More

    ಧಾರ್ವಿುಕ ಚಿಂತನೆಯಿಂದ ಮನಸ್ಸು ಪರಿಶುದ್ಧ

    ಶಿಕಾರಿಪುರ: ಧರ್ಮ ಮಾರ್ಗವೆಂದರೆ ಅದು ರಾಜ ಮಾರ್ಗ. ಧಾರ್ವಿುಕ ಚಿಂತನೆಗಳಿಂದ ನಾವು ಪರಿಶುದ್ಧರಾಗುತ್ತೇವೆ. ಸಹೃದಯತೆ, ಸಹಬಾಳ್ವೆ, ಸಾಮರಸ್ಯದಿಂದ ಬಂಧಿಸಲ್ಪಡುತ್ತೇವೆ ಎಂದು ತಹಸಿಲ್ದಾರ್ ಎಂ.ಪಿ ಕವಿರಾಜ್ ಹೇಳಿದರು.

    ಸಮೀಪದ ತೊಗರ್ಸಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವ ಅಂಗವಾಗಿ ಏರ್ಪಡಿಸಿದ್ದ 47ನೇ ವರ್ಷದ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೊಗರ್ಸಿ ಜಾತ್ರೆಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿನ ಎರಡೂ ಮಠಗಳ ಪೂಜ್ಯರ ಸಮಾಜಮುಖಿ ಚಿಂತನೆಗಳು ಅದ್ಭುತ ಎಂದು ಬಣ್ಣಿಸಿದರು.

    ನಾವು ಗುರು ಪರಂಪರೆಯ ಹಾದಿಯಲ್ಲಿ ಸಾಗಬೇಕು. ಗುರುವಿಲ್ಲದೆ ಗುರಿ ಅಸಾಧ್ಯ. ನಾಡಿನ ಇತಿಹಾಸ ಮೆಲುಕು ಹಾಕಿದರೆ ಈ ಮಣ್ಣಿನ ಶ್ರೇಷ್ಠತೆಯ ಅರಿವು ಉಂಟಾಗುತ್ತದೆ. ಜಾತ್ರೆ, ಉತ್ಸವಗಳು ನಮ ್ಮಂಸ್ಕೃತಿ, ಸಂಪ್ರದಾಯ, ಪರಂಪರೆಗಳ ಸಾಕ್ಷಿ ರೂಪ ಎಂದರು.

    ಇತಿಹಾಸ ಅಕಾಡೆಮಿ ಸದಸ್ಯ ರಮೇಶ್ ಹಿರೇಜಂಬೂರು ಮಾತನಾಡಿ, ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸ ಶಾಸನಗಳಲ್ಲಿ ಕಂಡು ಬರುತ್ತಿದೆ. ಬನವಾಸಿ ಅರಸರು 4,000 ಗೋವುಗಳನ್ನು ಇಲ್ಲಿಗೆ ದಾನ ನೀಡಿದ ಶಾಸನ ಲಭ್ಯವಿದೆ. ತೊಗರ್ಸಿ ಸರ್ವಧರ್ಮ ಸಮನ್ವತೆಯ ತಾಣ. 12ನೇ ಶತಮಾನದ ಶರಣ ಶರಣೆಯರಿಗೆ ಅಧ್ಯಾತ್ಮ ಚಿಂತನೆ, ಸಾಮಾಜಿಕ ಕಳಕಳಿ ತಂದುಕೊಟ್ಟ ಮಣ್ಣಿದು ಎಂದರು.

    ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ನಮಗೆ ಮಠಮಂದಿರಗಳು, ಗುರುಗಳ ಸಂಪರ್ಕ ಕಡಿಮೆ ಆಗುತ್ತಿದೆ. ಗುರುವಿನ ಅನುಗ್ರಹದಿಂದ ಮನಸ್ಸು ನಿರ್ಮಲವಾಗುತ್ತದೆ. ಸದ್ವಿಚಾರಗಳ ಉಗಮವಾಗುತ್ತದೆ. ಸಹನೆ, ಶಾಂತಿ ಮಂತ್ರವನ್ನು ಗುರುವು ನಮಗೆ ಅನುಗ್ರಹಿಸುತ್ತಾನೆ ಎಂದು ಹೇಳಿದರು.

    ಕೂಡ್ಲಿ ಸಂಸ್ಥಾನ ಮಠದ ವಿದ್ವಾನ್ ಶ್ರೀ ಸಿದ್ಧವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರೇಮಾಗಡಿಯ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು, ತೊಗರ್ಸಿ ಮಳೆಹಿರೇಮಠದ (ಹಿರಿಯ) ಮಹಾಂತ ದೇಶಿಕೇಂದ್ರ ಶ್ರೀಗಳು ಹಾಗೂ ಕಿರಿಯ ಮಹಾಂತದೇಶಿ ಕೇಂದ್ರ ಶ್ರೀಗಳು, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರದೇಶಿಕೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

    ಬಿಇಒ ಉಮಾಮಹೇಶ್, ಸಿಪಿಐ ಬಸವರಾಜ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್, ನಿವೃತ್ತ ಪ್ರಾಚಾರ್ಯ ಎಚ್.ವಿ.ಪಂಚಾಕ್ಷರಯ್ಯ ಹಿರೇಮಠ, ವಿದ್ವಾನ್ ಡಾ. ಸಿ.ರೇಣುಕಾರಾಧ್ಯ, ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾ ಕಾರ್ಯವಾಹ ಕುಮಾರಸ್ವಾಮಿ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts