More

    ಧಾರವಾಡದಲ್ಲಿ ವೃಕ್ಷಾ ಬಂಧನ

    ಧಾರವಾಡ: ಸಸ್ಯ ಸಂರಕ್ಷಣೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಗರ ಅರಣ್ಯ ವಿಭಾಗದ ವತಿಯಿಂದ ವೃಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಆಚರಿಸಲಾಗುತ್ತಿದೆ.

    ಪ್ರತಿ ವರ್ಷ ವಿಶ್ವ ಪರಿಸರ ದಿನ ಸಂದರ್ಭದಲ್ಲಿ ಸಹಸ್ರಾರು ಸಸಿಗಳನ್ನು ನೆಡಲಾಗುತ್ತದೆ. ನಂತರ ಅವುಗಳ ರಕ್ಷಣೆ, ಪೋಷಣೆಗೆ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲು ಅರಣ್ಯ ವಿಭಾಗದ ಅಧಿಕಾರಿಗಳು ಟ್ವಿಟರ್, ಫೇಸ್ ಬುಕ್, ಇನ್​ಸ್ಟಾಗ್ರಾಂ, ರೇಡಿಯೋ ಮತ್ತಿತರ ಮಾಧ್ಯಮಗಳ ಮೂಲಕ ರಕ್ಷಾ ಬಂಧನ ದಿನದಂದು ವೃಕ್ಷಾ ಬಂಧನ ಆಚರಿಸಲು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಅನೇಕರು ಜಿಲ್ಲೆಯ ಹಲವೆಡೆ ವೃಕ್ಷಾ ಬಂಧನ ಆಚರಿಸಿ ಸಹಮತ ವ್ಯಕ್ತಪಡಿಸಿದ್ದಾರೆ.

    ಇಲಾಖೆಯ ಮನವಿಗೆ ಸ್ಪಂದಿಸಿದ ಜನರು ತಮ್ಮ ಸುತ್ತಲಿನ ಪ್ರದೇಶದಲ್ಲಿಯ ಗಿಡ, ಮರಳಿಗೆ ರಾಖಿ ಕಟ್ಟುವ ಮೂಲಕ ಅವುಗಳ ರಕ್ಷಣೆ ಹಾಗೂ ಪಾಲನೆಯ ಜವಾಬ್ದಾರಿ ತಮ್ಮದು ಎಂದು ಸಾರಿದ್ದಾರೆ. ಸಸಿ ನೆಡುವುದಷ್ಟೇ ಅಲ್ಲ, ಅದರ ರಕ್ಷಣೆ, ಪೋಷಣೆ ಅದಕ್ಕಿಂತ ಮುಖ್ಯ ಎಂಬುದನ್ನು ಪ್ರಚುರಪಡಿಸಲು ವೃಕ್ಷಾ ಬಂಧನ ಸಹಕಾರಿಯಾಗಿದೆ. ಗಿಡಮರ, ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ವೃಕ್ಷಾ ಬಂಧನ ಒಂದು ವಿನೂತನ ಮಾರ್ಗವಾಗಿದೆ ಎಂದು ಎಂದು ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts