆಯೂ ದಾಳಿ ಶೋಧ ನಡೆಸಲಾಗಿದೆ. ಅಕ್ರಮ ಸಂಪಾದನೆ ಆರೋಪದಡಿ ಮಾಹಿತಿ ಕಲೆ ಹಾಕಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಡಿವೈಎಸ್​ಪಿ ವಾಸುದೇವ ರಾಮ್ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.

    ದಾಳಿಯಲ್ಲಿ ಇನ್ಸ್​ಪೆಕ್ಟರ್​ಗಳಾದ ರವೀಂದ್ರ ಕುರುಬಗಟ್ಟಿ, ಧರಣಾ ನಾಯಕ, ಸುನೀಲ್​ಹಾಗೂ ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ಆರ್.ಎಚ್. ಹೆಬಸೂರ, ಎಂ.ಎನ್. ಕರಿಗಾರ, ಎನ್.ಎಸ್. ತಾಯಣ್ಣವರ, ವೀರೇಶ ಜೋಳದ, ಈರಣ್ಣ ಜಾಲಿಹಾಳ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts