More

    ನಂಜನಗೂಡು ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಶಾಸಕ ಬಿ.ಹರ್ಷವರ್ಧನ್ ಹೇಳಿಕೆ

    ನಂಜನಗೂಡು : ನಂಜನಗೂಡಿನ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಗುರಿಯಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.

    ತಾಲೂಕಿನ ಹೊರಳವಾಡಿ ಗ್ರಾಮದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

    ನನಗೆ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುವ ಇಚ್ಚಾಶಕ್ತಿಯಿದ್ದು, ಕ್ಷೇತ್ರದ ಮತದಾರರು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಗಮನಿಸಿ ಮರು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.


    ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ನಿರಂತರವಾಗಿ ಕ್ಷೇತ್ರ ಸಂಚಾರ ನಡೆಸುವ ಜತೆಗೆ ಮತದಾರರೊಡನೆ ಉತ್ತಮ ಬಾಂಧವ್ಯ ಹೊಂದಿ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ಅಕಾಲಿಕವಾಗಿ ಎದುರಾದ ಪ್ರವಾಹ ಹಾಗೂ ಕೊರೊನಾ ನಡುವೆಯೂ ಸಹ ಕ್ಷೇತ್ರಕ್ಕೆ 823 ಕೋಟಿ ರೂ. ಅನುದಾನ ತಂದಿದ್ದೇನೆ ಎಂದರು.


    ನಂಜನಗೂಡನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುವ ಕನಸಿದ್ದು, ಕ್ಷೇತ್ರದ ರೈತರ ಮೂರು ದಶಕಗಳ ಬೇಡಿಕೆಯಾಗಿದ್ದ ನುಗು ಏತ ನಿರಾವರಿ ಯೋಜನೆಯನ್ನು ಸಾಕಾರಗೊಳಿಸಿದ್ದೇನೆ. ಅಲ್ಲದೆ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಅಥಿತಿಗೃಹ, ಬೆಳ್ಳಿರಥ ನಿರ್ಮಾಣದಂತಹ ಶಾಶ್ವತ ಕೆಲಸಗಳನ್ನು ಮಾಡಿದ್ದೇನೆ. ದೇವಾಲಯದ ಅನುದಾನದಲ್ಲಿ 13 ಸಣ್ಣಪುಟ್ಟ ಅಶಕ್ತ ಸಮಾಜಗಳಿಗೆ ಅನುದಾನ ನೀಡಿ ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದೇನೆ ಎಂದು ತಿಳಿಸಿದರು.


    300 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಈ ಭಾಗದ ನೇತಾರರಾಗಿರುವ ವಿ.ಶ್ರೀನಿವಾಸ ಪ್ರಸಾದ್ ಅವರು ಪ್ರಚಾರಕ್ಕೆ ಬರುವ ಕೊನೆಯ ಚುನಾವಣೆಯಾಗಿರುವ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಉಡುಗೊರೆ ನೀಡುವ ಮೂಲಕ ಅವರಿಗೆ ಗೌರವಯುತ ನಿವೃತ್ತಿ ನೀಡಲು ಮತದಾರರು ಸಂಕಲ್ಪ ಹೊಂದಬೇಕು. ಹೀಗಾಗಿ ಮತ್ತೊಮ್ಮೆ ಕ್ಷೇತ್ರದ ಮತದಾರರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.


    ಹೊರಳವಾಡಿ ಗ್ರಾ.ಪಂ. ಅಧ್ಯಕ್ಷ ರಮೇಶ್, ಗ್ರಾ.ಪಂ. ಸದಸ್ಯ ಮಹೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್, ತಾ.ಪಂ.ಮಾಜಿ ಸದಸ್ಯ ಬಿ.ಎಸ್.ರಾಮು, ಹೆಮ್ಮರಗಾಲ ಶಿವಣ್ಣ, ಹೊರಳವಾಡಿ ಸುರೇಶ್, ಹೆಮ್ಮರಗಾಲ ಸೋಮಣ್ಣ, ಗೋವರ್ಧನ್, ಜಿ.ಬಸವರಾಜು, ಸೌಭಾಗ್ಯ ರಾಮಚಂದ್ರು, ಮುಖಂಡರಾದ ಮಂಡ್ಯಮಹದೇವು, ನವೀನ್‌ರಾಜ್, ನಾಗಣ್ಣ, ಗಂಗಾಧರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts