More

    ಧಾರವಾಡ ಜಿಲ್ಲೆಯ ಸಂಸ್ಕೃತಿ ಅನಾವರಣ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಸಂಸ್ಕೃತಿ, ಪ್ರೇಕ್ಷಣೀಯ ಸ್ಥಳ, ಆಹಾರ ಪದ್ಧತಿ, ಜೀವನ ಶೈಲಿ ಮತ್ತಿತರ ಸಂಗತಿಗಳ ಬಗ್ಗೆ ಮಾಹಿತಿ ನೀಡುವ 152 ಪುಟಗಳ ‘ಡ್ಯಾಜಿಲಿಂಗ್ ಧಾರವಾಡ’ ಕಾಫಿ ಟೇಬಲ್ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಈ ಪುಸ್ತಕದಿಂದ ಜಿಲ್ಲೆಯ ಸಂಪೂರ್ಣ ವಿವರ ದೊರೆಯಲಿದೆ. ಇಲ್ಲಿನ ಮಲೆನಾಡು, ಬಯಲು ಸೀಮೆಯ ವಿವರ, ಸಾಹಿತಿಗಳು, ಕಲಾವಿದರಾದ ಪಂ. ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ದ.ರಾ. ಬೇಂದ್ರೆ, ಗಿರೀಶ ಕಾರ್ನಾಡ್, ಬೆಟಗೇರಿ ಆನಂದ ಶರ್ಮ ಇತರರ ಬಗ್ಗೆ ವಿವರಗಳು ಇವೆ. ಧಾರವಾಡ ಪೇಢೆ, ಗಿರ್ವಿುಟ್, ಮಿರ್ಚಿ, ಸಾವಜಿ ಖಾನಾವಳಿಯ ಬಗ್ಗೆಯೂ ಮಾಹಿತಿ ಇದರಲ್ಲಿದೆ. ಜಿಲ್ಲೆಯ ಧಾರ್ವಿುಕ ಕೇಂದ್ರಗಳು, ಅಪರೂಪದ ವನ್ಯಜೀವಿಗಳ ಉತ್ತಮ ಛಾಯಾಚಿತ್ರಗಳನ್ನು ವಿವರಣೆಗಳೊಂದಿಗೆ ನೀಡಲಾಗಿದೆ. ಈ ಪುಸ್ತಕವನ್ನು ದೇಶದ ಪ್ರಮುಖ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಇಡಲಾಗುವುದು. ಆ ಮೂಲಕ ಪ್ರವಾಸಿಗರನ್ನು ಜಿಲ್ಲೆಯೆಡೆ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಇಂಗ್ಲಿಷ್ ಅವತರಣಿಕೆಯ ಡ್ಯಾಜಿಲಿಂಗ್ ಧಾರವಾಡ ಕಾಫಿ ಟೇಬಲ್ ಬುಕ್ ಅನ್ನು ಕನ್ನಡದಲ್ಲಿಯೂ ಮುದ್ರಿಸಲಾಗುವುದು. ಈ ಪುಸ್ತಕ ರಚನೆಗಾಗಿ 17 ವಿಷಯ ತಜ್ಞರು, 15 ಛಾಯಾಗ್ರಾಹಕರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಪುಸ್ತಕದಲ್ಲಿ ಸುಮಾರು 313 ಅಪರೂಪದ ಫೋಟೋಗಳಿವೆ. ಸದ್ಯ ಒಂದು ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ ಎಂದರು.

    ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts