More

    ಧಾರವಾಡ ಜಿಲ್ಲೆಯಲ್ಲಿ 279 ಜನರಿಗೆ ಕರೊನಾ

    ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 279 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 11314ಕ್ಕೇರಿದೆ. ಒಟ್ಟು 8678 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2312 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ನಿಂದ ಮತ್ತೆ 8 ಜನ ಮೃತಪಟ್ಟಿದ್ದಾರೆ. ಒಟ್ಟು ಸಾವಿಗೀಡಾದವರ ಸಂಖ್ಯೆ 325ಕ್ಕೆ ಜಿಗಿದಿದೆ.

    ಸೋಮವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ತಾಲೂಕಿನಲ್ಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ ಸುಮಾರು 50 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿ ಅಂದಾಜು 60 ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ.

    ಕಲಘಟಗಿ ತಾಲೂಕಿನ ಹುಲಿಕಟ್ಟಿ ಗ್ರಾಮ, ಎಮ್ಮೆಟ್ಟಿ; ನವಲಗುಂದದ ಕುಲಕರ್ಣಿ ಓಣಿ, ಜನತಾ ಪ್ಲಾಟ್, ಪಡೇಸೂರ, ಮೊರಬ; ಕುಂದಗೋಳದ ಕಿಲ್ಲೆ ಓಣಿ ನೀರಿನ ಟಾಕಿ ಹತ್ತಿರ, ಬರದ್ವಾಡ, ಗುಡಗೇರಿ, ಬೂದಿಹಾಳ, ತರ್ಲಘಟ್ಟ, ಬೆಟದೂರ; ಅಣ್ಣಿಗೇರಿಯ ಅಮೃತೇಶ್ವರ ಗುಡಿ ಹತ್ತಿರ, ಹೊಸಪೇಟೆ ಓಣಿ, ಮಣಕವಾಡಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಸುತ್ತಮುತ್ತಲಿನ ಜಿಲ್ಲೆಗಳ 10ಕ್ಕೂ ಅಧಿಕ ಜನರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

    ಕರೊನಾ ಸೋಂಕಿತ ಆತ್ಮಹತ್ಯೆ
    ಧಾರವಾಡ:
    ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಅಳ್ನಾವರ ತಾಲೂಕಿನ ಡೋರಿ ಗ್ರಾಮದ ಅಲ್ಲಾಭಕ್ಷ ನದಾಫ್ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮುಖ ತೊಳೆದುಕೊಂಡು ಬರುವುದಾಗಿ ಹೇಳಿ ತೆರಳಿದ್ದ ಈತ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts